ಎನ್ ಕೌಂಟರ್ ನಿಂದ ರಕ್ಷಿಸಲು ಕ್ರಿಮಿನಲ್ ದುಬೆ ಬಂಧನದ ನಾಟಕ? ಏನಿದು ಗಂಭೀರ ಆರೋಪ
ಇದೆಲ್ಲವೂ ಮಧ್ಯಪ್ರದೇಶ ಬಿಜೆಪಿ ಹಿರಿಯ ಮುಖಂಡರು ಪೂರ್ವ ನಿರ್ಧರಿತವಾಗಿ ಮಾಡಿಕೊಂಡ ಯೋಜನೆಯಾಗಿದೆ ಎಂದು ಆರೋಪಿಸಿದ್ದಾರೆ.
Team Udayavani, Jul 9, 2020, 1:48 PM IST
ಲಕ್ನೋ: ಎಂಟು ಮಂದಿ ಪೊಲೀಸರನ್ನು ಹತ್ಯೆಗೈದು ತಲೆಮರೆಯಿಸಿಕೊಂಡಿದ್ದ ನಟೋರಿಯಸ್ ಕ್ರಿಮಿನಲ್ ವಿಕಾಸ್ ದುಬೆಯನ್ನು ಐದು ದಿನಗಳ ಬಳಿಕ ನಾಟಕೀಯ ಬೆಳವಣಿಗೆಯಲ್ಲಿ ಮಧ್ಯಪ್ರದೇಶದ ಉಜ್ಜೈನ್ ನಲ್ಲಿರುವ ಮಹಾಕಾಲ್ ದೇವಸ್ಥಾನದಲ್ಲಿ ಬಂಧಿಸಲಾಗಿದ್ದು, ಈ ಬಗ್ಗೆ ವಿರೋಧ ಪಕ್ಷದ ಮುಖಂಡರು ದುಬೆ ಬಂಧನ ನಾಟಕ ಎಂದು ಆರೋಪಿಸಿರುವುದಾಗಿ ವರದಿ ತಿಳಿಸಿದೆ.
ದುಬೆ ಬಂಧನ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್, ಉತ್ತರ ಪ್ರದೇಶ ಪೊಲೀಸರು ಎನ್ ಕೌಂಟರ್ ಮಾಡಿ ದುಬೆಯನ್ನು ಹತ್ಯೆಗೈಯುವುದನ್ನು ತಡೆಯುವ ನಿಟ್ಟಿನಲ್ಲಿ ರಕ್ಷಿಸಲಾಗಿದೆ. ಇದೆಲ್ಲವೂ ಮಧ್ಯಪ್ರದೇಶ ಬಿಜೆಪಿ ಹಿರಿಯ ಮುಖಂಡರು ಪೂರ್ವ ನಿರ್ಧರಿತವಾಗಿ ಮಾಡಿಕೊಂಡ ಯೋಜನೆಯಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ಕೊನೆಗೂ ಸಿಕ್ಕಿ ಬಿದ್ದ ಎಂಟು ಕಾನ್ಪುರ ಪೊಲೀಸರ ಹತ್ಯೆ ಆರೋಪಿ ವಿಕಾಸ್ ದುಬೆ!
ನಟೋರಿಯಸ್ ಕ್ರಿಮಿನಲ್ ವಿಕಾಸ್ ದುಬೆ ಶರಣಾಗಿದ್ದೋ ಅಥವಾ ಪೊಲೀಸರು ಬಂಧಿಸಿದ್ದಾರೆಯೇ ಎಂಬ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ತಿಳಿಸಿದ್ದಾರೆ.
ರಾಜಕೀಯ ಪಕ್ಷದ ಪ್ರತಿಷ್ಠಿತ ಗಣ್ಯರ ಜತೆ ಸಂಪರ್ಕ ಹೊಂದಿರುವವರ ಎಲ್ಲಾ ವಿವರವನ್ನು ಸರ್ಕಾರ ಬಹಿರಂಗಪಡಿಸುವ ಮೂಲಕ ಜನತೆಗೆ ಎಲ್ಲವನ್ನೂ ತಿಳಿಯುವಂತೆ ಮಾಡಬೇಕು ಎಂದು ಅಖಿಲೇಶ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ನಟೋರಿಯಸ್ ದುಬೆ Inside ಸ್ಟೋರಿ; ಅಂದು ಜೈಲು ಆವರಣದಲ್ಲಿ ಸಚಿವರನ್ನೇ ಕೊಂದಿದ್ದ
ಸುರಕ್ಷಿತಾವಾಗಿ ಕರೆ ತರುತ್ತೀರಾ?
