BJP; ಸಬ್ಕಾ ಸಾಥ್, ಸಬ್ಕಾ ವಿಕಾಸ್ ಎಂಬ ಭಾವನೆ ಗೆದ್ದಿದೆ:ಮೋದಿ ಗೆಲುವಿನ ಸಂಭ್ರಮ
ಈ ಹ್ಯಾಟ್ರಿಕ್ ಗೆಲುವು 2024 ರ ಹ್ಯಾಟ್ರಿಕ್ ಗೆಲುವಿನ ಗ್ಯಾರಂಟಿ...
Team Udayavani, Dec 3, 2023, 7:46 PM IST
ಹೊಸದಿಲ್ಲಿ: ”ಇಂದಿನ ಗೆಲುವು ಐತಿಹಾಸಿಕವಾಗಿದ್ದು, ಸಬ್ಕಾ ಸಾಥ್, ಸಬ್ಕಾ ವಿಕಾಸ್ ಎಂಬ ಭಾವನೆ ಗೆದ್ದಿದೆ.ವಿಕಸಿತ್ ಭಾರತ್ ಎಂಬ ಧ್ವನಿ ಗೆದ್ದಿದೆ.ಆತ್ಮನಿರ್ಭರ ಭಾರತದ ಸಂಕಲ್ಪ ಗೆದ್ದಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮೂರು ರಾಜ್ಯಗಳ ಗೆಲುವಿನ ಸಂಭ್ರಮದಲ್ಲಿ ವಿಜಯೋತ್ಸವ ಭಾಷಣ ಮಾಡಿದ್ದಾರೆ.
ಭಾನುವಾರ ಸಂಜೆ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ವಿಜಯೋತ್ಸವ ಸಭೆಯಲ್ಲಿ ಭಾಗವಿಸಿ ಮಾತನಾಡಿದರು. ”ಇಂದು ಪ್ರತಿ ಪ್ರಥಮ ಬಾರಿಗೆ ಮತದಾರ ನಾನೇ ಗೆದ್ದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ.ಈ ಗೆಲುವಿನಲ್ಲಿ ಪ್ರತಿಯೊಬ್ಬ ಮಹಿಳೆಯೂ ತನ್ನ ಗೆಲುವನ್ನು ಕಾಣುತ್ತಿದ್ದಾಳೆ.ಈ ಗೆಲುವಿನಲ್ಲಿ ಉತ್ತಮ ಭವಿಷ್ಯದ ಕನಸು ಕಾಣುವ ಪ್ರತಿಯೊಬ್ಬ ಯುವಕನೂ ತನ್ನ ಗೆಲುವನ್ನು ಕಾಣುತ್ತಿದ್ದಾನೆ.2047 ರಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ನೋಡಲು ಬಯಸುವ ಪ್ರತಿಯೊಬ್ಬ ನಾಗರಿಕನು ಅದನ್ನು ಯಶಸ್ಸು ಎಂದು ಪರಿಗಣಿಸುತ್ತಾನೆ” ಎಂದರು.
”ಇಂದು ಪ್ರತಿಯೊಬ್ಬ ಬಡವನೂ ಸ್ವಂತವಾಗಿ ಬದುಕುತ್ತೇನೆ ಎಂದು ಹೇಳುತ್ತಿದ್ದಾರೆ. ಇಂದು, ಪ್ರತಿಯೊಬ್ಬ ವಂಚಿತ ವ್ಯಕ್ತಿಯ ಮನಸ್ಸಿನಲ್ಲಿ ಒಂದು ಭಾವನೆ ಇದೆ – ಅವನೇ ಗೆದ್ದಿದ್ದಾನೆ. ಇಂದು ಪ್ರತಿಯೊಬ್ಬ ರೈತನೂ ಒಂದೇ ವಿಚಾರ ಮಾಡುತ್ತಾನೆ – ಅವನೇ ಗೆಲ್ಲುತ್ತಾನೆ.ಇಂದು ಪ್ರತಿಯೊಬ್ಬ ಬುಡಕಟ್ಟು ಜನಾಂಗದ ಸಹೋದರ ಸಹೋದರಿಯರು ತಾವೇ ಗೆದ್ದಿದ್ದಾರೆ ಎಂದು ಭಾವಿಸಿ ಸಂತೋಷಪಡುತ್ತಿದ್ದಾರೆ” ಎಂದರು.
