ಬಿಜೆಪಿಗೆ ಒಲಿಯಿತು1,2,3 ಹುದ್ದೆ;3 ಪ್ರಮುಖ ಹುದ್ದೆ ಪಡೆಯುವಲ್ಲಿ ಸಫ‌ಲ


Team Udayavani, Aug 6, 2017, 6:15 AM IST

(0)PTI8_5_2017_000159a.jpg

ಹೊಸದಿಲ್ಲಿ: ಎನ್‌ಡಿಎ ಅಭ್ಯರ್ಥಿ ಎಂ.ವೆಂಕಯ್ಯ ನಾಯ್ಡು ಅವರು ಉಪರಾಷ್ಟ್ರಪತಿಯಾಗಿ ಆಯ್ಕೆ ಯಾಗುವ ಮೂಲಕ ದೇಶದ ಮೂರೂ ಪ್ರಮುಖ ಹುದ್ದೆಗಳನ್ನು ತನ್ನದಾಗಿಸಿಕೊಳ್ಳುವ ಬಿಜೆಪಿಯ ಕನಸು ನನಸಾಗಿದೆ. ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಯಂಥ ಅತ್ಯುನ್ನತ ಹುದ್ದೆಗಳನ್ನು ಇದೀಗ ಬಿಜೆಪಿ ಅಲಂಕರಿಸಿದೆ. ಅಲ್ಲದೆ, ರಾಜ್ಯಸಭೆ ಯಲ್ಲೂ ಪ್ರಾಬಲ್ಯ ಮೆರೆಯುವತ್ತ ಆಡಳಿತಾರೂಢ ಎನ್‌ಡಿಎ ದಾಪುಗಾಲಿಟ್ಟಿದೆ.

ಕಳೆದ ತಿಂಗಳಷ್ಟೇ ರಾಮನಾಥ್‌ ಕೋವಿಂದ್‌ ಅವರು ರಾಷ್ಟ್ರಪತಿಯಾಗಿ ನೇಮಕಗೊಳ್ಳುವ ಮೂಲಕ, ಈ ಹುದ್ದೆಗೇರಿದ ಮೊದಲ ಬಿಜೆಪಿ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದೀಗ ಭೈರೋನ್‌ ಸಿಂಗ್‌ ಶೇಖಾವತ್‌(2002-2007) ಅವರ ಬಳಿಕ ಉಪರಾಷ್ಟ್ರಪತಿ ಹುದ್ದೆಗೇರುತ್ತಿರುವ ಬಿಜೆಪಿಯ ಎರಡನೇ ನಾಯಕ ಎಂಬ ಖ್ಯಾತಿಯನ್ನು ವೆಂಕಯ್ಯ ನಾಯ್ಡು ಅವರು ಗಳಿಸಿದ್ದಾರೆ. 
ಶನಿವಾರ ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ನಾಯ್ಡು ಅವರು ಭರ್ಜರಿ ಮತಗಳನ್ನು ಪಡೆದು 13ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಇದರ ಜತೆಗೆ ಅವರು ರಾಜ್ಯಸಭೆಯ ಸಭಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಲಿದ್ದಾರೆ. 

2007ರ ಚುನಾವಣೆಯಲ್ಲಿ ಯುಪಿಎ ಅಭ್ಯರ್ಥಿ ಹಮೀದ್‌ ಅನ್ಸಾರಿ ಅವರು 456 ಮತಗಳನ್ನು ಪಡೆದರೆ, ಎನ್‌ಡಿಎ ಅಭ್ಯರ್ಥಿ ನಜ್ಮಾ ಹೆಪು¤ಲ್ಲಾ 222 ಮತ್ತು ರಶೀದ್‌ ಮಸೂದ್‌ 75 ಮತಗಳನ್ನು ಪಡೆದಿದ್ದರು. ನೂತನ ಉಪರಾಷ್ಟ್ರಪತಿಯಾಗಿ ನೇಮಕಗೊಂಡಿರುವ ನಾಯ್ಡು ಅವರಿಗೆ ಪ್ರಧಾನಿ ಮೋದಿ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಸೇರಿ ಎಲ್ಲ ಪಕ್ಷಗಳ ನಾಯಕರೂ ಅಭಿನಂದನೆ ಸಲ್ಲಿಸಿದ್ದಾರೆ.

