ವಿವೋ ಕಂಪೆನಿಯಿಂದ ಶೇ.50 ಲಾಭ ಚೀನಗೆ ರಹಸ್ಯ ರವಾನೆ : 62 ಸಾವಿರ ಕೋಟಿ ರೂ. ಅಕ್ರಮ ವರ್ಗಾವಣೆ
ಭಾರತದಲ್ಲಿ ತೆರಿಗೆಯಿಂದ ತಪ್ಪಿಸಿಕೊಳ್ಳಲು ಕಳ್ಳಾಟ
Team Udayavani, Jul 8, 2022, 6:50 AM IST
ಹೊಸದಿಲ್ಲಿ: ಚೀನ ಮೂಲದ ವಿವೋ ಕಂಪೆನಿಯು ಭಾರತದಲ್ಲಿ ತಾನು ಗಳಿಸಿರುವ ಶೇ. 50ರಷ್ಟು ಹಣವನ್ನು ಚೀನಕ್ಕೆ ವರ್ಗಾಯಿಸಿ, ಆ ಮೂಲಕ ಭಾರತದಲ್ಲಿ ತೆರಿಗೆ ಕಟ್ಟುವುದರಿಂದ ನುಣುಚಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.
“ಭಾರತದಲ್ಲಿರುವ ವಿವೋ ಶಾಖೆ ಇಲ್ಲಿ ಬಂದಿದ್ದ ಆದಾಯದಲ್ಲಿ 62,476 ಕೋಟಿ ರೂ.ಗಳನ್ನು ಚೀನಕ್ಕೆ ರಹಸ್ಯವಾಗಿ ರವಾನಿಸಿದೆ. ಆ ಮೂಲಕ ಭಾರತದಲ್ಲಿ ತನಗೆ ಭಾರೀ ಪ್ರಮಾಣದ ನಷ್ಟವಾಗಿರುವುದಾಗಿ ತೋರಿಸಿ ಕೊಂಡು ತೆರಿಗೆ ತಪ್ಪಿಸಿಕೊಳ್ಳುವ ನಾಟಕವಾಡಿದೆ’ ಎಂದು ಈ ಪ್ರಕರಣ ಪತ್ತೆ ಹಚ್ಚಿರುವ ಜಾರಿ ನಿರ್ದೇಶನಾಲಯ ತಿಳಿಸಿದೆ.
ಈ ಹಿನ್ನೆಲೆಯಲ್ಲಿ, ಕಂಪೆನಿ ವಿರುದ್ಧ ಹಣಕಾಸು ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಜತೆಗೆ, ಭಾರತದಲ್ಲಿನ ವ್ಯವಹಾರಗಳಿ ಗಾಗಿ ಬಳಸುತ್ತಿದ್ದ 119 ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇವು ಗಳಲ್ಲಿ 465 ಕೋಟಿ ರೂ.ಗಳಷ್ಟು ವ್ಯವ ಹಾರಗಳು ತಟಸ್ಥಗೊಂಡಿದ್ದು, ಖಾತೆ ಗ ಳಲ್ಲಿನ 73 ಲಕ್ಷ ರೂ. ನಗದು ಹಾಗೂ 2 ಕೆ.ಜಿ. ಚಿನ್ನವನ್ನೂ ಜಪ್ತಿ ಮಾಡಲಾಗಿದೆ ಎಂದು ಇ.ಡಿ. ತಿಳಿಸಿದೆ.
ನಿರ್ದೇಶಕ ಪರಾರಿ
ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ದೇಶದ 40 ಕಡೆ ಇ.ಡಿ. ಶೋಧ ಕಾರ್ಯ ನಡೆಸುತ್ತಿದ್ದಂತೆಯೇ, ವಿವೋ ನಿರ್ದೇಶಕರಾದ ಝೆಂಗೆÏನ್ ಔ ಮತ್ತು ಝಾಂಗ್ ಜೈ ಅವರು ದೇಶಬಿಟ್ಟು ಪರಾರಿಯಾಗಿದ್ದಾರೆ. ದಾಳಿ ಬೆನ್ನಲ್ಲೇ ಪರಾರಿಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.