African Elephants: ವಂಟಾರಕ್ಕೆ ಆಗಮಿಸಲಿವೆ ಆಫ್ರಿಕಾದ 3 ಆನೆಗಳು
Team Udayavani, Nov 6, 2024, 10:03 PM IST
ಜಾಮ್‌ನಗರ: ಉದ್ಯಮಿ ಅನಂತ್ ಮುಕೇಶ್ ಅಂಬಾನಿ ಗುಜರಾತ್‌ನ ಜಾಮ್‌ನಗರದಲ್ಲಿ ಸ್ಥಾಪಿಸಿದ ಪ್ರತಿಷ್ಠಿತ ವನ್ಯಜೀವಿ ರಕ್ಷಣ ಕೇಂದ್ರವಾದ ವಂಟಾರಕ್ಕೆ ಶೀಘ್ರದಲ್ಲಿ ದಕ್ಷಿಣ ಆಫ್ರಿಕಾದ ಮೂರು ಆನೆಗಳು ಆಗಮಿಸಲಿವೆ. 28 ಮತ್ತು 29 ವರ್ಷದ ಎರಡು ಹೆಣ್ಣು ಮತ್ತು ಒಂದು ಗಂಡು ಆನೆ ವಾಂಟಾರದಲ್ಲಿನ ಹೊಸ ಮನೆಯಲ್ಲಿ ಕಾಲ ಕಳೆಯಲಿವೆ.
ಎರಡು ದಶಕಗಳ ಹಿಂದೆ 4 ವರ್ಷ ವಯಸ್ಸಿನ 3 ಆನೆಗಳನ್ನು ಪಶ್ಚಿಮ ಆಫ್ರಿಕಾದ ಬುರ್ಕಿನಾ ಫಾಸೊದಿಂದ ಟ್ಯುನೀಶಿಯಾದ ಫ್ರಿಗುಯಾ ಪಾರ್ಕ್‌ಗೆ ವರ್ಗಾಯಿಸಲಾಗಿತ್ತು. ಅಲ್ಲಿ ಅವು ಸುಮಾರು 23 ವರ್ಷಗಳಿಂದ ಇದ್ದವು. ಆರ್ಥಿಕ ನಿರ್ಬಂಧಗಳಿಂದಾಗಿ ಆನೆಗಳ ಸಂಕೀರ್ಣ ಆಹಾರಕ್ರಮ, ವಸತಿ ಮತ್ತು ಪಶುವೈದ್ಯ ಅಗತ್ಯತೆಗಳನ್ನು ಪೂರೈಸಲು ಹೆಣಗಾಡುತ್ತಿರುವ ಫ್ರಿಗುಯಾ ಪಾರ್ಕ್ ಆನೆಗಳ ಪೋಷಣೆಗಾಗಿ “ವಂಟಾರ’ದ ನೆರವು ಕೋರಿತ್ತು. ಅದರಂತೆ “ವಂಟಾರಾ’ ಮೃಗಾಲಯವು ಈ ಆನೆಗಳನ್ನು ಭಾರತಕ್ಕೆ ತರಿಸಿಕೊಳ್ಳಲು ಸಿದ್ಧವಾಗಿದೆ.
ಅಗತ್ಯವಿರುವ ಅಂತಾರಾಷ್ಟ್ರೀಯ ಮಟ್ಟದ ಕಾನೂನಾತ್ಮಕ ಆವಶ್ಯಕತೆಗಳನ್ನೆಲ್ಲ ಪೂರೈಸಲಾಗಿದ್ದು, ಆನೆಗಳನ್ನು ಚಾಟರ್ಡ್ ಕಾರ್ಗೋ ವಿಮಾನದ ಮೂಲಕ ಭಾರತಕ್ಕೆ ತರಲಾಗುತ್ತದೆ.
ವಂಟಾರದ ಪಶುವೈದ್ಯ ತಜ್ಞರು ಇತ್ತೀಚಿನ ಈ ಆನೆಗಳ ಆರೋಗ್ಯ ಮೌಲ್ಯಮಾಪನ ಮಾಡಿದ್ದು ಆನೆಗಳು ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದು ತಿಳಿಸಿದ್ದಾರೆ. ಸಂಸ್ಕರಿಸಲ್ಪಡದ ಚರ್ಮ ಪರಿಸ್ಥಿತಿಗಳು, ಕೂದಲು ಉದುರುವಿಕೆ ಮತ್ತು ಸ್ಥಿರವಾದ ವೈದ್ಯಕೀಯ ಆರೈಕೆಯ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ. ಒತ್ತಿಹೇಳಿದವು. ಆನೆಗಳು ಇಲ್ಲಿಗೆ ಬಂದ ಬಳಿಕ ತಜ್ಞರ ಉಸ್ತುವಾರಿಯಲ್ಲಿ ಆರೋಗ್ಯ ನೋಡಿಕೊಳ್ಳಲಾಗುತ್ತದೆ. “ಸ್ಟಾರ್‌ಆಫ್ ದಿ ಫಾರೆಸ್ಟ್’ ಎಂಬರ್ಥದ “ವಂಟಾರಾ’ ಮೃಗಾಲಯವು ಜಾಮ್‌ನಗರದ 3 ಸಾವಿರ ಎಕರೆ ಪ್ರದೇಶದಲ್ಲಿದೆ. ಇದನ್ನು ಸಾಮಾನ್ಯವಾಗಿ ಗುಜರಾತ್‌ನ ಗ್ರೀನ್ ಬೆಲ್ಟ್ ಎಂದು ಕರೆಯಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ನಮಗೆ ಯಾರೇ ಎದುರಾಳಿಯಾದ್ರೂ 2026ರಲ್ಲಿ ಗೆಲ್ಲೋದು ನಾವೇ: ಡಿಸಿಎಂ ಉದಯನಿಧಿ
BJP,ಮೋದಿ ಸಾಂವಿಧಾನಿಕ ಮೌಲ್ಯಗಳ ನಾಶಕ್ಕೆ ಯತ್ನಿಸುತ್ತಿದ್ದಾರೆ: ಪ್ರಿಯಾಂಕಾ ಕಿಡಿ
Jaipur; ರಾಷ್ಟ್ರೀಯ ಉದ್ಯಾನವನದಿಂದ ಭಾರೀ ಸಂಖ್ಯೆಯ ಹುಲಿಗಳು ನಾಪತ್ತೆ!
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.