ಹಿಂಸಾಚಾರವೊಂದೇ ಸಮಸ್ಯೆಗೆ ಪರಿಹಾರವಲ್ಲ: ರಜನಿಕಾಂತ್ ಟ್ವೀಟ್ ಗೆ ಬೆಂಬಲ, ಟೀಕೆಗಳ ಸುರಿಮಳೆ
Team Udayavani, Dec 20, 2019, 10:26 AM IST
ತಮಿಳುನಾಡು : ಸೂಪರ್ ಸ್ಟಾರ್ ರಜಿನಿಕಾಂತ್ ಕೊನೆಗೂ ಪೌರತ್ವ ತಿದ್ದುಪಡಿ ಮಸೂದೆಯ ಕುರಿತು ಮೌನ ಮುರಿದಿದ್ದು ಹಿಂಸಾಚಾರವೊಂದೇ ಸಮಸ್ಯೆಗೆ ಪರಿಹಾರವಲ್ಲ ಎಂದು ಟ್ವೀಟ್ ಮಾಡಿದ್ದಾರೆ . ರಜನೀಕಾಂತ್ ಅವರ ಈ ಟ್ವೀಟ್, ಟ್ವೀಟ್ಟರ್ ನಲ್ಲಿ ನಂಬರ್ 1 ಸ್ಥಾನ ಗಳಿಸಿದ್ದು ಪರ ವಿರೋಧ ಚರ್ಚೆಗೆ ಕಾರಣವಾಗಿದೆ.
ಭಾರತೀಯ ನಾಗರಿಕರು ರಾಷ್ಟ್ರದ ಭದ್ರತೆ ಮತ್ತು ಕಲ್ಯಾಣದ ಕುರಿತು ಒಗ್ಗಟ್ಟಿನಿಂದಿರಬೇಕು ಮತ್ತು ಜಾಗೃತರಾಗಿರಬೇಕು. ಆದರೇ ದೇಶಾದ್ಯಂತ ಹಿಂಸಾಚಾರವಾಗುತ್ತಿರುವುದು ಕಂಡು ನಾನು ತುಂಬಾ ದುಃಖಿತನಾಗಿದ್ದೇನೆ ಎಂದು ಟ್ವೀಟ್ ಮಾಡಿದ್ದರು.
ಆದರೇ ಕೆಲ ಸಮಯದ ನಂತರ ನೆಟ್ಟಿಗರು ಪರ ವಿರೋಧದ ಚರ್ಚೆಯನ್ನು ಆರಂಭಿಸಿದ್ದು #IStandWithRajinikanth ಮತ್ತು #ShameOnYouSanghiRajini ಎಂಬ ಹ್ಯಾಷ್ ಟ್ಯಾಗ್ ಗಳು ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿವೆ.
ಕೆಟ್ಟ ಆಲೋಚನೆಗಳು ಮೊದಲು ನಮ್ಮನ್ನು ಆಕರ್ಷಿಸುತ್ತದೆ, ಆದರೆ ಸಮಸ್ಯೆಯನ್ನು ಪರಿಹರಿಸುವ ಬದಲು ಇನ್ನಷ್ಟು ಬಿಗಡಾಯಿಸುವಂತೆ ಮಾಡುತ್ತವೆ. ಅಹಿಂಸೆ ಮತ್ತು ಉತ್ತಮ ಆಲೋಚನೆಗಳು ಆರಮಭದಲ್ಲಿ ನಮ್ಮ ಕಾರ್ಯಸಾಧುವಲ್ಲ ಎನಿಸಬಹದು. ಆದರೆ ಶಾಶ್ವತವಾದ ಪರಿಹಾರಗಳನ್ನು ಒದಗಿಸುತ್ತದೆ, ನಾವೆಲ್ಲರೂ ವಿದ್ಯಾವಂತರು. ಶಾಂತಿಯುತವಾಗಿ ಪ್ರತಿಭಟಿಸೋಣ ಎಂದು ಅಭಿಮಾನಿಗಳು ಕರೆ ನೀಡಿದ್ದಾರೆ.
ರಜನಿಕಾಂತ್ ಸಹ ಪೌರತ್ವ ಮಸೂದೆಯನ್ನು ಒಪ್ಪುವುದಿಲ್ಲ. ಹಾಗೆಂದು ಅವರು ಹಿಂಸಾಚಾರವನ್ನು ಸಮರ್ಥಿಸಲು ಹೋಗುವುದಿಲ್ಲ. ಒಬ್ಬ ನಿಜವಾದ ಭಾರತೀಯ ಯೋಚಿಸುವ ರೀತಿಯಲ್ಲಿ ರಜನಿ ಯೋಚಿಸುತ್ತಿದ್ದಾರೆ ಎಂದು ಕೆಲವು ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.
I oppose CAA, protesting is the only way of showing opposition, but I don’t want any violence in protests
If you ask me who started violence, how will I know? I can only wish there is no violence
My thoughts exactly match with Thalaivar’s statement so #IStandWithRAJINIKANTH
— ரௌடி (@Rowdy_3_) December 19, 2019
ರಜನಿಕಾಂತ್ ಎಂದಿಗೂ ಜನಪರ ನಿಲುವು ತಳೆದವರಲ್ಲ. ಅಧಿಕಾರದಲ್ಲಿರುವವರನ್ನು ಓಲೈಸುವುದೇ ಅವರಿಗೆ ಸದಾ ಮುಖ್ಯ. ಮೇಲಿದ್ದವರು ಯಾವ ಹೇಳಿಕೆ ನೀಡಿ ಎನ್ನುತ್ತಾರೋ, ಅಂಥದ್ದೇ ಹೇಳಿಕೆಯನ್ನು ರಜನಿ ಕೊಡುತ್ತಾರೆ ಎಂದು ಕೆಲವರು ಹರಿಹಾಯ್ದಿದ್ದಾರೆ.
ಭಗತ್ ಸಿಂಗ್ ಒಂದು ವೇಳೆ ಈಗ ಬದುಕಿದ್ದಿದ್ದರೆ ಅವರಿಗೆ ರಜನಿಕಾಂತ್ ನೀಡುತ್ತಿದ್ದ ಸಲಹೆ ಏನಾಗಿರುತ್ತಿತ್ತು. ಎಂದು ಪ್ರಶ್ನಿಸಿರುವ ಮತ್ತೊಬ್ಬರು ಭಾರತಕ್ಕೆ ಕೆಲ ಉತ್ತಮ ನಾಯಕರು ಬೇಕಿದ್ದಾರೆ ಎಂದು ಕೆಲವರು ರಜನಿಕಾಂತ್ ಅವರಿಗೆ ಆರ್ ಎಸ್ ಎಸ್ ಸಮವಸ್ತ್ರ ತೊಡಿಸಿರುವ ಚಿತ್ರದೊಂದಿಗೆ ಲೇವಡಿ ಮಾಡಿದ್ದಾರೆ.
What do you think Mr.Rajinikanth’s Advice to Bhagat Singh Would have been, had he been living during his time ??
INDIA DESERVES BETTER ICONS.#IndiansAgainstCAA #IndiaRejectsCAA #ShameOnYouSanghiRajini pic.twitter.com/l10wR3HgfW
— Facts Only Matter (@Verizon33387597) December 20, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru Airport; 20 ಲಕ್ಷ ರೂ.ಗಳ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ
Mangaluru; ಟ್ಯಾಂಕರ್ ವ್ಯವಹಾರ: ನಕಲಿ ದಾಖಲೆ ಸೃಷ್ಟಿಸಿ ವಂಚನೆ
ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.