![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Nov 26, 2022, 1:04 PM IST
ನವದೆಹಲಿ: ನಮಗೆ ಹೆಚ್ಚು ಸಮಯ ಕೈಯಲ್ಲಿ ಭಾರವಾದ ವಸ್ತುಗಳನ್ನು ಹಿಡಿದುಕೊಂಡು ಹೋಗಲು ಕಷ್ಟವಾಗುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ ಭಾರವಾಗಿದ್ದನ್ನು ತನ್ನ ತಲೆಯ ಮೇಲೆಯೇ ಇಟ್ಟುಕೊಂಡು ಗಮನ ಸೆಳೆದಿದ್ದಾನೆ.
ಸಾಮಾನ್ಯವಾಗಿ ಮಹಿಳೆಯರು ಅಥವಾ ಕಾರ್ಮಿಕರು ಮೀನಿನ ಬುಟ್ಟಿಯನ್ನೋ, ಸಿಮೆಂಟಿನ ಚೀಲವನ್ನೋ ತಲೆಯ ಮೇಲೆ ಇಟ್ಟುಕೊಂಡು ಹೋಗುವುದನ್ನು ನೋಡಿದ್ದೇವೆ. ಅಲ್ಪ ಸ್ವಲ್ಪ ಆಚೆ ಇಚೆ ಆದರೂ ಬೀಳುವುದು ಖಚಿತ. ಟ್ವಟರ್ ಬಳಕೆದಾರರೊಬ್ಬರು ವ್ಯಕ್ತಿಯೊಬ್ಬ ತಲೆಯ ಮೇಲೆ ಬೈಕ್ ನ್ನು ಎತ್ತಿಕೊಂಡು ಬಸ್ಸಿನ ಮೇಲೆ ಹಾಕುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಗುಲ್ಜಾರ್ ಸಾಹಬ್ ಎನ್ನುವವರು ನ.25 ( ಶುಕ್ರವಾರ) ಟ್ವಟರ್ ನಲ್ಲಿ ವ್ಯಕ್ತಿಯೊಬ್ಬ ತನ್ನ ತಲೆಗೆ ಮುಂಡಾಸು ರೀತಿಯ ಬಟ್ಟೆ ಕಟ್ಟಿಕೊಂಡು ಭಾರವಾದ ಬೈಕೊಂದನ್ನು ಎತ್ತಿಕೊಂಡು ಏಣಿಯ ಮೇಲೆ ಹತ್ತಿ ಬಸ್ಸಿನ ಮೇಲೆ ಇಡುವ ವಿಡಿಯೋವನ್ನು ಹಂಚಿಕೊಂಡು ಇವರು ನಿಜಕ್ಕೂ ಸೂಪರ್ ಹ್ಯೂಮನ್ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.
ಈ ದೃಶ್ಯ ಎಲ್ಲಿಯದು ಎಂಬುವುದು ತಿಳಿದಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. 88 ಸಾವಿರ ವೀಕ್ಷಣೆಯಾಗಿದ್ದು, 5.8 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.
ಟ್ವಟರ್ ಬಳಕೆದಾರರೊಬ್ಬರು, “ನನಗೆ ಇವರ ರೀತಿಯ ಕುತ್ತಿಗೆಯ ಶಕ್ತಿಬೇಕೆಂದಿದ್ದಾರೆ. ಮತ್ತೊಬ್ಬರು ಇವರು ರಿಯಲ್ ಬಾಹುಬಲಿ ಎಂದು ಟ್ವೀಟ್ ಮಾಡಿದ್ದಾರೆ.
They are really super human 👏🔥❤️ pic.twitter.com/kNruhcRzE1
— ज़िन्दगी गुलज़ार है ! (@Gulzar_sahab) November 25, 2022
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.