ವಿಜಯದಿಂದ ವಿನಮೃತೆ; ದುರಹಂಕಾರ ಅಲ್ಲ: ಬಿಜೆಪಿ ಕಾರ್ಯಕರ್ತರಿಗೆ ವಿಜಯವರ್ಗೀಯ
Team Udayavani, Jun 4, 2019, 3:53 PM IST
ಕೋಲ್ಕತ : ‘ವಿಜಯವು ನಮ್ಮನ್ನು ವಿನೀತಗೊಳಿಸಬೇಕೇ ಹೊರತು ದುರಂಹಕಾರಿಗಳನ್ನಾಗಿ ಮಾಡಬಾರದು’ ಎಂಬ ಎಚ್ಚರಿಕೆಯನ್ನು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಅವರು ಪ್ಷದ ಕಾರ್ಯಕರ್ತರಿಗೆ ನೀಡಿದ್ದಾರೆ.
‘ಪಶ್ಚಿಮ ಬಂಗಾಲದಲ್ಲಿನ ಲೋಕಸಭಾ ಚುನಾವಣೆಯ ವಿಜಯವನ್ನು ಪಕ್ಷದ ಕಾರ್ಯಕರ್ತರು ವಿನೀತಭಾವದಿಂದ ಸ್ವೀಕರಿಸಬೇಕು; ವಿಜಯದ ಅಮಲಿನಲ್ಲಿ ಕಾರ್ಯಕರ್ತರು ದುರಹಂಕಾರಿಗಳಾಗಬಾರದು. ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಜನರು ಕೇಸರಿ ಪಕ್ಷವನ್ನು ಒಂದು ಪರ್ಯಾಯ ಶಕ್ತಿಯಾಗಿ ಕಾಣಲು ಬಯಸುತ್ತಾರೆ’ ಎಂದು ವಿಜಯವರ್ಗೀಯ ಅವರು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದರು.
‘ಮುಂಬರುವ ವಿಧಾನಸಭಾ ಚುನಾವಣೆಯ ಸವಾಲನ್ನು ಎದುರಿಸುವ ನಿಟ್ಟಿನಲ್ಲಿ ಪಕ್ಷದ ಎಲ್ಲ ಪ್ರತಿನಿಧಿಗಳು ಮತ್ತು ನಾಯಕರು ರಾಜ್ಯದ ಜನರನ್ನು ತಲುಪಬೇಕು; ಆ ನಿಟ್ಟಿನಿಂದ ಈಗಿನಿಂದಲೇ ಸಿದ್ಧತೆ ಮಾಡಬೇಕು’ ಎಂದವರು ಹೇಳಿದರು.
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಶ್ಚಿಮ ಬಂಗಾಲದ 34 ಸೀಟುಗಳ ಪೈಕಿ 18 ಸೀಟುಗಳನ್ನು ಗೆದ್ದು ದಾಖಲೆ ನಿರ್ಮಿಸಿದೆ. ಟಿಎಂಸಿಯ ಗಳಿಕೆ 2014ರಲ್ಲಿದ್ದ 34ರಿಂದ ಈ ಬಾರಿ 22ಕ್ಕೆ ಇಳಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ಗೋ ಮಾಂಸ ತಿನ್ನೋದು ಸರಿ ಎಂದಾದರೆ ಮೂತ್ರ ಯಾಕೆ ಬೇಡ: ಬಿಜೆಪಿ
Delhi Polls: ದಿಲ್ಲಿ ವಿಧಾನಸಭೆಯ 70 ಸ್ಥಾನಕ್ಕೆ ಬರೋಬ್ಬರಿ 699 ಅಭ್ಯರ್ಥಿಗಳು ಸ್ಪರ್ಧೆ!
Supreme Court: ಟೆಕಿ ಅತುಲ್ ಪುತ್ರನನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
NRI: ಸಂಸತ್ತಿನಲ್ಲಿ ಎನ್‌ಆರ್‌ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ
Dog’s Revenge: ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಶ್ವಾನ…