ವಾರಾಣಸಿಯಲ್ಲಿ ಫೈ ಓವರ್ ಕುಸಿದು 18 ಮಂದಿ ಸಾವು
Team Udayavani, May 16, 2018, 6:20 AM IST
ನವದೆಹಲಿ/ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಿರ್ಮಾಣ ಹಂತದಲ್ಲಿರುವ ಫ್ಲೈ ಓವರ್ ಕುಸಿದು ಬಿದ್ದ ಪರಿಣಾಮವಾಗಿ 18 ಮಂದಿ ಅಸುನೀಗಿದ್ದಾರೆ. ಇತರ ಹಲವಾರು ಮಂದಿ ಗಾಯಗೊಂಡಿದ್ದಾರೆ. 18ಕ್ಕೂ ಅಧಿಕ ಮಂದಿ ಅವಶೇಷಗಳ ಎಡೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.
ಎರಡು ಪಿಲ್ಲರ್‌ಗಳು ಕುಸಿದ ಕಾರಣ ಈ ಘಟನೆ ನಡೆದಿದೆ. ವಾರಾಣಸಿಯ ದಂಡು ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಒಂದು ಬಸ್,ಹಲವಾರು ಕಾರುಗಳು ಅವಶೇಷಗಳ ಎಡೆಯಲ್ಲಿದೆ.
ಸುದ್ದಿ ತಿಳಿದ ತಕ್ಷಣ ಫೈಜಾಬಾದ್ ಜಿಲ್ಲಾಡಳಿತ, ರಾಷ್ಟೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಆರ್‌ಎಫ್)ದ
ಸಿಬ್ಬಂದಿ ಮತ್ತು ಹಿರಿಯ ಅಧಿಕಾರಿಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಗ್ಯಾಸ್ ಕಟ್ಟರ್‌ಗಳನ್ನು ಬಳಕೆ ಮಾಡಿಕೊಂಡು ಕಾಂಕ್ರಿಟ್ ಪಿಲ್ಲರ್‌ಗಳನ್ನು ತುಂಡು ಮಾಡಿ ತೆಗೆಯುವ ಕಾರ್ಯ
ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಘಟನೆಯ ಬಗ್ಗೆ ಶೋಕ ವ್ಯಕ್ತಪಡಿಸಿದ್ದಾರೆ. ಜತೆಗೆ ಉತ್ತರ ಪ್ರದೇಶ
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜತೆಗೆ ಫೋನ್‌ನಲ್ಲಿ ಮಾತನಾಡಿ ತಾಜಾ ಮಾಹಿತಿ ಪಡೆದುಕೊಂಡಿದ್ದಾರೆ.
ಉತ್ತರ ಪ್ರದೇಶ ಸರ್ಕಾರದ ನಿರ್ಮಾಣ ಸಂಸ್ಥೆಯೇ ಕಾಮಗಾರಿ ಉಸ್ತುವಾರಿ ವಹಿಸಿಕೊಂಡಿದೆ. ಘಟನೆಯ
ಬಗ್ಗೆ ತನಿಖೆ ನಡೆಸಿ 48 ಗಂಟೆಗಳಲ್ಲಿ ವರದಿ ನೀಡುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚೆನ್ನೈ ಲೈಂಗಿಕ ಕಿರುಕುಳ ಕೇಸ್: ಎಸ್ಐಟಿ ತನಿಖೆಗೆ ಹೈಕೋರ್ಟ್ ಆದೇಶ
Pinarayi Vijayan: ಸಿಂಗ್ ಅಂತ್ಯಕ್ರಿಯೆ ವೇಳೆ ಬೇರೆ ಕಾರ್ಯಕ್ರಮದಲ್ಲಿ ಪಿಣರಾಯಿ ಭಾಗಿ
Manmohan Singh ವಿಚಾರದಲ್ಲಿ ಕಾಂಗ್ರೆಸ್ ಅಗ್ಗದ ರಾಜಕಾರಣ ಮಾಡುತ್ತಿದೆ: ಬಿಜೆಪಿ
ED ಅಧಿಕಾರಿ ಒಳಗೊಂಡ ಲಂಚ ಪ್ರಕರಣ; ಸಿಬಿಐನಿಂದ ಮಧ್ಯವರ್ತಿ ಬಂಧನ
Actor; ಖ್ಯಾತ ನಟಿ ಉರ್ಮಿಳಾ ಕೊಠಾರೆ ಅವರ ಕಾರು ಹರಿದು ಓರ್ವ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.