ಅಭಿನಂದನೆ ಸಲ್ಲಿಸಿದ ಸೋನಿಯಾ
ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ವೆಂಕಯ್ಯ ನಾಯ್ಡು ಅವರಿಗೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅಭಿನಂದನೆ ಸಲ್ಲಿಸಿದ್ದಾರೆ. ಉಪರಾಷ್ಟ್ರಪತಿ ಎಂಬ ಹುದ್ದೆಯು ನಿಷ್ಪಕ್ಷಪಾತ ಪಾತ್ರವನ್ನು ವಹಿಸಿ ಮೇಲ್ಮನೆಯನ್ನು ಸುಗಮವಾಗಿ ಸಾಗುವಂತೆ ಮಾಡುವಂಥ ಸವಾಲಿನ ಕೆಲಸ. ಸರಕಾರದ ನೀತಿಗಳು ಹಾಗೂ ಶಾಸನಗಳ ಪರಿಣಾಮಕಾರಿ ಪರಿಶೀಲನೆಯ ಕೆಲಸದಲ್ಲಿ ರಾಜ್ಯಸಭೆಯನ್ನು ಬಲಿಷ್ಠಗೊಳಿಸುವಲ್ಲಿ ಪಕ್ಷ ಯಾವತ್ತೂ ಬೆಂಬಲವಾಗಿ ನಿಲ್ಲಲಿದೆ ಎಂದಿದ್ದಾರೆ.

ಕ್ಯೂನಲ್ಲಿ ನಿಂತಿದ್ದ ಪ್ರಧಾನಿ ಮೋದಿ
ಶನಿವಾರ ಮತದಾನ ಆರಂಭವಾಗುವುದಕ್ಕೂ ಮೊದಲೇ ಪ್ರಧಾನಿ ಮೋದಿ ಅವರು ಕ್ಯೂನಲ್ಲಿ ನಿಂತಿದ್ದು ಕಂಡುಬಂತು. ಬೆಳಗ್ಗೆ 10 ಗಂಟೆಗೆ ವೋಟಿಂಗ್‌ ಹಾಲ್‌ ತೆರೆಯುವ ಮುಂಚೆಯೇ ಅಲ್ಲಿಗೆ ಆಗಮಿಸಿದ್ದ ಮೋದಿ ಅವರು ಸರತಿಯಲ್ಲಿ ನಿಂತು ಕಾಯುತ್ತಿದ್ದರು. 

ಕಾಂಗ್ರೆಸ್‌ಗೆ ಅಡ್ಡ ಮತದಾನದ ಶಾಕ್‌
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಅಡ್ಡ ಮತದಾನ ನಡೆದಿದ್ದು, ವಿಪಕ್ಷಗಳ 24ರಷ್ಟು ಸಂಸದರು ಎನ್‌ಡಿಎ ಅಭ್ಯರ್ಥಿ ನಾಯ್ಡು ಪರ ಮತ ಚಲಾಯಿಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ನಾಯ್ಡು ಅವರಿಗೆ ಸಿಕ್ಕಿರುವ ಬೆಂಬ ಲದ ಲೆಕ್ಕಾಚಾರ ನೋಡಿದರೆ ಅವರಿಗೆ 495 ಮತಗಳು ಸಿಗಬೇಕಿತ್ತು. ಆದರೆ, ಅವರಿಗೆ 516 ಮತ ದೊರೆತಿವೆ. ಹೀಗಾಗಿ, ಅಡ್ಡಮತದಾನ ನಡೆದಿರುವುದು ಸ್ಪಷ್ಟ ಎನ್ನಲಾಗಿದೆ.

ಪೋಸ್ಟರ್‌ನಿಂದ ವೈಸ್‌ ಪ್ರಸಿಡೆಂಟ್‌ವರೆಗೆ
ಭಾರತೀಯ ಜನತಾ ಪಕ್ಷದ ವಿಧೇಯ ಕಾರ್ಯಕರ್ತ. ನಾಯಕರ ಆದೇಶ ಪಾಲಕ. ಅದ್ಭುತ ವಾಗ್ಮಿ. ಸರಳ ನಡೆ-ನುಡಿಗೆ ಹೆಸರಾಗಿ, ಪಕ್ಷ ನಿಷ್ಠೆ, ಸೇವೆ ಆಧಾರದಲ್ಲೇ ರಾಜ್ಯಸಭಾ ಸದಸ್ಯರ ಹುದ್ದೆಗೇರಿದ, ನಾಯಕ ಎಂದೆನಿಸಿಕೊಂಡಿರುವ ಮುಪ್ಪಾವರಪು ವೆಂಕಯ್ಯ ನಾಯ್ಡು, 13ನೇ ಉಪರಾಷ್ಟ್ರಪತಿಯಾಗಿ ಆಯ್ಕೆ ಆಗುವವರೆಗಿನ ಹಾದಿ ಸುದೀರ್ಘ‌.

