ಬೇಟಿ ಬಚಾವೋ ಮಹಾಪಂಚಾಯತ್ ಸಭಾ ಕಾರ್ಯಕ್ರಮದಲ್ಲಿ ಮಹಿಳೆಯಿಂದ ವ್ಯಕ್ತಿಗೆ ಚಪ್ಪಲಿ ಏಟು!
ತನ್ನ ಮಗಳ ವಿಷಯದ ಕುರಿತು ಮಾತನಾಡಲು ಮಹಿಳೆ ವೇದಿಕೆ ಏರಿದ್ದಳು.
Team Udayavani, Nov 29, 2022, 3:52 PM IST
ನವದೆಹಲಿ: ದೇಶವನ್ನೇ ಬೆಚ್ಚಿಬೀಳಿಸಿದ್ದ ಶ್ರದ್ದಾ ವಾಲ್ಕರ್ ಪ್ರಕರಣ ಕುರಿತಂತೆ “ಬೇಟಿ ಬಚಾವೋ ಮಹಾಪಂಚಾಯತ್” ಕರೆದಿದ್ದ ಸಭೆಯಲ್ಲಿ ಮಹಿಳೆಯೊಬ್ಬರು ತನ್ನ ಮಗಳು ನಾಪತ್ತೆಯಾದ ಪ್ರಕರಣದಲ್ಲಿ ಪೊಲೀಸರ ನಿಷ್ಕ್ರಿಯತೆ ಬಗ್ಗೆ ಮಾತನಾಡಿದ್ದು, ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬನಿಗೆ ಬಹಿರಂಗವಾಗಿಯೇ ಚಪ್ಪಲಿಯಲ್ಲಿ ಹೊಡೆದ ಘಟನೆ ದೆಹಲಿಯಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಬೈಕ್ ಅಪಘಾತ…ಜ್ಞಾಪಕ ಶಕ್ತಿ ಕಳೆದುಕೊಂಡ ಪತಿ, ಪತ್ನಿ ಬಳಿಯೇ ಮತ್ತೆ ವಿವಾಹವಾಗುವಂತೆ ಪ್ರಸ್ತಾಪ!
ಚಪ್ಪಲಿಯಲ್ಲಿ ಪೆಟ್ಟು ತಿಂದ ವ್ಯಕ್ತಿಯ ಮಗ, ಆಕೆಯ ಮಗಳೊಂದಿಗೆ ಓಡಿಹೋಗಿದ್ದ ಎಂದು ವರದಿ ವಿವರಿಸಿದೆ. ಹಿಂದೂ ಏಕ್ತಾ ಮಂಚ್ ಆಯೋಜಿಸಿದ್ದ ಬೇಟಿ ಬಚಾವೋ ಮಹಾಪಂಚಾಯತ್ ಕಾರ್ಯಕ್ರಮದಲ್ಲಿ ತನ್ನ ಮಗಳ ವಿಷಯದ ಕುರಿತು ಮಾತನಾಡಲು ಮಹಿಳೆ ವೇದಿಕೆ ಏರಿದ್ದಳು. ಆಗ ಆಕೆ ತನ್ನ ಮಗನ ಬಗ್ಗೆ ವಿಷಯ ಪ್ರಸ್ತಾಪಿಸದಂತೆ ತಡೆಯಲು ವ್ಯಕ್ತಿ ಮುಂದಾದಾಗ, ಮಹಿಳೆ ಚಪ್ಪಲಿಯಿಂದ ಹೊಡೆದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
#WATCH | Chattarpur, Delhi: Woman climbs up the stage of Hindu Ekta Manch’s program ‘Beti Bachao Mahapanchayat’ to express her issues; hits a man with her slippers when he tries to push her away from the mic pic.twitter.com/dGrB5IsRHT
— ANI (@ANI) November 29, 2022
“ನಾನು ಕಳೆದ ಐದು ದಿನಗಳಿಂದ ಪೊಲೀಸ್ ಠಾಣೆಗೆ ಅಲೆಯುತ್ತಿದ್ದೇನೆ. ಆದರೆ ಯಾರೊಬ್ಬರೂ ನನ್ನ ದೂರನ್ನು ಕೇಳುತ್ತಿಲ್ಲ ಎಂದು ಮಹಿಳೆ ಮೈಕ್ ನಲ್ಲಿ ಹೇಳುತ್ತಿದ್ದು, ಆಗ ಆಕೆಯನ್ನು ತಡೆಯಲು ಯತ್ನಿಸಿದ ವ್ಯಕ್ತಿಗೆ ಚಪ್ಪಲಿಯಿಂದ ಹೊಡೆದಿದ್ದಾಳೆ.
ದೆಹಲಿಯಲ್ಲಿ ಅಫ್ತಾಬ್ ಪೂನಾವಾಲ ತನ್ನ ಲಿವ್ ಇನ್ ರಿಲೆಷನ್ ಶಿಪ್ ನ ಶ್ರದ್ಧಾ ವಾಲ್ಕರ್ ಳನ್ನು ದಾರುಣವಾಗಿ ಅಂತ್ಯಕಾಣಿಸಿದ್ದ. ಈ ಘಟನೆಯ ಆಘಾತದಲ್ಲಿರುವ ನಡುವೆಯೇ ಮತ್ತೊಂದು ಪ್ರಕರಣ ವರದಿಯಾಗಿತ್ತು. ಇದೀಗ ಮಹಿಳೆಯ ಮಗಳು ನಾಪತ್ತೆಯಾಗಿದ್ದು, ಪೊಲೀಸರಿಗೆ ದೂರು ನೀಡಿದ್ದರು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂಬುದಾಗಿ ಮಹಿಳೆ ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Honnavar;ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವತಿಯರ ರಕ್ಷಣೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.