ಉಪರಾಷ್ಟ್ರಪತಿ ಚುನಾವಣೆ: 11ರಂದು ವಿಪಕ್ಷಗಳ ಸಭೆ
Team Udayavani, Jul 8, 2017, 8:44 AM IST
ಹೊಸದಿಲ್ಲಿ: ಮುಂಬರುವ ಉಪರಾಷ್ಟ್ರಪತಿ ಚುನಾವಣೆ ಕುರಿತು ಕಾರ್ಯತಂತ್ರ ರೂಪಿಸುವ ಸಂಬಂಧ 18 ವಿಪಕ್ಷಗಳು ಜು.11ರಂದು ಸಭೆ ಸೇರುವ ಸಾಧ್ಯತೆಯಿದೆ. ವಿಶೇಷವೆಂದರೆ, ಈ ಸಭೆಯಲ್ಲಿ ಜೆಡಿಯು ಕೂಡ ಪಾಲ್ಗೊಳ್ಳಲಿದೆ. ರಾಷ್ಟ್ರಪತಿ ಚುನಾವಣೆ ವೇಳೆ ಜೆಡಿಯು ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸಿದ ಪರಿಣಾಮ ವಿಪಕ್ಷಗಳ ಒಕ್ಕೂಟದಲ್ಲಿ ಒಡಕು ಮೂಡಿದೆ. ಈ ಕುರಿತು ಚರ್ಚೆ ನಡೆಸಿ, ಆಗಸ್ಟ್ 5ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಯಲ್ಲಾದರೂ ಒಗ್ಗಟ್ಟು ಪ್ರದರ್ಶಿಸುವ ಸಂಬಂಧ ತೀರ್ಮಾನಕ್ಕೆ ಬರಲು ಈ ಸಭೆ ಕರೆಯಲಾಗಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಕರೆ ಮೇರೆಗೆ ನಡೆಯುವ ಸಭೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಸೇರಿ ವಿಪಕ್ಷಗಳ ಪ್ರಮುಖರು ಭಾಗವಹಿಸಲಿದ್ದಾರೆ. ಇದೇ ವೇಳೆ ಸಂಸತ್‌ನ ಮುಂಗಾರು ಅಧಿವೇಶನದ ಕುರಿತೂ ವಿಪಕ್ಷಗಳು ಚರ್ಚಿಸಲಿವೆ. “ಉಪರಾಷ್ಟ್ರಪತಿ ಸ್ಪರ್ಧೆಗೆ ಕಾಂಗ್ರೆಸ್ ಸೇರಿ ಯಾವುದೇ ವಿಪಕ್ಷ ಈವರೆಗೆ ಅಭ್ಯರ್ಥಿ ಹೆಸರು ಸೂಚಿಸಿಲ್ಲ. ಈ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು’ ಎಂದು ಸಿಪಿಐ ನಾಯಕ ಡಿ. ರಾಜಾ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
African Elephants: ವಂಟಾರಕ್ಕೆ ಆಗಮಿಸಲಿವೆ ಆಫ್ರಿಕಾದ 3 ಆನೆಗಳು
Tamil Nadu: ನಮಗೆ ಯಾರೇ ಎದುರಾಳಿಯಾದ್ರೂ 2026ರಲ್ಲಿ ಗೆಲ್ಲೋದು ನಾವೇ: ಡಿಸಿಎಂ ಉದಯನಿಧಿ
BJP,ಮೋದಿ ಸಾಂವಿಧಾನಿಕ ಮೌಲ್ಯಗಳ ನಾಶಕ್ಕೆ ಯತ್ನಿಸುತ್ತಿದ್ದಾರೆ: ಪ್ರಿಯಾಂಕಾ ಕಿಡಿ
Jaipur; ರಾಷ್ಟ್ರೀಯ ಉದ್ಯಾನವನದಿಂದ ಭಾರೀ ಸಂಖ್ಯೆಯ ಹುಲಿಗಳು ನಾಪತ್ತೆ!
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.