ವಾಹನ ಡೇಟಾ ಮಾರಾಟ
Team Udayavani, Mar 14, 2019, 12:40 AM IST
ಹೊಸದಿಲ್ಲಿ: ಕೇಂದ್ರ ಸರಕಾರವು ವಾಹನಗಳ ನೋಂದಣಿ ವಿವರಗಳನ್ನು ಖಾಸಗಿ ಸಂಸ್ಥೆಗಳಿಗೆ ಮಾರಲು ಅನುಮತಿ ನೀಡಿರುವುದು, ಜನರ ಗೌಪ್ಯ ಮಾಹಿತಿಯ ಸೋರಿಕೆಯಾಗುವ ಆತಂಕ ಎದುರಾಗಿದೆ. ಸಾರಿಗೆ ಮತ್ತು ವಾಹನ ಉದ್ಯಮಕ್ಕೆ ಈ ಡೇಟಾ ತುಂಬಾ ಅನುಕೂಲ ಕಲ್ಪಿಸಲಿದೆ ಎಂಬ ಕಾರಣ ನೀಡಿ ಸರಕಾರ ಈ ನಿರ್ಧಾರ ಕೈಗೊಂಡಿದೆ. ಮಾರ್ಚ್ 8ರಂದು ಸರಕಾರ ಅಂತಿಮಗೊಳಿಸಿರುವ ಸಗಟು ಡೇಟಾ ಹಂಚಿಕೆ ನೀತಿಯಲ್ಲಿ ಈ ಅಂಶಗಳಿವೆ.
ಸದ್ಯ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ವಾಹನಗಳ ನೋಂದಣಿ ಮತ್ತು ಡ್ರೈವಿಂಗ್ ಲೈಸೆನ್ಸ್‌ಗಳ ದತ್ತಾಂಶ ವನ್ನು ಹೊಂದಿರುತ್ತದೆ.ಸದ್ಯ ಈ ಡೇಟಾ ವನ್ನು ಕಾನೂನು ಜಾರಿ ಸಂಸ್ಥೆಗಳಿಗೆ ನೀಡಲಾಗುತ್ತದೆ. ಅಂದರೆ ಪೊಲೀಸರು, ಸಿಬಿಐ ಹಾಗೂ ರಾಜ್ಯಗಳ ತನಿಖಾ ಸಂಸ್ಥೆಗಳು ಆರೋಪಿಗಳ ವಿವರಗಳು ಹಾಗೂ ಇತರ ಮಾಹಿತಿಯನ್ನು ಪಡೆಯಲು ಈ ದತ್ತಾಂಶವನ್ನು ಬಳಸಿ ಕೊಳ್ಳುತ್ತಿವೆ. ಈಗ ಈ ಡೇಟಾವನ್ನು ಉದ್ಯಮಗಳು, ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ಇತ್ಯಾದಿಗಳಿಗೂ ನೀಡಲಾಗುತ್ತದೆ. ಇದಕ್ಕಾಗಿ ದರ ನಿಗದಿಸಲಾಗಿದೆ. ಈ ಬಗ್ಗೆ “ದ ಹಿಂದುಸ್ತಾನ್ ಟೈಮ್ಸ್’ ವರದಿ ಮಾಡಿದೆ.
ಹೊಸ ನೀತಿಯ ಪ್ರಕಾರ, ಡೇಟಾವನ್ನು ಸರಕಾರದಿಂದ ಕೇಳುವ ಸಂಸ್ಥೆಗಳು ಭಾರತೀಯರ ಮಾಲಕತ್ವ ಹೊಂದಿರ ಬೇಕು ಮತ್ತು ಕನಿಷ್ಠ ಶೇ. 50ರಷ್ಟು ಪಾಲುದಾರಿಕೆಯನ್ನು ಹೊಂದಿರಬೇಕು. ನಿಯಂತ್ರಿತವಾಗಿ ದತ್ತಾಂಶ ವನ್ನು ಹಂಚಿ ಕೊಳ್ಳುವುದರಿಂದ ಸಾರಿಗೆ ಮತ್ತು ವಾಹನ ಉದ್ಯಮಕ್ಕೆ ಅನುಕೂಲವಾಗುತ್ತದೆ. ಅಷ್ಟೇ ಅಲ್ಲ, ಇದರಿಂದ ಸೇವೆ ಯಲ್ಲಿ ಸುಧಾರಣೆ, ನಾಗರಿಕರಿಗೆ ಹಾಗೂ ಸರಕಾರಕ್ಕೆ ಹೆಚ್ಚಿನ ಲಾಭವನ್ನು ತಂದು ಕೊಡಲಿದೆ.
ಒಟ್ಟು 28 ವಿಧದ ಮಾಹಿತಿಯನ್ನು ಹಂಚಿಕೊಳ್ಳಲು ನಿರ್ಧರಿಸಲಾಗಿದೆ. ಆದರೆ ಇದರಲ್ಲಿ ವ್ಯಕ್ತಿಯ ಹೆಸರು ಇರುವುದಿಲ್ಲ. ಆದರೆ ಈಗಾಗಲೇ ಸಾರಿಗೆ ಇಲಾಖೆಯ ವಾಹನ್ ಅಪ್ಲಿಕೇಶನ್‌ನಲ್ಲಿ ವ್ಯಕ್ತಿಯ ಹೆಸರೂ ಸಹಿತ ಎಲ್ಲ ಮಾಹಿತಿಯೂ ಇರುವುದರಿಂದ, ಲಭ್ಯ ಮಾಹಿ ತಿಯ ಮೂಲಕ ವ್ಯಕ್ತಿಯ ಹೆಸರನ್ನು ಕಂಡುಕೊಳ್ಳುವುದು ಸುಲಭವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.