Train: ವಾಸ್ಕೊ-ಸೊಲ್ಲಾಪುರ ನಡುವೆ ಶೀಘ್ರದಲ್ಲೇ ರೈಲು ಸಂಚಾರ: ಪ್ರವೀಣಕುಮಾರ್ ಶೆಟ್ಟಿ
Team Udayavani, Nov 28, 2023, 4:39 PM IST
ಪಣಜಿ: ವಾಸ್ಕೊ-ಸೊಲ್ಲಾಪುರ ರೈಲು ಓಡಾಟ ಆರಂಭಿಸಲು ಪ್ರಯತ್ನ ನಡೆಸಲಾಗಿದೆ, ಶೀಘ್ರದಲ್ಲಿಯೇ ಈ ಮಾರ್ಗಕ್ಕೆ ರೈಲು ಓಡಾಟ ಆರಂಭಗೊಳ್ಳಲಿದೆ. ಗೋವಾದಿಂದ ಉತ್ತರ ಕರ್ನಾಟಕದ ಹಲವು ಭಾಗಗಳಿಗೆ ತೆರಳಲು ಗೋವಾದಿಂದ ಕೆಎಸ್ ಆರ್ ಟಿಸಿ ಹಲವು ಬಸ್ ಬಂದ್ ಆಗಿದ್ದು, ಈ ಬಸ್‍ಗಳ ಓಡಾಟ ಪುನರಾರಂಭಿಸಲು ಕರ್ನಾಟಕ ಸರ್ಕಾರದ ಬಳಿ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣಕುಮಾರ್ ಶೆಟ್ಟಿ ನುಡಿದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಕರ್ನಾಟಕ ರಕ್ಷಣಾ ವೇದಿಕೆ ಗೋವಾ ಇವರ ಸಂಯುಕ್ತ ಆಶ್ರಯದಲ್ಲಿ ಗೋವಾ ವಾಸ್ಕೊದ ರೈಲ್ವೆ ಕಮ್ಯುನಿಟಿ ಹಾಲ್‍ನಲ್ಲಿ ಆಯೋಜಿಸಿದ್ದ ಹೊರನಾಡು ಗೋವಾ ಕರ್ನಾಟಕ ರಾಜ್ಯೋತ್ಸವ-2023 ಕಾರ್ಯಕ್ರಮದ ಉಧ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಗೋವಾದ ಬೈನಾ ನಿರಾಶ್ರಿತ ಕನ್ನಡಿಗರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಿಕೊಡಲು ಕರ್ನಾಟಕ ಸರ್ಕಾರದ ಬಳಿ ಹಲವು ಬಾರಿ ಮನವಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟ ಮುಂದುವರೆಯಲಿದೆ. ಶೀಘ್ರವೇ ಗೋವಾ ಬೈನಾ ನಿರಾಶ್ರಿತರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಿ ಲಭಿಸುವ ವಿಶ್ವಾಸವಿದೆ. ಅಂತೆಯೇ ಗೋವಾದಲ್ಲಿ ಶ್ರೀ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆಗೆ ಸರ್ಕಾರದಿಂದ ಜಾಗ ಪಡೆದು ಮೂರ್ತಿ ಸ್ಥಾಪನೆ ಮಾಡಲಾಗುವುದು. ಗೋವಾ ಕನ್ನಡಿಗರ ಎಲ್ಲ ಸಮಸ್ಯೆಗೆ ಕರ್ನಾಟಕ ರಕ್ಷಣಾ ವೇದಿಕೆ ಬೆನ್ನೆಲುಬಾಗಿ ನಿಲ್ಲಲಿದೆ. ಗೋವಾದಲ್ಲಿ ರಕ್ಷಣಾ ವೇದಿಕೆ ಸಂಘಟನೆಯನ್ನು ತಾಲೂಕಾ ಮಟ್ಡದಲ್ಲಿಯೂ ಸ್ಥಾಪಿಸಲಾಗುತ್ತಿದ್ದು, ರಕ್ಷಣಾ ವೇದಿಕೆ ಗೋವಾ ಕನ್ನಡಿಗರ ಪರವಾಗಿ ನಿಂತಿದೆ ಎಂದು ರಾಜ್ಯಾಧ್ಯಕ್ಷ ಪ್ರವೀಣಕುಮಾರ್ ಶೆಟ್ಟಿ ನುಡಿದರು.
