ನಂಬಿಕೆ ಹೆಸರಲ್ಲಿ ಹಿಂಸಾಚಾರ ಸಹಿಸುವುದಿಲ್ಲ: ಪ್ರಧಾನಿ
Team Udayavani, Aug 28, 2017, 6:00 AM IST
ನವದೆಹಲಿ: ಸ್ವಘೋಷಿತ ದೇವಮಾನವ ರಾಮ್ ರಹೀಮ್ ಸಿಂಗ್ ಬಂಧನ ವಿರೋಧಿಸಿ ಪಂಥದ ಅನುಯಾಯಿಗಳು ನಡೆಸಿದ ವ್ಯಾಪಕ ಹಿಂಸಾಚಾರದ ಕುರಿತಂತೆ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಕಟು ಎಚ್ಚರಿಕೆಯನ್ನು ನೀಡಿದ್ದಾರೆ. “ನಂಬಿಕೆ ಹೆಸರಲ್ಲಿ ನಡೆಸುವ ಹಿಂಸಾಚಾರವನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಖಚಿತ. ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶವಿಲ್ಲ. ಎಲ್ಲರೂ ಕಾನೂನು ಮುಂದೆ ತಲೆಬಾಗಲೇಬೇಕು’ ಎಂದು ಹೇಳಿದ್ದಾರೆ.
ರೇಡಿಯೋ ಕಾರ್ಯಕ್ರಮ ಮನ್ಕೀ ಬಾತ್ನಲ್ಲಿ ಮಾತನಾಡಿದ ಅವರು, “ಬುದ್ಧ ಮತ್ತು ಗಾಂಧಿ ನಮ್ಮ ದೇಶಕ್ಕೆ ಅಹಿಂಸಾ ಪರಮೋಧರ್ಮ ಎಂಬ ಪರಂಪರೆಯನ್ನು ನೆನಪಿಸಿದವರು. ಇದರೊಂದಿಗೆ ಡಾ.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ, ದೂರುಗಳನ್ನು ಕೇಳಿ ಎಲ್ಲರಿಗೂ ನ್ಯಾಯ ಒದಗಿಸುವ ಹೊಣೆ ಹೊತ್ತುಕೊಂಡಿದೆ’ ಎಂದು ಹೇಳಿದರು.
“ದೇಶ ಹಬ್ಬದ ಸಡಗರದಲ್ಲಿರುವಾಗಲೇ ಮತ್ತೂಂದೆಡೆ ಹಿಂಸಾಚಾರದ ಸುದ್ದಿ ತೀವ್ರ ಕಳವಳಕಾರಿಯಾಗಿದೆ ಎಂದಿದ್ದಾರೆ. ಎಲ್ಲಿಯೂ ಡೇರಾ ಸಚ್ಚಾ ಸೌದಾದ ಬಗ್ಗೆ ಪ್ರಸ್ತಾಪಿಸದ ಪ್ರಧಾನಿ ಮೋದಿ, ಶುಕ್ರವಾರ ನಡೆದ ಹಿಂಸಾಕೃತ್ಯವನ್ನು ಗಾಂಧಿ ಮತ್ತು ಬುದ್ಧನ ಹೆಸರು ಹೇಳಿಯೇ ಖಂಡಿಸಿದ್ದಾರೆ. ಧರ್ಮದ ಕಾರಣಕ್ಕಾಗಲಿ ಅಥವಾ ರಾಜಕೀಯ ಪಕ್ಷವೊಂದರ ಲಾಭಕ್ಕಾಗಲಿ ಇಡೀ ದೇಶದಲ್ಲಿ ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಒಂದೊಮ್ಮೆ ಹಿಂಸಾ ಹಾದಿ ಹಿಡಿದರೆ ಈ ದೇಶದ ಕಾನೂನು ತಕ್ಕ ಪಾಠ ಕಲಿಸುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.