ವಿಪಕ್ಷಗಳ ಆಯ್ಕೆ; ಗಾಂಧಿ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಉಪ ರಾಷ್ಟ್ರಪತಿ?
Team Udayavani, Jul 11, 2017, 4:01 PM IST
ನವದೆಹಲಿ: ಪ್ರತಿಪಕ್ಷಗಳು ಮಂಗಳವಾರ ಅವಿರೋಧವಾಗಿ ಉಪರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಪಶ್ಚಿಮಬಂಗಾಳದ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ(72ವರ್ಷ) ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದ್ದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಹಾಲಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರ ಅವಧಿ ಆಗಸ್ಟ್ 10ಕ್ಕೆ ಕೊನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಉಪರಾಷ್ಟ್ರಪತಿ ಸ್ಥಾನಕ್ಕೆ ಆಗಸ್ಟ್ 5ರಂದು ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಘೋಷಿಸಿತ್ತು.
ವರದಿಯ ಪ್ರಕಾರ, ಉಪರಾಷ್ಟ್ರಪತಿ ಚುನಾವಣೆ ನಿಟ್ಟಿನಲ್ಲಿ ಅಭ್ಯರ್ಥಿ ಆಯ್ಕೆಗಾಗಿ ಇಂದು ಸುಮಾರು 18 ವಿಪಕ್ಷಗಳು ಸಭೆ ಸೇರಿ ಚರ್ಚಿಸಿದ್ದು, ಈ ವೇಳೆ ಗೋಪಾಲಕೃಷ್ಣ ಗಾಂಧಿ ಅವರ ಹೆಸರನ್ನು ಅಂತಿಮಗೊಳಿಸಿರುವುದಾಗಿ ವರದಿ ತಿಳಿಸಿದೆ.
ಗೋಪಾಲಕೃಷ್ಣ ಗಾಂಧಿ ಬಗ್ಗೆ ಒಂದಿಷ್ಟು ವಿವರ:
1945 ಏಪ್ರಿಲ್ 22ರಂದು ಗೋಪಾಲಕೃಷ್ಣ ಗಾಂಧಿ ಜನನ. ಗಾಂಧಿ ಪುತ್ರ ದೇವದಾಸ್ ಗಾಂಧಿ ಹಾಗೂ ಸಿ.ರಾಜಗೋಪಾಲಚಾರಿ ಅವರ ಪುತ್ರಿ ಲಕ್ಷ್ಮಿ ದಂಪತಿಯ ಪುತ್ರ ಗೋಪಾಲಕೃಷ್ಣ ಗಾಂಧಿ. ಇವರು 1968ರಿಂದ 1992ರ ವರೆಗೆ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಗೋಪಾಲಕೃಷ್ಣ ಗಾಂಧಿ ಅವರು ಖ್ಯಾತ ಲೇಖಕ ರಾಜ್ ಮೋಹನ್ ಗಾಂಧಿ(81ವರ್ಷ) ಅವರ ಸಹೋದರ.
ಗೋಪಾಲಕೃಷ್ಣ ಗಾಂಧಿ ಅವರು ದಕ್ಷಿಣ ಆಫ್ರಿಕಾದ ಲೆಸೋಥೋನಲ್ಲಿ ಭಾರತದ ಹೈಕಮೀಷನರ್ ಆಗಿ ಕಾರ್ಯನಿರ್ವಹಿಸಿದ್ದರು. 2000ನೇ ಇಸವಿಯಲ್ಲಿ ಶ್ರೀಲಂಕಾದಲ್ಲಿ ಭಾರತದ ಹೈಕಮೀಷನರ್ ಆಗಿ ಭಾರತ ನೇಮಿಸಿತ್ತು. 2002ರಲ್ಲಿ ನಾರ್ವೆಯಲ್ಲಿ ಗಾಂಧಿ ಭಾರತದ ರಾಯಭಾರಿ ಆಗಿ ನೇಮಕವಾಗಿದ್ದರು. 2004ರಲ್ಲಿ ಗೋಪಾಲಕೃಷ್ಣ ಗಾಂಧಿ ಪಶ್ಚಿಮಬಂಗಾಳದ ರಾಜ್ಯಪಾಲರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R-Day parade; ಗಣರಾಜ್ಯೋತ್ಸವ ಪರೇಡ್ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Sopore Encounter: ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಯೋಧ ಹುತಾತ್ಮ
RG ಕರ್ ಆಸ್ಪತ್ರೆ ವೈದ್ಯೆ ಪ್ರಕರಣ-ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ
CowUrine: ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ: ಐಐಟಿ ಮದ್ರಾಸ್ ನಿರ್ದೇಶಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.