ಪೊಲೀಸರ ಹತ್ಯೆ ಪ್ರಕರಣ: ನಟೋರಿಯಸ್ ರೌಡಿ ವಿಕಾಸ್ ದುಬೆ ಎನ್ ಕೌಂಟರ್ ಗೆ ಬಲಿ
Team Udayavani, Jul 10, 2020, 8:05 AM IST
ಉತ್ತರಪ್ರದೇಶ: ಕಾನ್ಪುರ ದಲ್ಲಿ ನಟೋರಿಯಸ್ ರೌಡಿಶೀಟರ್ ವಿಕಾಸ್ ದುಬೆಯನ್ನು ಎನ್ ಕೌಂಟರ್ ಮೂಲಕ ಹತ್ಯೆಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಕಾನ್ಪುರ ಸಮೀಪ ವಿಕಾಸ್ ದುಬೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಉತ್ತರಪ್ರದೇಶ ವಿಶೇಷ ಪೊಲೀಸ್ ಪಡೆ (ಎಸ್ ಟಿಎಫ್) ಈ ರೌಡಿಶೀಟರ್ ಅನ್ನು ಎನ್ ಕೌಂಟರ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಗುರುವಾರ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಬಂಧಿಸಲ್ಪಟ್ಟ ವಿಕಾಸ್ ದುಬೆಯನ್ನ ಇಂದು ಬೆಳಿಗ್ಗೆ ಕಾನ್ಪುರಕ್ಕೆ ಕರೆತರಲಾಗುತ್ತಿತ್ತು. ಆದರೇ ಉತ್ತರ ಪ್ರದೇಶದ ಎಸ್ ಟಿಎಫ್ ಪಡೆ ಕಾನ್ಪುರ ತಲುಪುತ್ತಿದ್ದಂತೆ, ಎಸ್ ಟಿಎಫ್ ಪಡೆಯ ವಾಹನವೊಂದು ಅಪಘಾತಕ್ಕೀಡಾಗಿ ಪಲ್ಟಿಯಾಗಿದೆ. ಈ ವೇಳೆ ವಿಕಾಸ್ ದುಬೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಇದರ ಪರಿಣಾಮವಾಗಿ ಎನ್ ಕೌಂಟರ್ ಆರಂಭಿಸಲಾಗಿದೆ.
ಈ ಘಟನೆ ಕಾನ್ಪುರದ ಸಚೆಂಡಿ ಗಡಿಯಲ್ಲಿ ನಡೆದಿದ್ದು. ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್ ಗಳೂ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಮಾಧ್ಯಮ ಮೂಲಗಳ ಪ್ರಕಾರ ವಿಕಾಸ್ ದುಬೆ ಈಗಾಗಲೇ ಸಾವನ್ನಪ್ಪಿದ್ದು, ಶವವನ್ನು ಸ್ಥಳದಿಂದ ಲಾಲಾ ಲಜಪತ್ ರಾಯ್ ಆಸ್ಪತ್ರೆ ಅಥವಾ ಹ್ಯಾಲೆಟ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದುಬಂದಿದೆ.
ಘಟನೆಯ ಹಿನ್ನಲೆ:
ಕಾನ್ಪುರ ಸಮೀಪ ಬಿಕ್ರು ಗ್ರಾಮದಲ್ಲಿ ಸುಮಾರು 60 ಅಪರಾಧ ಪ್ರಕರಣಗಳಲ್ಲಿ ಬೇಕಾಗಿದ್ದ ವಿಕಾಸ್ ದುಬೆ ಅಡಗಿಕೊಂಡಿರುವ ಖಚಿತ ಮಾಹಿತಿ ಪಡೆದು ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದರು. ಆದರೇ ಅಂದು ವಿಕಾಸ್ ದುಬೆಯ ಸಹಚರರು ಅಡಗುತಾಣದ ರೂಫ್ ಟಾಪ್ ನಿಂದ ಗುಂಡಿನ ದಾಳಿ ನಡೆಸಿ ಡಿಎಸ್ ಪಿ ಸೇರಿದಂತೆ 8 ಪೊಲೀಸರನ್ನು ಹತ್ಯೆ ಮಾಡಿದ್ದರು.
ಘಟನೆಯ ನಂತರ ವಿಕಾಸ್ ದುಬೆ ಪರಾರಿಯಾಗಿದ್ದ. ಪ್ರಕರಣ ಕೈಗೆತ್ತಿಕೊಂಡ ಉತ್ತರ ಪ್ರದೇಶ ವಿಶೇಷ ಪೊಲೀಸ್ ಪಡೆ ವಿಕಾಸ್ ದುಬೆಯ ಐವರು ಸಹಚರರನ್ನು ಎನ್ ಕೌಂಟರ್ ಮಾಡಿತ್ತು, ಗುರುವಾರ (9-7-2020) ರಂದು ವಿಕಾಸ್ ದುಬೆ ಉಜ್ಜೈನಿಯಲ್ಲಿ ಬಂಧಿತನಾಗಿದ್ದು. ಇಂದು ಎನ್ ಕೌಂಟರ್ ಮೂಲಕ ಆತನನ್ನು ಹೊಡೆದುರುಳಿಸಲಾಗಿದೆ.
Uttar Pradesh Special Task Force (STF) team along with history sheeter #VikasDubey who was arrested in Ujjain (Madhya Pradesh) yesterday, reaches Kanpur. pic.twitter.com/C405jxATZr
— ANI UP (@ANINewsUP) July 10, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.