![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Sep 10, 2021, 12:25 PM IST
ಭೂಪಾಲ್ : ಎಣ್ಣೆ ಒಳಹೊಕ್ಕರೆ ತಾವೇನು ಮಾಡುತ್ತಿದ್ದೇವೆ ಎನ್ನುವ ಅರಿವು ಕುಡುಕರಿಗೆ ಇರುವುದಿಲ್ಲ. ಮದ್ಯದ ಅಮಲಿನಲ್ಲಿ ತೇಲುವ ಅವರು ತಾವು ಮಾಡಿದ್ದೇ ಸರಿ ಎನ್ನುತ್ತಾರೆ.ಇಲ್ಲೊಬ್ಬಳು ದೆಹಲಿ ಮೂಲದ 22 ವರ್ಷ ವಯಸ್ಸಿನ ಮಾಡೆಲ್ ಎಣ್ಣೆ ಹೊಡೆದು ದೊಡ್ಡ ರಾದ್ದಾಂತ ಮಾಡಿಕೊಂಡಿದ್ದಾಳೆ.
ಕಂಠಪೂರ್ತಿ ಮದ್ಯ ಸೇವಿಸಿ ರಸ್ತೆಗೆ ಇಳಿದ ಈಕೆ, ಆರ್ಮಿ ಜೀಪ್‍ಗೆ ಅಡ್ಡಗಟ್ಟಿ ಅವಾಜ್ ಹಾಕಿದ್ದಾಳೆ. ನಶೆಯಲ್ಲಿ ಜೀಪ್‍ನ ಬಂಪರ್ ಗೆ ಕಾಲಿನ ಒದ್ದಿದ್ದಾಳೆ. ಈ ವೇಳೆ ಆಕೆಯ ಬ್ಯಾಗ್‍ನಲ್ಲಿದ್ದ ಸರಾಯಿ ಬಾಟಲ್ ಕೆಳಗೆ ಬಿದ್ದಿದೆ. ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ.
A 22-year-old model from Delhi created ruckus in an inebriated state in Gwalior she blocked an army vehicle started vandalising the vehicle, she pushed the jawan started arguing later a woman cop took her to the police station @ndtv @ndtvindia @GargiRawat @manishndtv pic.twitter.com/tdiqZF32EB
— Anurag Dwary (@Anurag_Dwary) September 10, 2021
ಸಂಜೆ ಹೊತ್ತು ಮದ್ಯ ಸೇವಿಸಿದ ಈಕೆ ವಾಹನಗಳಿಂದ ತುಂಬಿ ತುಳುಕುತ್ತಿದ್ದ ರಸ್ತೆಗೆ ಬಂದು ಗಲಾಟೆ ಮಾಡಿಕೊಂಡಿದ್ದಾಳೆ. ಅಲ್ಲಿಯೇ ಸಮೀಪದಲ್ಲಿದ್ದ ಸೇನೆಯ ವಾಹನಕ್ಕೆ ದಾರಿ ಬಿಡದೆ ಜಗಳ ಮಾಡಿದ್ದಾಳೆ. ನಶೆಯಲ್ಲಿ ವಾಹನಕ್ಕೆ ಒದ್ದಿದ್ದಾಳೆ. ದಾರಿ ಬಿಡುವಂತೆ ಕೇಳಲು ಬಂದ ಯೋಧನನ್ನೇ ದಬ್ಬಿ ದರ್ಪ ಮೆರೆದಿದ್ದಾಳೆ. ಘಟನೆ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನು ಘಟನೆ ಕುರಿತು ಸೇನಾ ಸಿಬ್ಬಂದಿಯಿಂದ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮಾಡೆಲ್‍ನ ದುರ್ವತನೆಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗಿದೆ.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.