ಗಂಟೆಗೆ 1,078 ಕಿ.ಮೀ. ವೇಗದಲ್ಲಿ ಸಾಗುವ ಹೈಪರ್‌ಲೂಪ್
ಶರವೇಗದ ಸಾರಿಗೆಯ ಪೂರ್ವಭಾವಿ ವಿಡಿಯೋ ರಿಲೀಸ್
Team Udayavani, Aug 26, 2021, 9:30 PM IST
ನವದೆಹಲಿ: ಇತ್ತೀಚೆಗೆ, ಗ್ಯಾಲಾಕ್ಟಿಕ್ ಎಂಬ ಬಾಹ್ಯಾಕಾಶ ನೌಕೆಯ ಮೂಲಕ ಬಾಹ್ಯಾಕಾಶ ಪ್ರವಾಸ ಕೈಗೊಂಡು ಸುದ್ದಿಯಾಗಿದ್ದ ವರ್ಜಿನ್ ಕಂಪನಿ, ತನ್ನ ಮಹದೋದ್ದೇಶದ ಮತ್ತೊಂದು ಯೋಜನೆಯಾದ ವರ್ಜಿನ್ ಹೈಪರ್‌ಲೂಪ್‌ನ ರೂಪುರೇಷೆಗಳು, ಅನುಕೂಲಗಳು ಹೇಗಿರುತ್ತವೆ ಎಂಬುದರ ಬಗ್ಗೆ ಪೂರ್ವಭಾವಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.
21ನೇ ಶತಮಾನದ ಅತ್ಯಂತ ವೇಗದ ಸಾರಿಗೆ ವ್ಯವಸ್ಥೆ ಇದಾಗಿರಲಿದ್ದು, ಈ ವ್ಯವಸ್ಥೆಯಡಿ ಜನರು ಗಂಟೆಗೆ 1,078 ಕಿ.ಮೀ. ವೇಗದಲ್ಲಿ ಪ್ರಯಾಣಿಸಿ, ಅತಿ ದೂರದ ನಗರಗಳನ್ನೂ ಕೆಲವೇ ನಿಮಿಷಗಳಲ್ಲಿ ತಲುಪಬಹುದು. ಇಂದಿನ ಅತಿ ಹೆಚ್ಚು ವೇಗದಲ್ಲಿ ಸಾಗುವ ರೈಲುಗಳಿಗೆ ಹೋಲಿಸಿದರೆ ಇದರ ವೇಗ 10 ಪಟ್ಟು ಹೆಚ್ಚು ಎಂದು ಸಂಸ್ಥೆ ಹೇಳಿದೆ. ಅಂದಹಾಗೆ, ಸುಮಾರು 2-3 ವರ್ಷಗಳ ಹಿಂದೆಯೇ ಹೈಪರ್‌ಲೂಪ್ ಪರಿಕಲ್ಪನೆಯನ್ನು ಈ ಕಂಪನಿ ಅನಾವರಣಗೊಳಿಸಿತ್ತು. ಈಗ, ಅದರ ವಿನ್ಯಾಸದ ಬಗ್ಗೆ ಒಂದು ಪೂರ್ವಭಾವಿ ಪರಿಕಲ್ಪನೆಯನ್ನು ಬಿತ್ತುವ ಸಲುವಾಗಿ ಈ ವಿಡಿಯೋ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ:ನಾವು ವಿಕೆಂಡ್ ಕರ್ಫ್ಯೂ ಪಾಲಿಸಲ್ಲ, ವ್ಯಾಪಾರ ನಡೆಸುತ್ತೇವೆ : ಸರಕಾರಕ್ಕೆ HKCCI ಎಚ್ಚರಿಕೆ
ವಿಡಿಯೋದಲ್ಲಿ, ಹೈಪರ್‌ಲೂಪ್ ಸಾರಿಗೆ ವ್ಯವಸ್ಥೆಯು ಒಂದು ಸುರಂಗವಿರುವ ಮೇಲ್ಸೇತುವೆ ಮೂಲಕ ಹಾದು ಹೋಗುವುದಾಗಿ ತೋರಿಸಲಾಗಿದೆ. ಪಾಡ್‌ಗಳ (ಪ್ರಯಾಣಿಕರು ಕುಳಿತುಕೊಳ್ಳುವ ಬೋಗಿ) ವಿನ್ಯಾಸ, ಅದರಲ್ಲಿನ ಆಸನ ವ್ಯವಸ್ಥೆ, ಸ್ಟೇಷನ್‌ಗಳ ಮಾದರಿ, ಅತಿ ವೇಗವಾಗಿ ಸಾಗುವಾಗ ಆಗುವ ಅನುಭವಗಳನ್ನು ವಿಡಿಯೋದಲ್ಲಿ ತೋರಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಜಾರಿಯಾಗುವ ಸಾಧ್ಯತೆ
ಭಾರತದಲ್ಲಿ ಪುಣೆ- ಮುಂಬೈ ನಡುವೆ ಹೈಪರ್‌ಲೂಪ್ ಸಂಚಾರ ಸ್ಥಾಪನೆಗೆ ಕೇಂದ್ರ ಸರ್ಕಾರ ಈ ಹಿಂದೆಯೇ ಒಪ್ಪಿಗೆ ನೀಡಿತ್ತು. ಆದರೆ, ಕಾಮಗಾರಿ ಇನ್ನೂ ಶುರುವಾಗಿಲ್ಲ. ಈ ಎರಡೂ ನಗರಗಳ ನಡುವೆ 140 ಕಿ.ಮೀ. ಅಂತರವಿದ್ದು, ಸಾಮಾನ್ಯವಾಗಿ ಇವೆರಡು ನಗರಗಳ ನಡುವಿನ ಪ್ರಯಾಣಕ್ಕೆ 2.5ರಿಂದ 3 ಗಂಟೆ ಅವಧಿ ತೆಗೆದುಕೊಳ್ಳುತ್ತದೆ. ಹೈಪರ್‌ಲೂಪ್‌ನಡಿ, 25 ನಿಮಿಷಗಳಲ್ಲಿ ಈ ನಗರಗಳ ನಡುವೆ ಸಂಚರಿಸಬಹುದು ಎಂದು ಈ ಹಿಂದೆ ವರ್ಜಿನ್ ಸಂಸ್ಥೆ ಪ್ರಕಟಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.