ಆಗಸ ಮಧ್ಯೆ ಸಿಗರೇಟು ಸೇವನೆಗೆ ಹಠ: ಪ್ರಯಾಣಿಕನನ್ನು ಇಳಿಸಿದ ವಿಸ್ತಾರ
Team Udayavani, Dec 22, 2018, 4:19 PM IST
ಹೊಸದಿಲ್ಲಿ : ವಿಮಾನ ಹಾರಾಟದ ವೇಳೆ ಸಿಗರೇಟು ಸೇದಲು ತನಗೆ ಬಿಡಬೇಕೆಂದು ಕೋರಿ ಹಠ ಹಿಡಿದ ಪ್ರಯಾಣಿಕನನ್ನು ವಿಮಾನದಿಂದ ಕೆಳಗಿಳಿಸಿದ ಘಟನೆ ಅಮೃತ್‌ಸರ-ದಿಲ್ಲಿ-ಕೋಲ್ಕತ ಪ್ರಯಾಣದ ವಿಸ್ತಾರ ವಿಮಾನದಲ್ಲಿ (ಹಾರಟ ಸಂಖ್ಯೆ 946 ಮತ್ತು ಯುಕೆ 707) ಇಂದು ಶುಕ್ರವಾರ ಬೆಳಗ್ಗೆ ನಡೆಯಿತು.
ಈ ಮಾರ್ಗದಲ್ಲಿನ ವಿಸ್ತಾರ ವಿಮಾನದ ಹಾರಾಟ ಇಂದು ಎರಡು ಕಾರಣಕ್ಕೆ ಮೂರು ತಾಸುಗಳಿಗೂ ಹೆಚ್ಚು ಹೊತ್ತಿನ ವಿಳಂಬಕ್ಕೆ ಗುರಿಯಾಯಿತು.
ಮೊದಲನೇ ಪ್ರಕರಣದಲ್ಲಿ ಕುಟುಂಬವೊಂದು ಖಾಸಗಿ ತುರ್ತು ಕಾರಣಕ್ಕೆ ತನ್ನನ್ನು ದಿಲ್ಲಿಯಲ್ಲಿ ಇಳಿಸುವಂತೆ ಕೋರಿತು. ಇದರಿಂದಾಗಿ ವಿಮಾನವು ಸುಮಾರು ಒಂದೂವರೆ ತಾಸಿನ ವಿಳಂಬಕ್ಕೆ ಗುರಿಯಾಯಿತು.
ಎರಡನೇ ಪ್ರಕರಣದಲ್ಲಿ ಕೋಲ್ಕತಕ್ಕೆ ಹೋಗಲು ಅಮೃತಸರದಲ್ಲಿ ವಿಮಾನ ಏರಿದ್ದ ಪ್ರಯಾಣಿಕನೋರ್ವ ವಿಮಾನವು ಆಗಸದಲ್ಲಿ ಹಾರುತ್ತಿದ್ದ ವೇಳೆ ತನಗೆ ಸಿಗರೇಟು ಸೇದಲು ಅನುಮತಿ ಕೊಡಬೇಕೆಂದು ಹಠಕ್ಕೆ ನಿಂತು ವಿಮಾನ ಸಿಬಂದಿಯೊಂದಿಗೆ ಜಗಳ ತೆಗೆದ. ಆತನನ್ನು ವಿಮಾನದಿಂದ ಇಳಿಸಲು ವಿಮಾನವನ್ನು ಪುನಃ ದಿಲ್ಲಿಗೆ ತರಲಾಯಿತು. ಕೊನೆಗೂ ದಿಲ್ಲಿ ವಿಮಾನ ನಿಲ್ದಾಣದಲ್ಲಿ ದುರ್ವರ್ತನೆಗಾಗಿ ಆತನನ್ನು ಬಲವಂತದಿಂದ ಇಳಿಸಲಾಯಿತು.
ಈ ಎರಡು ಪ್ರಕರಣಗಳಿಂದ ವಿಸ್ತಾರ ವಿಮಾನದ ಹಾರಾಟ ಮೂರು ತಾಸುಗಳಿಗೂ ಮೀರಿದ ವಿಳಂಬವನ್ನು ಕಂಡಿತು. ಈ ಬಗ್ಗೆ ವಿಸ್ತಾರ ವಿಮಾನ ಯಾನ ಸಂಸ್ಥೆ ಅಧಿಕೃತ ಹೇಳಿಕೆಯನ್ನು ಪ್ರಕಟಿಸಿ ಘಟನೆಗಳ ವಿವರವನ್ನು ಸ್ಪಷ್ಟಪಡಿಸಿತಲ್ಲದೆ ಅದಕ್ಕಾಗಿ ವಿಷಾದಿಸಿತು. ಪ್ರಯಾಣಿಕರ ಸೌಕರ್ಯ ಮತ್ತು ಸುರಕ್ಷೆಯೇ ತನಗೆ ಪರಮೋಚ್ಚ ಆದ್ಯತೆಯಾಗಿದೆ; ಪ್ರಯಾಣಿಕರಿಂದ ಈ ರೀತಿಯ ದುರ್ವರ್ತನೆ ನಮಗೆ ಎಂದೂ ಸ್ವೀಕಾರಾರ್ಹವಲ್ಲ ಎಂದು ಹೇಳಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rahul Gandhi: ದಲಿತನೆಂಬ ಕಾರಣಕ್ಕೆ ಪೊಲೀಸ್ ವಶದಲ್ಲಿ ವ್ಯಕ್ತಿ ಕೊ*ಲೆ
Congress MP: ವಾರಕ್ಕೆ 70 ಗಂಟೆ ಬೇಡ, 4 ದಿನ ಕೆಲಸ ಸಾಕು: ತ.ನಾಡು ಸಂಸದ ಕಾರ್ತಿ
Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್ ವಿಧಿವಶ
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rahul Gandhi: ದಲಿತನೆಂಬ ಕಾರಣಕ್ಕೆ ಪೊಲೀಸ್ ವಶದಲ್ಲಿ ವ್ಯಕ್ತಿ ಕೊ*ಲೆ
Congress MP: ವಾರಕ್ಕೆ 70 ಗಂಟೆ ಬೇಡ, 4 ದಿನ ಕೆಲಸ ಸಾಕು: ತ.ನಾಡು ಸಂಸದ ಕಾರ್ತಿ
ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ
Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ
Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.