ಕೇರಳದಲ್ಲಿ ವೇದಕ್ಕೂ ಕಾಲೇಜು
Team Udayavani, Oct 24, 2017, 7:20 AM IST
ತಿರುವನಂತಪುರಂ: ಕೇರಳ ಸರಕಾರದ ತಿರುವಾಂಕೂರು ದೇವಸ್ವಂ ಮಂಡಳಿಯು (ಟಿಬಿಡಿ) ವೇದಗಳನ್ನು ಕಲಿಸುವ ಹೊಸ ಕಾಲೇಜು ಹಾಗೂ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿದೆ.
ಭಾರತದ ಪುರಾತನ ವಿದ್ಯೆಗಳಾದ ವೇದ, ವೇದಾಂತ ಹಾಗೂ ತಂತ್ರಗಳನ್ನು ಬೋಧಿಸುವ ಅಧ್ಯಯನ ಕೇಂದ್ರವನ್ನು “ಶಂಗುಮುಘಮ್’ನಲ್ಲಿ ಹಾಗೂ ವೇದ-ವೇದಾಂತ ಕಾಲೇಜನ್ನು “ಸಸ್ಥಾಂಕೊಟ್ಟಾ’ದಲ್ಲಿ ಸ್ಥಾಪಿಸಲು ನಿರ್ಧರಿಸಲಾ ಗಿದೆ. ಈ ಯೋಜನೆಯಿನ್ನೂ ಪ್ರಾಥಮಿಕ ಹಂತದಲ್ಲಿದ್ದು ಕೆಲವೇ ತಿಂಗಳುಗಳಲ್ಲಿ ಅನುಷ್ಠಾನಕ್ಕೆ ಬರಲಿದೆ.
ಈ ಬಗ್ಗೆ ವಿವರಣೆ ನೀಡಿರುವ ಟಿಬಿಡಿ ಅಧ್ಯಕ್ಷ ಪ್ರಯಾರ್ ಗೋಪಾಲ ಕೃಷ್ಣನ್, “”ಭಾರತೀಯ ವಿದ್ಯಾ ಸಂಪತ್ತನ್ನು ಜಗತ್ತಿಗೆ ಹಂಚಿದ “ನಳಂದಾ’ ಹಾಗೂ “ತಕ್ಷಶಿಲಾ’ ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ವೇದ- ವೇದಾಂತ-ತಂತ್ರ ಅಧ್ಯಯನ ಕೇಂದ್ರ, ಕಾಲೇಜುಗಳನ್ನು ಸ್ಥಾಪಿಸಲಾಗುವುದು. ಶತ ಮಾನಗಳ ಹಿಂದೆ ಚಾಲ್ತಿಯಲ್ಲಿದ್ದ ಗುರುಕುಲ ಪದ್ಧತಿಯಂತೆ ಇಲ್ಲಿ ಶಿಕ್ಷಣ ನೀಡಲಾಗುವುದು. ಭಾರತದ ಪರಂಪರೆ ಹಾಗೂ ಅಧ್ಯಾತ್ಮಿಕತೆ ಯನ್ನು ಬೋಧಿಸುವಲ್ಲಿ ಈ ಎರಡೂ ಶೈಕ್ಷಣಿಕ ಕೇಂದ್ರಗಳು ಮಹತ್ವದ ಪಾತ್ರ ವಹಿಸಲಿವೆ” ಎಂದು ತಿಳಿಸಿದರು.
ವೇದ-ವೇದಾಂತ-ತಂತ್ರ ಅಧ್ಯಯನ ಕೇಂದ್ರ, ಕಾಲೇಜುಗಳು ಕೋಲ್ಕತಾದಲ್ಲಿರುವ ವಿವೇಕಾನಂದ ವಿವಿಯಿಂದ ಮಾನ್ಯತೆ ಪಡೆದ ಕೇಂದ್ರಗಳಾಗಿರಲಿದ್ದು, ಇವು ಆ ವಿವಿಯ ಅಧೀನದ ಕ್ಯಾಂಪಸ್‌ಗಳು ಅಥವಾ ಉಪ- ಅಧ್ಯಯನ ಕೇಂದ್ರಗಳ ಮಾದರಿಯಲ್ಲಿ ರಚನೆ ಗೊಳ್ಳಲಿವೆ ಎಂದು ಗೋಪಾಲ ಕೃಷ್ಣನ್ ತಿಳಿಸಿ ದರು. ದೇವಸ್ವಂ ಮಂಡಳಿಯು ಕೇರಳದಲ್ಲಿ ಶಬರಿಮಲೆ ಅಯ್ಯಪ್ಪ ದೇಗುಲ ಸೇರಿ 1,248 ದೇವಾಲಯಗಳನ್ನು ನಿರ್ವಹಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Vivek Ramaswamy: ವಿವೇಕ್‌ಗೆ ಟ್ರಂಪ್ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.