ಅನಾಥ ಶಿಶುವಿಗೆ ವಿರಾಟ್ ಹೆಸರು
Team Udayavani, Jun 19, 2019, 5:00 AM IST
ತಿರುವನಂತಪುರ: ಅನಾಥ ಮಕ್ಕಳ ಪೋಷಣೆಗಾಗಿಯೇ ಕೇರಳ ಸರಕಾರ ತೆರೆದಿರುವ “ಥನಲ್’ ಕೇಂದ್ರಕ್ಕೆ ಶನಿವಾರ ರಾತ್ರಿ ಸುಮಾರು 8 ಗಂಟೆಗೆ ಸೇರ್ಪಡೆಯಾದ 3 ದಿನಗಳ ಗಂಡು ಮಗುವಿಗೆ ಭಾರತೀಯ ಪುರುಷರ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪ್ರತೀಕವಾಗಿ ವಿರಾಟ್ ಎಂದು ಹೆಸರಿಡಲಾಗಿದೆ. ಜತೆಗೆ, ಮಂಗಳವಾರ ಮಧ್ಯಾಹ್ನ 12:30ರ ಸುಮಾರಿಗೆ ಸಿಕ್ಕಿದ್ದ 4 ದಿನಗಳ ಹೆಣ್ಣು ಶಿಶುವಿಗೆ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ಅವರ ಪ್ರತೀಕವಾಗಿ ಮಿಥಾಲಿ ಎಂಬ ಹೆಸರನ್ನು ಇಡಲಾಗಿದೆ. ಎಲ್ಲೆಲ್ಲೂ ಕ್ರಿಕೆಟ್ ವಿಶ್ವಕಪ್ ಸಡಗರ ಹರಡಿರುವುದರಿಂದ ಇವರಿಗೆ ಕ್ರಿಕೆಟಿಗರ ಹೆಸರುಗಳನ್ನೇ ಇಡಲಾಗಿದೆ ಎಂದು ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. ಫೆಬ್ರವರಿಯಲ್ಲಿ ಸಿಎಂ ಪಿಣರಾಯಿ ವಿಜಯನ್ ಅವರಿಂದ ಉದ್ಘಾಟನೆಗೊಂಡ “ಥನಲ್’ ಕೇಂದ್ರದಲ್ಲಿ ನೂರಾರು ಅನಾಥ ಶಿಶುಗಳಿಗೆ ಆಶ್ರಯ ಸಿಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.