ಕುಲಭೂಷಣ್ ಜಾಧವ್ ತಾಯಿಯ ವೀಸಾ ಅರ್ಜಿ ಪರಿಶೀಲನೆಯಲ್ಲಿ : ಪಾಕ್
Team Udayavani, Jul 13, 2017, 7:48 PM IST
ಹೊಸದಿಲ್ಲಿ : ಪಾಕಿಸ್ಥಾನದಲ್ಲಿ ಮಿಲಿಟರಿ ಕೋರ್ಟ್‌ನಿಂದ ಮರಣ ದಂಡನೆ ಶಿಕ್ಷೆ ವಿಧಿಸಲ್ಪಟ್ಟಿರುವ ಹಾಗೂ ಪ್ರಕೃತ ಅಲ್ಲಿನ ಜೈಲಿನಲ್ಲಿರುವ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಅವರನ್ನು ಭೇಟಿಯಾಗಲು ಬಯಸಿರುವ ಅವರ ತಾಯಿ ಆವಂತಿಕಾ ಜಾಧವ್ ಅವರ ವೀಸಾ ಕೋರಿಕೆ ಅರ್ಜಿಯು ಪರಿಶೀಲನೆಯಲ್ಲಿದೆ ಎಂದು ಪಾಕಿಸ್ಥಾನದ ವಿದೇಶ ಕಾರ್ಯಾಲಯ ಇಂದು ಗುರುವಾರ ಹೇಳಿದೆ.
ಪಾಕ್ ವಿದೇಶ ಕಾರ್ಯಾಲಯದ ವಕ್ತಾರ ನಫೀಸ್ ಝಕಾರಿಯಾ ಅವರನ್ನು ಉಲ್ಲೇಖೀಸಿ ಪಾಕಿಸ್ಥಾನದ ಡಾನ್ ದೈನಿಕದ ಅಂತರ್‌ಜಾಲ ಆವೃತ್ತಿಯು ಈ ವಿಷಯವನ್ನು ವರದಿ ಮಾಡಿದೆ.
ಝಕಾರಿಯಾ ಅವರು ವಾರದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ‘ಭಾರತದಲ್ಲಿ ಚಿಕಿತ್ಸೆ ಪಡೆಯಬಯಸುವ ಪಾಕಿಸ್ಥಾನೀಯರ ವೀಸಾ ಕೋರಿಕೆಯ ಅರ್ಜಿಯ ಮೇಲೆ ಶರತ್ತುಗಳನ್ನು ಹೇರಲಾಗುತ್ತಿದೆ’ ಎಂದು ಆರೋಪಿಸಿದರು.
“ದ ಹೇಗ್’ನಲ್ಲಿನ ಅಂತಾರಾಷ್ಟ್ರೀಯ ನ್ಯಾಯಾಲಯವು ಕಳೆದ ಮೇ 18ರಂದು ಕುಲಭೂಷಣ್ ಜಾಧವ್ ಮರಣ ದಂಡನೆ ಶಿಕ್ಷೆಯ ಜಾರಿಗೆ ತಡೆ ನೀಡಿತ್ತಲ್ಲದೆ ಜಾಧವ್‌ಗೆ ದೂತಾವಾಸದ ಸಂಪರ್ಕಾವಕಾಶ ಕಲ್ಪಿಸಬೇಕೆಂಬ ಭಾರತದ ಕೋರಿಕೆಯನ್ನು ಮನ್ನಿಸಬೇಕಂದೂ ಪಾಕಿಸ್ಥಾನಕ್ಕೆ ಸೂಚಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Vivek Ramaswamy: ವಿವೇಕ್‌ಗೆ ಟ್ರಂಪ್ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ
Malpe: ಡ್ರಗ್ಸ್ ಪಾರ್ಸೆಲ್ ಹೆಸರಲ್ಲಿ ಬೆದರಿಸಿ 20 ಲ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.