ದೂರವಾಗಿದ್ದ ಮಿತ್ರಪಕ್ಷಗಳನ್ನು ಬರಸೆಳೆದ ಬಿಜೆಪಿ ತಂತ್ರಕ್ಕೆ ಜಯ: ಫಲಕೊಟ್ಟ ಮೈತ್ರಿತಂತ್ರ
Team Udayavani, Jun 5, 2024, 5:46 AM IST
ನವದೆಹಲಿ: ಚುನಾವಣೆಗೂ ಮುನ್ನ ಮೈತ್ರಿಕೂಟ ಬಲಪಡಿಸಿಕೊಳ್ಳುವ ಬಿಜೆಪಿ ತಂತ್ರಕ್ಕೆ ಜಯ ಸಿಕ್ಕಿದೆ. ಒಂದು ವೇಳೆ, ಬಿಜೆಪಿ ಈ ಚಾಣಾಕ್ಷ ಹೆಜ್ಜೆ ಇಡದೇ ಇರುತ್ತಿದ್ದರೆ, 3ನೇ ಬಾರಿ ಅಧಿಕಾರಕ್ಕೇರುವ ಕನಸು ಕನಸಾಗಿಯೇ ಉಳಿಯುತ್ತಿತ್ತು.
ಚುನಾವಣೆಗೂ ಮುನ್ನ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಹಾಗೂ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷಗಳನ್ನು ಮೈತ್ರಿಕೂಟಕ್ಕೆ ಸೇರಿಸಿಕೊಂಡಿದ್ದರಿಂದ ಎನ್‌ಡಿಎ ಮೈತ್ರಿಕೂಟಕ್ಕೆ ಗೆಲುವು ದೊರಕಿದೆ.
ಇಂಡಿಯಾ ಕೂಟ ರಚನೆಯಾದಾಗ ಈ ಮೈತ್ರಿಕೂಟದೊಟ್ಟಿಗಿದ್ದ ನಿತೀಶ್ ಕುಮಾರ್‌ರನ್ನು ಎನ್‌ಡಿಎ ಮೈತ್ರಿಕೂಟಕ್ಕೆ ಸೆಳೆಯುವಲ್ಲಿ ಬಿಜೆಪಿ ಯಶಸ್ವಿಯಾಯಿತು. ಇಂಡಿಯಾ ಮೈತ್ರಿಕೂಟದೊಂದಿಗೆ ನಿತೀಶ್ ಕುಮಾರ್ ಮುನಿಸಿಕೊಂಡಿದ್ದನ್ನು ತಿಳಿದ ಬಿಜೆಪಿ ನಾಯಕರು ನಿತೀಶ್‌ರನ್ನು ಸಂಪರ್ಕಿಸಿ ಮೈತ್ರಿಕೂಟಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಹೀಗಾಗಿ ಎನ್‌ಡಿಎ ಮೈತ್ರಿಕೂಟಕ್ಕೆ 13 ಸ್ಥಾನಗಳು ದೊರೆತು, ಮ್ಯಾಜಿಕ್ ನಂಬರ್ ದಾಟಲು ಸಾಧ್ಯವಾಯಿತು.
ಆಂಧ್ರಪ್ರದೇಶದಲ್ಲಿ ಎನ್‌ಡಿಎಯಿಂದ ದೂರ ಹೋಗಿದ್ದ ಚಂದ್ರಬಾಬು ನಾಯ್ಡು ಅವರನ್ನು ಇನ್ನೇನು ಚುನಾವಣೆ ಘೋಷಣೆಗೆ ಕೆಲವೇ ದಿನಗಳಿರುವಂತೆ ಅಂದರೆ ಮಾರ್ಚ್‌ನಲ್ಲಿ ಬಿಜೆಪಿ ಮತ್ತೆ ತನ್ನತ್ತ ಸೆಳೆದುಕೊಂಡಿತು. ಬಹಳ ವರ್ಷಗಳ ಹಿಂದೆ ಮೈತ್ರಿಕೂಟವನ್ನು ತೊರೆದಿದ್ದ ನಾಯ್ಡು ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡರು. ಇದು ಕೇವಲ ನಾಯ್ಡು ಮಾತ್ರವಲ್ಲದೆ, ಇಡೀ ಎನ್‌ಡಿಎಗೇ ಲಾಭವಾಗಿ ಪರಿಣಮಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.