ವಿಕಾಸ್ ದುಬೆಯನ್ನು ಮಧ್ಯಪ್ರದೇಶದಿಂದ ಸುರಕ್ಷಿತವಾಗಿ ಕರೆ ತರುತ್ತೀರಾ ಅಥವಾ ಆತ ಓಡಿ ಹೋಗಲು ಪ್ರಯತ್ನಿಸಲಿದ್ದಾನೆಯೇ ಎಂದು ಕಾಂಗ್ರೆಸ್ ವಕ್ತಾರ ಸುರೇಂದ್ರ ರಜ್ ಪೂತ್ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ. ಗ್ಯಾಂಗ್ ಸ್ಟರ್ ದುಬೆಯನ್ನು ವಾಪಸ್ ಕರೆತರುವುದು ಪೊಲೀಸರ ಕರ್ತವ್ಯವಾಗಿದೆ, ಅಷ್ಟೇ ಅಲ್ಲ ಆತನ ದೇಶದ ಕಾನೂನನ್ನು ಎದುರಿಸಬೇಕು ಎಂದು ತಿಳಿಸಿದ್ದಾರೆ.
ವಿಶೇಷ ಪೊಲೀಸ್ ತಂಡ (ಎಸ್ ಟಿಎಫ್) ಹಮೀರ್ ಪುರ್ ನಲ್ಲಿ ಪೊಲೀಸ್ ಎನ್ ಕೌಂಟರ್ ನಲ್ಲಿ ಬಲಿಯಾಗಿದ್ದ ಅಮರ್ ದುಬೆ ಪತ್ನಿ ಖುಷಿಯನ್ನು ಬಂಧಿಸಿದ್ದಾರೆ. ಈ ನಿಟ್ಟಿನಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಜಿತಿನ್ ಪ್ರಸಾದ್ ಅವರು ಉತ್ತರಪ್ರದೇಶ್ ಪೊಲೀಸರ ಪಾತ್ರವನ್ನು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಎಂಟು ಪೊಲೀಸರನ್ನು ಹತ್ಯೆಗೈದಿದ್ದ ನಟೋರಿಯಸ್ ರೌಡಿ ವಿಕಾಸ್ ದುಬೆ ಮನೆ ನೆಲಸಮ
ಖುಷಿ ಬಂಧನವನ್ನು ಎಸ್ ಟಿಎಫ್ ಈವರೆಗೂ ಅಧಿಕೃತವಾಗಿ ಘೋಷಿಸಿಲ್ಲ. ಆದರೆ ಸ್ಥಳೀಯ ಜನರು ಅಮರ್ ಸಂಬಂಧಿಕರನ್ನು ಹಾಗೂ ಪತ್ನಿಯನ್ನು ಪೊಲೀಸರು ಕರೆದೊಯ್ದಿದ್ದು ಈವರೆಗೆ ವಾಪಸ್ ಬಂದಿಲ್ಲ ಎಂದು ತಿಳಿಸಿದ್ದಾರೆ. ಅಮರ್ ದುಬೆ ಖುಷಿಯನ್ನು ಜೂನ್ 29ರಂದು ವಿವಾಹವಾಗಿದ್ದ, ಅದು ಬಿಕ್ರು ಗ್ರಾಮದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಹತ್ಯೆಗೀಡಾಗುವ ಮೂರು ದಿನದ ಮೊದಲು ವಿವಾಹ ನಡೆದಿತ್ತು. ಮದುವೆಯಾದ ಒಂದು ವಾರದಲ್ಲಿ ಆಕೆ ವಿಧವೆಯಾಗಿದ್ದಾಳೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.