4 ಹೊಸ ತಳಿಯ ಬಳ್ಳಿ ಹಾವು ಪತ್ತೆ
Team Udayavani, Nov 14, 2020, 1:10 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಪಶ್ಚಿಮಘಟ್ಟ ಪ್ರದೇಶ ಸೇರಿದಂತೆ ಭಾರತದ ಪರ್ಯಾಯದ್ವೀಪ ಪ್ರದೇಶದ ಹಲವು ಭಾಗಗಳಲ್ಲಿ 5 ಹೊಸ ತಳಿಯ ಬಳ್ಳಿ ಹಾವುಗಳನ್ನು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸಸ್ (ಐಐಎಸ್‌ಸಿ)ನ ಸೆಂಟರ್ ಫಾರ್ ಇಕಲಾಜಿಕಲ್ ಸೈನ್ಸಸ್‌ನ ಸಂಶೋಧಕರ ತಂಡ ಪತ್ತೆಹಚ್ಚಿದೆ.
ಪಶ್ಚಿಮಘಟ್ಟಗಳ ಮಳೆಕಾಡುಗಳಲ್ಲಿ ತೆಳ್ಳಗಿನ ಶರೀರ ಮತ್ತು ಚಿಕ್ಕ ಮೂಗು ಹೊಂದಿರುವ 4 ವಿಶಿಷ್ಟ ತಳಿಯ ಬಳ್ಳಿ ಹಾವುಗಳು ಕಂಡುಬಂದಿವೆ ಎಂದು ಅಶೋಕ್ ಕುಮಾರ್ ಮಲಿಕ್ ನೇತೃತ್ವದ ಸಂಶೋಧಕರ ತಂಡ ಹೇಳಿದೆ.
ಈ ತಳಿಗಳ ಹಾವುಗಳ ರೂಪವಿಜ್ಞಾನ ಒಂದೇ ಮಾದರಿಯಲ್ಲಿದ್ದರೂ, ಭೌಗೋಳಿಕವಾಗಿ ಭಿನ್ನವಾಗಿವೆ. ಇನ್ನು, ಪರ್ಯಾ ಯ ದ್ವೀಪದ ಒಣ ಭಾಗಗಳಲ್ಲಿ ರೂಪದಲ್ಲೂ ವಿಶಿಷ್ಟವೆನಿಸಿರುವ ಹಾಗೂ ಉದ್ದ ನೆಯ ಮೂಗು ಹೊಂದಿರುವ ಬಳ್ಳಿ ಹಾವಿನ ತಳಿ (ಅಹೆತುಲ್ಲಾ ಆಕ್ಸಿರಿಂಚ) ಪತ್ತೆಯಾಗಿದೆ ಎಂದು ಸಂಶೋ ಧಕರು ತಿಳಿಸಿದ್ದಾರೆ. ಒಟ್ಟಾರೆ, ಪಶ್ಚಿಮ ಘಟ್ಟದಲ್ಲಿ ಪ್ರಸ್ತುತ 6 ಜಾತಿಯ ಬಳ್ಳಿ ಹಾವುಗಳಿವೆ ಎಂದಿದ್ದಾರೆ. ಈ ಅಧ್ಯಯನ ವರದಿಯು ಝೂಟಾಕ್ಸಾ ನಿಯತ ಕಾಲಿಕೆಯಲ್ಲಿ ಪ್ರಕಟವಾಗಿದೆ. ಚೆನ್ನೈ ಸ್ನೇಕ್ ಪಾರ್ಕ್‌ನ ಸಂಶೋಧಕ ಎಸ್.ಆರ್.ಗಣೇಶ್, ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಸೌನಕ್ ಪಾಲ್ ಮತ್ತು ಐಐಎಸ್‌ಸಿಯ ಪ್ರಿನ್ಸಿಯಾ ಡಿ’ಸೋಜಾ ಅವರ ಸಹಭಾಗಿತ್ವದಲ್ಲಿ ಈ ಅಧ್ಯಯನ ಕೈಗೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.