ವರ್ಮಾ ಪ್ರತಿಕ್ರಿಯೆ ಸೋರಿಕೆ: ಸುಪ್ರೀಂ ಕೆಂಡ
Team Udayavani, Nov 21, 2018, 10:51 AM IST
ಹೊಸದಿಲ್ಲಿ: ಸಿಬಿಐಯೊಳಗಿನ ಕಲಹಕ್ಕೆ ಸಂಬಂಧಿಸಿ ನಡೆದ ಕೆಲವು ಬೆಳವಣಿಗೆಗಳು ಸುಪ್ರೀಂ ಕೋರ್ಟ್ ಅನ್ನು ಕೆಂಡಾಮಂಡಲ ವಾಗಿಸಿದ ಘಟನೆ ಮಂಗಳವಾರ ನಡೆದಿದೆ. ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿ ಸಿವಿಸಿ ಸಲ್ಲಿಸಿದ ವರದಿಗೆ ಸಿಬಿಐ ನಿರ್ದೇಶಕ ಅಲೋಕ್ ಕುಮಾರ್ ವರ್ಮಾ ಅವರು ಮುಚ್ಚಿದ ಲಕೋಟೆಯಲ್ಲಿ ನೀಡಿದ ಪ್ರತಿಕ್ರಿಯೆ ಸೋರಿಕೆ ಯಾಗಿದ್ದೇ ನ್ಯಾಯಾಲಯದ ಆಕ್ರೋಶಕ್ಕೆ ಕಾರಣ.
ವರ್ಮಾ ನೀಡಿರುವ ರಹಸ್ಯ ಪ್ರತಿಕ್ರಿಯೆಯಲ್ಲಿ ಏನಿತ್ತು ಎಂಬುದನ್ನು ಮಾಧ್ಯಮವೊಂದು ವರದಿ ಮಾಡಿತ್ತು. ಪ್ರತಿಕ್ರಿಯೆಯು ರಹಸ್ಯವಾಗಿರಬೇಕು ಎಂದು ಕೋರ್ಟ್ ಹೇಳಿದ್ದರೂ, ಅದು ಸೋರಿಕೆಯಾಗಿದ್ದರಿಂದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪೀಠ ಸಿಡಿಮಿಡಿಗೊಂಡಿತು. ಮಂಗಳವಾರ ಮಾಧ್ಯಮ ವರದಿಯ ಪ್ರತಿಯನ್ನು ಕೋರ್ಟ್‌ಗೆ ತಂದಿದ್ದ ಸಿಜೆಐ, ಅದನ್ನು ವರ್ಮಾ ಪರ ವಕೀಲ ಫಾಲಿ ಎಸ್. ನಾರಿಮನ್ ಅವರ ಮುಂದಿಟ್ಟು, “ಇದೇನು’ ಎಂದು ಪ್ರಶ್ನಿಸಿದರು. ಗೊಂದಲಗೊಂಡ ನಾರಿಮನ್ ಅವರು, “ಇದು ನಿಜಕ್ಕೂ ಅನಧಿಕೃತ. ವರದಿ ಸೋರಿಕೆಯಿಂದ ನನಗೆ ಆಘಾತವಾಗಿದೆ’ ಎಂದರು.
ಇನ್ನೊಂದೆಡೆ, ಸಿಬಿಐ ಡಿಐಜಿ ಮನೀಷ್ ಸಿನ್ಹಾ ಅವರು ತಮ್ಮನ್ನು ನಾಗ್ಪುರಕ್ಕೆ ವರ್ಗಾಯಿಸಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯ ವಿವರವೂ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಸಿಜೆಐ ಸಿಟ್ಟನ್ನು ಇನ್ನಷ್ಟು ಹೆಚ್ಚಿಸಿತು. ಒಂದು ಹಂತದಲ್ಲಿ ಸಹನೆ ಕಳೆದುಕೊಂಡ ಸಿಜೆಐ ರಂಜನ್ ಗೊಗೋಯ್, ನೀವ್ಯಾರೂ ಯಾವುದೇ ವಿಚಾರಣೆಗೆ ಅರ್ಹರಲ್ಲ. ತನಿಖಾ ಸಂಸ್ಥೆಯ ಘನತೆ ಕಾಪಾಡುವ ಉದ್ದೇಶದಿಂದ ಎಲ್ಲ ವರದಿಗಳೂ ರಹಸ್ಯವಾಗಿರಲಿ ಎಂದು ನಾವು ಆದೇಶಿಸಿದ್ದೆವು. ಆದರೆ, ಸಂಸ್ಥೆಯ ಘನತೆ ಕಾಪಾಡುವುದು ನಿಮಗ್ಯಾರಿಗೂ ಬೇಕಾಗಿಲ್ಲ ಎಂದು ಆಕ್ರೋಶಭರಿತರಾಗಿ ನುಡಿದಿದ್ದೂ ಕಂಡುಬಂತು. ಮುಂದಿನ ವಿಚಾರಣೆಯನ್ನು ನ.29ಕ್ಕೆ ಮುಂದೂಡಿದ ನ್ಯಾಯಾಲಯ, ಈ ಕುರಿತು ಸಿವಿಸಿ ಸೇರಿದಂತೆ ಯಾರ ವಾದವನ್ನೂ ನಾವು ಇಂದು ಆಲಿಸುವುದಿಲ್ಲ ಎಂದು ಖಡಕ್ಕಾಗಿ ನುಡಿಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
MUST WATCH
ಹೊಸ ಸೇರ್ಪಡೆ
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.