ಕಾನ್ಪುರದ ಎಂಟು ಪೊಲೀಸರ ಹತ್ಯೆ ನಡೆಸಿದ್ದು 60 ಕೊಲೆ ಪ್ರಕರಣಗಳ ಆರೋಪಿ ವಿಕಾಸ್ ದುಬೆ!
Team Udayavani, Jul 3, 2020, 10:49 AM IST
ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಪೊಲೀಸರ ಮೇಲೆ ಗುಂಡಿನ ಮಳೆಗರೆದು ಡಿಎಸ್ ಪಿ ಸಹಿತ ಎಂಟು ಪೊಲೀಸರ ಸಾವಿಗೆ ಕಾರಣವಾಗಿದ್ದು, 60ಕ್ಕೂ ಹೆಚ್ಚು ಕೊಲೆ ಮತ್ತು ದರೋಡೆ ಪ್ರಕರಣಗಳ ಆರೋಪಿ ವಿಕಾಸ್ ದುಬೆ!
ವಿಕಾಸ್ ದುಬೆ ವಿರುದ್ಧ ರಾಹುಲ್ ತಿವಾರಿ ಎಂಬವರು ಕೊಲೆ ಯತ್ನದ ಪ್ರಕರಣ ದಾಖಲಿಸಿದ್ದರು. ಶುಕ್ರವಾರ (ಇಂದು) ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ತೆರಳಿದ್ದ ವೇಳೆಯಲ್ಲಿ ಏಕಾಏಕಿ ಗುಂಡಿನ ದಾಳಿ ನಡೆಸಿ ಪೊಲಿಸರನ್ನು ಕೊಲೆಗೈಯಲಾಗಿದೆ.
ಯಾರು ಈ ವಿಕಾಸ್ ದುಬೆ:
2001ರಲ್ಲಿ ಭಾರತೀಯ ಜನತಾ ಪಕ್ಷದ ನಾಯಕ ಸಂತೋಶ್ ಶುಕ್ಲಾ ಅವರನ್ನು ಕೊಂದ ಆರೋಪ ಈ ವಿಕಾಸ್ ದುಬೆ ಮೇಲಿದೆ. ಶಿವ್ಲಿ ಪೊಲೀಸ್ ಠಾಣೆಗೆ ನುಗ್ಗಿ ಈತ ಸಂತೋಶ್ ಶುಕ್ಲಾ ಅವರನ್ನು ಕೊಲೆಗೈದಿದ್ದ. ಘಟನೆಯಲ್ಲಿ ಇಬ್ಬರು ಪೊಲೀಸರು ಹತ್ಯೆಯಾಗಿದ್ದರು.
ಬಿಕ್ರು ಗ್ರಾಮದ ನಿವಾಸಿಯಾಗಿರುವ ಈತ ತನ್ನದೇ ಖಾಸಗಿ ಸೈನ್ಯವನ್ನು ಇಟ್ಟುಕೊಂಡಿದ್ದ. ಶುಕ್ಲಾ ಕೊಲೆ ಪ್ರಕರಣದಿಂದ ನಂತರ ಸೆಷನ್ ಕೋರ್ಟ್ ನಲ್ಲಿ ಖುಲಾಸೆಯಾಗಿದ್ದ.
ತಾರಾಚಂದ್ ಇಂಟರ್ ನ್ಯಾಶನಲ್ ಕಾಲೇಜು ಪ್ರಿನ್ಸಿಪಾಲ್ ಆಗಿದ್ದ ಸಿದ್ದೇಶ್ವರ ಪಾಂಡೆ ಕೊಲೆ ಪ್ರಕರಣದಲ್ಲೂ ದುಬೆ ಪ್ರಮುಖ ಆರೋಪಿಯಾಗಿದ್ದ. 2004ರಲ್ಲಿ ಉದ್ಯಮಿ ದಿನೇಶ್ ದುಬೆ ಹತ್ಯೆ ಪ್ರಕರಣದಲ್ಲೂ ವಿಕಾಸ್ ದುಬೆ ಹೆಸರು ಕೇಳಿ ಬಂದಿತ್ತು.
ಕೊಲೆ, ಸುಲಿಗೆ, ಅಪಹರಣ ಮುಂತಾದ ಕುಕೃತ್ಯಗಳಲ್ಲಿ ದುಬೆ ಹೆಸರಿದೆ. ಜೈಲಿನಲ್ಲಿದ್ದುಕೊಂಡೆ ಹತ್ಯೆಗಳಿಗೆ ಸ್ಕೆಚ್ ಸಿದ್ದಮಾಡುತ್ತಿದ್ದ ಎನ್ನಲಾಗಿದೆ. 2018ರಲ್ಲಿ ಈತನ ಸೋದರ ಸಂಬಂಧಿ ಅನುರಾಗ್ ಎನ್ನುವಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಈ ಯೋಜನೆಯನ್ನು ಮಾಟಿ ಜೈಲಿನಲ್ಲಿ ರೂಪಿಸಿದ್ದ ಎನ್ನಲಾಗಿದೆ. ಕೆಲವಷ್ಟು ಬಾರಿ ಜೈಲು ಸೇರಿದರೂ ಸಾಕ್ಷಾಧಾರಗಳ ಕೊರತೆಯಿಂದ ಬಿಡುಗಡೆಯಾಗುತ್ತಿದ್ದ.
ನಂತರ ಬಹುಜನ ಸಮಾಜ ಪಕ್ಷ ಸೇರ್ಪಡೆಯಾಗಿದ್ದ ಈತ ಶಿವರಾಜಪುರ್ ನಗರ ಪಂಚಾಯತ್ ಸದಸ್ಯನಾಗಿ ಆಯ್ಕೆಯಾಗಿದ್ದ.
ಕೊಲೆ ಬೆದರಿಕೆ ಪ್ರಕರಣದ ಆರೋಪದ ಮೇಲೆ ವಿಕಾಸ್ ದುಬೆನನ್ನು ಬಂಧಿಸಲು ತೆರಳಿದ ಪೊಲೀಸರ ಮೇಲೆ ಈತ ಮತ್ತು ಸಹಚರರು ಗುಂಡಿನ ದಾಳಿ ನಡೆಸಿದ್ದರು. ಇದರಿಂದ ಎಂಟು ಮಂದಿ ಪೊಲೀಸರು ಸಾವನ್ನಪ್ಪಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.