1949ರ ಜುಲೈ 1ರಂದು, ಆಂಧ್ರದ ನೆಲ್ಲೂರು ಜಿಲ್ಲೆಯ ಚವತಪಲೆಮ್‌ ಗ್ರಾಮದ ಸಾಧಾರಣ ರೈತ ಕುಟುಂಬದಲ್ಲಿ ಜನಿಸಿದ ವೆಂಕಯ್ಯ ನಾಯ್ಡು, ತಮ್ಮ 68 ವರ್ಷಗಳ ಜೀವನದಲ್ಲಿ 4 ದಶಕಕ್ಕೂ ಹೆಚ್ಚು ಕಾಲ ಸಾರ್ವಜನಿಕ ಜೀವನದಲ್ಲಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ, ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿರುವ ನಾಯ್ಡು, ಅತ್ಯಂತ ಸುದೀಘ ಅವಧಿಯ ರಾಜ್ಯಸಭೆ ಸದಸ್ಯರಾಗಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 1970ರಲ್ಲಿ ದಕ್ಷಿಣ ಭಾರತದಲ್ಲಿ ಅಷ್ಟೇನೂ ಜನಮನ್ನಣೆ ಗಳಿಸಿರದ ಜನ ಸಂಘ ಸೇರಿದ ನಾಯ್ಡು, ಮುಂದೆ ಬಿಜೆಪಿಯ ಯುವ ಕಾರ್ಯಕರ್ತರಾಗಿ, ವಾಜಪೇಯಿ ಹಾಗೂ ಲಾಲ್‌ ಕೃಷ್ಣ ಆಡ್ವಾಣಿ ಅವರಂಥ ಧೀಮಂತ ನಾಯಕರ ಪೋಸ್ಟರ್‌ಗಳನ್ನು ಗೋಡೆಗೆ ಅಂಟಿಸಿಕೊಂಡು ಬೆಳೆದುಬಂದವರು.

1978 ಮತ್ತು 1983ರಲ್ಲಿ ಆಂಧ್ರದ ಉದಯಗಿರಿ ಕ್ಷೇತ್ರದಿಂದ ಶಾಸಕ ರಾಗಿ ಆಯ್ಕೆಯಾದ ನಾಯ್ಡು, 1998ರಲ್ಲಿ ಮೊದಲ ಬಾರಿ ಕರ್ನಾಟಕ ದಿಂದ ರಾಜ್ಯಸಭೆ ಪ್ರವೇಶಿಸಿದ್ದು, ಇಲ್ಲಿಂದಲೇ 3 ಬಾರಿ (2003, 2010) ಹಾಗೂ 2016ರಲ್ಲಿ ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. 1996ರಿಂದ 2000ದವರೆಗೆ ಬಿಜೆಪಿ ವಕ್ತಾರರಾಗಿ, 2004ರಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷರಾದ  ಇವರು, 1999ರಲ್ಲಿ ಅಟಲ್‌ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 2014ರ ಮೇ 26ರಿಂದ ಪ್ರಧಾನಿ ಮೋದಿ ಸಂಪುಟದಲ್ಲಿ ನಗರಾಭಿವೃದ್ಧಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾಗಿದ್ದ  ನಾಯ್ಡು ಈಗ 13ನೇ ಉಪರಾಷ್ಟ್ರಪತಿ.

ಆ.10: ನಿರ್ಗಮಿತ ಉಪರಾಷ್ಟ್ರಪತಿ ಅನ್ಸಾರಿ ಅವರ ಅಧಿಕಾರಾವಧಿ ಮುಕ್ತಾಯ
ಆ.11: ನೂತನ ಉಪರಾಷ್ಟ್ರಪತಿ ಯಾಗಿ ವೆಂಕಯ್ಯ ನಾಯ್ಡು ಅಧಿಕಾರ ಸ್ವೀಕಾರ
785: ಮತದಾನ ಮಾಡಬೇಕಿದ್ದ ಸಂಸದರ ಸಂಖ್ಯೆ
14: ಗೈರಾದ ಸಂಸದರು

ಇದು ಮತಕ್ಕೆ ಸಿಕ್ಕಿದ ಜಯ. ಜೊತೆಗೆ ಮುಕ್ತ ಅಭಿವ್ಯಕ್ತಿಗೆ ದೊರೆತ ಜಯ. ಈ ಪೈಕಿ ಎರಡನೇ ಗೆಲುವು ಇಡೀ ಭಾರತಕ್ಕೆ ಸೇರಿದ್ದು. ನನಗೆ ಮತ ಹಾಕಿದ ಎಲ್ಲರಿಗೂ ಧನ್ಯವಾದಗಳು. ಏಕೆಂದರೆ, ಅವರು ಮತ ಹಾಕಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಬಹುತ್ವಕ್ಕೆ.
– ಗೋಪಾಲಕೃಷ್ಣ ಗಾಂಧಿ, 
ವಿಪಕ್ಷಗಳ ಅಭ್ಯರ್ಥಿ

ಟಾಪ್ ನ್ಯೂಸ್

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IPL: Players from these countries are fully available for the next three seasons of IPL

IPL: ಇನ್ನು ಮೂರು ಸೀಸನ್‌ ಐಪಿಎಲ್‌ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ

1-a-raga-pg

Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

1-a-raga-pg

Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ

Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.