”ಮಹಿಳಾ ಶಕ್ತಿಯ ಅಭಿವೃದ್ಧಿ ಬಿಜೆಪಿಯ ಅಭಿವೃದ್ಧಿ ಮಾದರಿಯ ಮುಖ್ಯ ಆಧಾರವಾಗಿದೆ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಮಹಿಳೆಯರು, ಸಹೋದರಿಯರು, ಹೆಣ್ಣು ಮಕ್ಕಳು ಸಾಕಷ್ಟು ಆಶೀರ್ವಾದ ಮಾಡಿದ್ದಾರೆ. ಇಂದು ನಾನು ದೇಶದ ಪ್ರತಿಯೊಬ್ಬ ಸಹೋದರಿ ಮತ್ತು ಮಗಳಿಗೆ ವಿನಮ್ರವಾಗಿ ಹೇಳುತ್ತೇನೆ, ಬಿಜೆಪಿ ನಿಮಗೆ ನೀಡಿದ ಭರವಸೆಗಳನ್ನು 100 ಪ್ರತಿಶತ ಈಡೇರಿಸುತ್ತದೆ ಮತ್ತು ಇದು ಮೋದಿಯ ಗ್ಯಾರಂಟಿ” ಎಂದರು.
”ಇಂದು ಬಿಜೆಪಿ ಮಾತ್ರ ಅವರ ಆಕಾಂಕ್ಷೆಗಳನ್ನು ಅರಿತು ಕೆಲಸ ಮಾಡುತ್ತದೆ ಎಂಬ ವಿಶ್ವಾಸ ದೇಶದ ಯುವಕರಲ್ಲಿ ನಿರಂತರವಾಗಿ ಹೆಚ್ಚುತ್ತಿದೆ.ಬಿಜೆಪಿ ಸರ್ಕಾರ ಯುವ ಸ್ನೇಹಿ ಮತ್ತು ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲು ಹೊರಟಿದೆ ಎಂಬುದು ದೇಶದ ಯುವಕರಿಗೆ ತಿಳಿದಿದೆ” ಎಂದರು.
”ತೆಲಂಗಾಣದ ಜನತೆಗೆ ಮತ್ತು ತೆಲಂಗಾಣದ ಬಿಜೆಪಿ ಕಾರ್ಯಕರ್ತರಿಗೆ ನಾನು ವಿಶೇಷ ಕೃತಜ್ಞತೆ ಸಲ್ಲಿಸುತ್ತೇನೆ. ತೆಲಂಗಾಣದಲ್ಲಿ ಪ್ರತಿ ಚುನಾವಣೆಯಲ್ಲೂ ಬಿಜೆಪಿಯ ಗ್ರಾಫ್ ನಿರಂತರವಾಗಿ ಹೆಚ್ಚುತ್ತಲೇ ಇದೆ. ತೆಲಂಗಾಣ ಜನತೆಗೆ ನಾನು ಭರವಸೆ ನೀಡುತ್ತೇನೆ, ನಿಮ್ಮ ಸೇವೆಯಲ್ಲಿ ಬಿಜೆಪಿ ಯಾವುದೇ ಕೊರತೆ ಮಾಡುವುದಿಲ್ಲ” ಎಂದರು.
”ನಮ್ಮ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಜೀ ಅವರು ತಮ್ಮ ನೀತಿ ಮತ್ತು ಕಾರ್ಯತಂತ್ರವನ್ನು ಕಾರ್ಯಗತಗೊಳಿಸಿದ ರೀತಿಯ ಫಲಿತಾಂಶವೂ ಈ ವಿಜಯವಾಗಿದೆ.ಚುನಾವಣೆಯ ಸಮಯದಲ್ಲಿ ಅವರ ಕುಟುಂಬದಲ್ಲಿ ದುರಂತ ಘಟನೆ ಸಂಭವಿಸಿತು, ಆದರೆ ನಡ್ಡಾ ಜಿ ಅವರು ಬಿಜೆಪಿ ಕಾರ್ಯಕರ್ತರಾಗಿ ಹಗಲು ರಾತ್ರಿ ಅಚಲರಾಗಿದ್ದರು” ಎಂದರು.
ಈ ಹ್ಯಾಟ್ರಿಕ್ ಗೆಲುವು 2024 ರ ಹ್ಯಾಟ್ರಿಕ್ ಗೆಲುವಿನ ಗ್ಯಾರಂಟಿ ಎಂದ ಪ್ರಧಾನಿ ಮೋದಿ, ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟದ ಹೆಸರು ಉಲ್ಲೇಖಿಸದೆ ಪರೋಕ್ಷವಾಗಿ ತೀವ್ರ ವಾಗ್ದಾಳಿ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.