Viral Video: ಹೆಚ್ಚುವರಿ ಹಣ ನೀಡದ ಗ್ರಾಹಕನಿಗೆ ಥಳಿಸಿದ ಆಟೋ ರಿಕ್ಷ ಚಾಲಕರು; ಓರ್ವನ ಬಂಧನ
Team Udayavani, Aug 12, 2024, 12:52 PM IST
ಮುಂಬೈ: ಹೆಚ್ಚುವರಿ ಹಣ ನೀಡದ ಕಾರಣಕ್ಕೆ ಪ್ರಯಾಣಿನೊಬ್ಬನಿಗೆ ಆಟೋ ರಿಕ್ಷಾ ಚಾಲಕರು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಮಂಖುರ್ದ್ ರೈಲ್ವೆ ಠಾಣೆಯ ಬಳಿ ಈ ಘಟನೆ ನಡೆದಿತ್ತು.
ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಆರೋಪಿ ಅಖೀಲ್ ಯೂನಸ್ ಶೇಖ್ ಎಂಬಾತನನ್ನು ಬಂಧಿಸಲಾಗಿದೆ. ಹೆಚ್ಚುವರಿ ಶುಲ್ಕವನ್ನು ನೀಡಲು ನಿರಾಕರಿಸಿದ ನಂತರ 21 ವರ್ಷದ ಸಂತ್ರಸ್ತ ಸೊಹೈಲ್ ಅನ್ಸಾರಿ ಮೇಲೆ ಆಟೋರಿಕ್ಷಾ ಚಾಲಕರು ಹಲ್ಲೆ ನಡೆಸಿದ್ದಾರೆ.
ಮುಂಬೈ ಪೊಲೀಸರು ಬಂಧನದ ಬಗ್ಗೆ ಎಕ್ಸ್‌ನಲ್ಲಿ (ಟ್ವಿಟರ್) ಘೋಷಣೆ ಮಾಹಿತಿ ನೀಡಿದ್ದಾರೆ.
“ಹೆಚ್ಚುವರಿ ದರವನ್ನು ಪಾವತಿಸುವ ವಿವಾದದಲ್ಲಿ ಆಟೋ-ರಿಕ್ಷಾ ಚಾಲಕರು ಪ್ರಯಾಣಿಕರೊಬ್ಬರ ಮೇಲೆ ಮಂಖುರ್ದ್ ರೈಲ್ವೆ ನಿಲ್ದಾಣದ ಬಳಿ ಹಲ್ಲೆ ನಡೆಸಿದ ಘಟನೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯೊಬ್ಬನ ಬಂಧನವಾಗಿದೆ. ಇನ್ನುಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ’ ಎಂದು ಪೋಸ್ಟ್ ತಿಳಿಸಿದೆ.
🧵 Serious Content! Warning ⚠️ Alert
Mankhurd Railway Station; Auto Stand Conflicts arise on road
Attn : @MTPHereToHelp @MumbaiPolice
❗ @ANI @PTI_News @DGPMaharashtra @RPFCR @RailMinIndia @EasternRailway pic.twitter.com/S7FFaICnaH
— Govandi Citizens Welfare Forum (@GovandiCell) August 10, 2024
ಮೂವರು ಆರೋಪಿಗಳು ಅನ್ಸಾರಿ ಮೇಲೆ ಹಲ್ಲೆ ನಡೆಸಿದ್ದು, ಅವರಲ್ಲಿ ಒಬ್ಬ ಬೆಲ್ಟ್ ಬಳಸಿ ಆತನಿಗೆ ಹೊಡೆದಿದ್ದಾರೆ. ಅನ್ಸಾರಿ ಅವರ ಎದೆ ಮತ್ತು ತಲೆಯ ಮೇಲೆ ಸೊಂಟದ ಬೆಲ್ಟ್ ನಿಂದ ಪದೇ ಪದೇ ಹೊಡೆದು ಥಳಿಸಲಾಗಿದೆ. ಆರೋಪಿಗಳು ಅನ್ಸಾರಿಗೆ ಘಟನೆಯನ್ನು ಪೊಲೀಸರಿಗೆ ತಿಳಿಸದಂತೆ ಬೆದರಿಕೆ ಹಾಕಿದ್ದರು, ಆದರೆ ಅನ್ಸಾರಿ ದೂರು ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.