ಭಾರತೀಯ ರೈಲ್ವೇಯ ವಂದೇ ಮಾತರಂ ಯೋಜನೆ : ಲಾತೂರ್‌ನಲ್ಲಿ 100 ರೈಲು ನಿರ್ಮಾಣ
Team Udayavani, Oct 5, 2022, 10:50 AM IST
ಮುಂಬಯಿ : ಭಾರತೀಯ ರೈಲ್ವೇ ಮುಂದಿನ ಕೆಲವು ವರ್ಷಗಳಲ್ಲಿ ದೇಶಾದ್ಯಂತ 400 ವಂದೇ ಭಾರತ್ ರೈಲುಗಳನ್ನು ಪರಿಚಯಿಸಲಿದ್ದು, ಅದರಲ್ಲಿ 100 ರೈಲುಗಳು ಮಹಾರಾಷ್ಟ್ರದ ಲಾತೂರ್‌ನಲ್ಲಿರುವ ರೈಲ್ ಕೋಚ್ ಫ್ಯಾಕ್ಟರಿಯಲ್ಲಿ ನಿರ್ಮಾಣಗೊಳ್ಳಲಿದೆ.
ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಔರಂಗಾಬಾದ್‌ನಲ್ಲಿ ರೈಲ್ವೇ ನಿಲ್ದಾಣದಲ್ಲಿ ಕೋಚ್ ನಿರ್ವಹಣ ಸೌಲಭ್ಯಕ್ಕೆ ಶಂಕುಸ್ಥಾಪನೆ ಸಮಾರಂಭದಲ್ಲಿ ಇದನ್ನು ಘೋಷಿಸಿದರು. ಔರಂಗಾಬಾದ್ ನಿಲ್ದಾಣದಲ್ಲಿನ ನಿರ್ವಹಣ ಸೌಲಭ್ಯವು ರೈಲುಗಳ ನಿರ್ವಹಣೆಯನ್ನು ಸುಗಮ ಗೊಳಿಸುವುದಲ್ಲದೆ ಹೆಚ್ಚಿನ ಪ್ರಯಾಣಿಕರ ಮತ್ತು ಪಾರ್ಸೆಲ್ ರೈಲುಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಮರಾಠವಾಡ ಪ್ರದೇಶದ ಜನರಿಗೆ ರೈಲು ಸಂಪರ್ಕವನ್ನು ಬಲಪಡಿಸುತ್ತದೆ ಮತ್ತು ಸರಕು ಸಾಗಣೆ ಗ್ರಾಹಕರಿಗೆ ಪ್ರಯೋಜನವನ್ನು ನೀಡುತ್ತದೆ. ಹೊಸ ಪಿಟ್‌ಲೆàನ್ ವಂದೇ ಭಾರತ್ ರೈಲುಗಳ ನಿಗದಿತ ನಿರ್ವಹಣೆಗೆ ಅನುಕೂಲವಾಗಬಹುದು ಎಂದು ವೈಷ್ಣವ್ ಹೇಳಿದ್ದಾರೆ.
ಮರಾಠವಾಡ ರೈಲ್ ಕೋಚ್ ಫ್ಯಾಕ್ಟರಿಯು ಆಧುನಿಕ ಕೈಗಾರಿಕಾ ಪರಿಸರ ವ್ಯವಸ್ಥೆಯನ್ನು ಘೋಷಿಸುವ ಮೂಲಕ ಮಹಾರಾಷ್ಟ್ರದ ಒಟ್ಟಾರೆ ಅಭಿವೃದ್ಧಿಗೆ ಗಣನೀಯವಾಗಿ ಕೊಡುಗೆ ನೀಡಲಿದೆ ಎಂದು ರೈಲ್ವೇ ಅಧಿಕಾರಿಯೊಬ್ಬರು ಹೇಳಿದರು. ಕಾರ್ಖಾನೆಯನ್ನು 250 ಎಂವಿಎಂಯು ತಯಾ ರಿಕೆಯ ಆರಂಭಿಕ ಸಾಮರ್ಥ್ಯದೊಂದಿಗೆ ವಿನ್ಯಾಸ ಗೊಳಿಸಲಾಗುವುದು. ಲೇಔಟ್ ಯೋಜನೆಯಲ್ಲಿ ಸಾಕಷ್ಟು ಖಾಲಿ ಜಾಗವನ್ನು ಗುರುತಿಸಿರುವುದರಿಂದ ಅದರ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಬಹುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಕಾರ್ಖಾನೆಯು 350 ಎಕರೆ ಪ್ರದೇಶದಲ್ಲಿ 52,000 ಚದರ ಮೀಟರ್‌ಗಳಲ್ಲಿ ನಿರ್ಮಾಣಗೊಳ್ಳಲಿದ್ದು, ಪೂರ್ವ ಎಂಜಿನಿಯರಿಂಗ್ ಕಟ್ಟಡದ ಶೆಡ್‌ಗಳು, ಮೂರು ರೈಲು ಮಾರ್ಗಗಳೊಂದಿಗೆ ಯಾರ್ಡ್, ವಸತಿ ಕಾಲನಿ ಸಹಿತ ಸರ್ವ ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ರಾವಾÕಹೇಬ್ ಪಾಟೀಲ್ ದಾನ್ವೆ ಹೇಳಿದ್ದಾರೆ.
ಇದನ್ನೂ ಓದಿ : ಶಿವಸೇನೆಯ ಎರಡು ಬಣಗಳ ಮೇಲಾಟ : ಇಂದು ಎರಡು ಪ್ರತ್ಯೇಕ ದಸರಾ ರ್‍ಯಾಲಿ, ಪೊಲೀಸ್ ಸರ್ಪಗಾವಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.