ವೇದಿಕೆಯ ಮೇಲೆ ಉಪಸ್ಥಿತರಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಗೋವಾ ರಾಜ್ಯಾಧ್ಯಕ್ಷ ಮಂಜು ನಾಟೀಕರ್ ಮಾತನಾಡಿ- ಕರ್ನಾಟಕ ರಕ್ಷಣಾ ವೇದಿಕೆ ಗೋವಾ ಕನ್ನಡಿಗರ ಪರವಾಗಿ ಸದಾ ಹೋರಾಟ ನಡೆಸುತ್ತಾ ಬಂದಿದೆ. ಸರ್ಕಾರದ ಸವಲತ್ತುಗಳನ್ನು ಜನತೆಗೆ ತಲುಪಿಸುವ ಕಾರ್ಯವನ್ನು ಕೂಡ ನಮ್ಮ ಸಂಘಟನೆ ಮಾಡುತ್ತಿದೆ. ಗೋವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯನ್ನು ತಾಲೂಕಾ ಮಟ್ಟದಲ್ಲಿಯೂ ಸ್ಥಾಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ- ಎಂಎಂಸಿ ಅಧ್ಯಕ್ಷ ಗಿರೀಶ್ ಬೋರಕರ್, ದಾಬೋಲಿಂ ಪಂಚಾಯತ ಅಧ್ಯಕ್ಷ ಕಮಲಾಪ್ರಸಾದ ಯಾದವ್, ವಾಸ್ಕೊ ನಗರಸಭಾ ಸದಸ್ಯೆ ಸಮಿತ್ ಕೃಷ್ಣಾ ಸಾಲಕರ್, ನಗರಸಭಾ ಸದಸ್ಯೆ ಶೃದ್ಧಾ ಅಮೋಣಕರ್, ಸಾಂಕವಾಳ ಪಂಚಾಯತ ಉಪಾಧ್ಯಕ್ಷ ಗಿರೀಶ್ ಪಿಳ್ಳೆ, ಸಾಮಾಜಿಕ ಕಾರ್ಯಕರ್ತ ಹರೀಶ್ ಖಾದರ್ ಮತ್ತಿತರರು ಉಪಸ್ಥಿತರಿದ್ದರು.
ಕರವೇ ರಾಜ್ಯ ಕಾರ್ಯದರ್ಶಿ ಶಿವಾನಂಬ ಮಸಬಿನಾಳ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು,ಶ್ರೀ ಬಸವೇಶ್ವರ ಸಂಘದ ಮಕ್ಕಳು ನಾಡಗೀತೆ ಹಾಡಿದರು. ಕರವೇ ರಾಜ್ಯ ಖಜಾಂಚಿ ವೈಎಸ್‍ಬಿರಾದಾರ್ ವಂದನಾರ್ಪಣೆಗೈದರು. ಸಮಾರಂಭದಲ್ಲಿ ರವವೇ ಗೋವಾ ರಾಜ್ಯ ಘಟಕದ ಪದಾಧಿಕಾರಿಗಳು, ಕರವೇ ವಾಸ್ಕೊ ಘಟಕದ ಪದಾಧಿಕಾರಿಗಳು, ಪೊಂಡಾ ತಾಲೂಕಾ ಘಟಕದ ಪದಾಧಿಕಾರಿಗಳು, ಜುವಾರಿ ನಗರ ಘಟಕದ ಪದಾಧಿಕಾರಿಗಳು, ಕರವೇ ಮಹಿಳಾ ಘಟಕದ ಪದಾಧಿಕಾರಿಗಳು, ಮುರ್ಮಗೋವಾ ಘಟಕದ ಪದಾಧಿಕಾರಿಗಳು, ಕರವೇ ಯುವ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಧಾರವಾಡದ ಕಲಾ ತಂಡದಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.
ಇದನ್ನೂ ಓದಿ: Agriculture: ಹಿಪ್ಪು ನೇರಳೆ ಕೃಷಿಯಲ್ಲಿ ಮರ ಪದ್ಧತಿ ಆವಿಷ್ಕರಿಸಿದ ರೈತನಿಗೆ ಸಿಗದ ಮನ್ನಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.