ಮತ್ತೊಂದು ಶಾಕ್! ಎಐಎಡಿಎಂಕೆಯಿಂದ ಕೊನೆಗೂ ಶಶಿಕಲಾಗೆ ಗೇಟ್ ಪಾಸ್
Team Udayavani, Sep 12, 2017, 11:58 AM IST
ಚೆನ್ನೈ:ತಮಿಳುನಾಡು ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಎಂಬಂತೆ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಿಕೆ ಶಶಿಕಲಾ ಹಾಗೂ ಉಪಕಾರ್ಯದರ್ಶಿ ಟಿಟಿವಿ ದಿನಕರ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.
ಮಂಗಳವಾರ ಚೆನ್ನೈನಲ್ಲಿ ನಡೆದ ಎಐಎಡಿಎಂಕೆ ಪಕ್ಷದ ಜನರಲ್ ಕೌನ್ಸಿಲ್ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ. ಜಯಲಲಿತಾ ಅವರ ನಿಧನರಾಗುವ ಮುನ್ನ ಯಾರನ್ನು ಯಾವ ಹುದ್ದೆಯಲ್ಲಿ ಇರಿಸಿದ್ದಾರೋ ಅವರೆಲ್ಲಾ ಅದೇ ಹುದ್ದೆಯಲ್ಲಿ ಮುಂದುವರಿಯುವಂತೆ ಸಭೆಯಲ್ಲಿ ನಿರ್ಣಯ ಕೈಗೊಂಡಿರುವುದಾಗಿ ವರದಿ ವಿವರಿಸಿದೆ.
ಒಂದು ವೇಳೆ ತನ್ನನ್ನು ಪಕ್ಷದಿಂದ ಉಚ್ಚಾಟಿಸಿದರೆ ಸರ್ಕಾರವನ್ನು ಕೆಳಗುರುಳಿಸುವುದಾಗಿ ಟಿಟಿವಿ ದಿನಕರನ್ ಬೆದರಿಕೆ ಹಾಕಿದ್ದರು. ಸದ್ಯ ಅಕ್ರಮ ಆಸ್ತಿ ಗಳಿಕೆಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಶಶಿಕಲಾ ಜೈಲುಕಂಬಿ ಎಣಿಸುತ್ತಿದ್ದು, ಇದೀಗ ಮತ್ತೊಂದು ಹೊಡೆತ ಎಂಬಂತೆ ಶಶಿಕಲಾ ರಾಜಕೀಯ ಜೀವನವೂ ಮುಗಿದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
Uddhav Thackeray: ಚಂದ್ರಚೂಡ್ ಜಡ್ಜ್ ಬದಲು ಅಧ್ಯಾಪಕರಾಗಿದ್ದರೆ ಖ್ಯಾತಿ ಸಿಗುತ್ತಿತ್ತು
Uttar Pradesh: ಹಳಿ ಮೇಲೆ ಸಿಮೆಂಟ್ ಕಲ್ಲಿಟ್ಟು ರೈಲು ಹಳಿತಪ್ಪಿಸಲು ಪ್ರಯತ್ನ
MUST WATCH
ಹೊಸ ಸೇರ್ಪಡೆ
PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Udupi: ʼನ್ಯಾಯಾಂಗದಲ್ಲಿ ತಂತ್ರಜ್ಞಾನ ಬಳಕೆಯಿಂದ ಪಾರದರ್ಶಕತೆ, ಸಮಯ, ಹಣವೂ ಉಳಿತಾಯʼ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.