ಉಗ್ರರ ಐಇಡಿಗಿಂತ ಮತದಾರರ ಐಡಿಯೇ ಬಲಿಷ್ಠ: ಪಿಎಂ ಮೋದಿ
Team Udayavani, Apr 24, 2019, 6:00 AM IST
ಗುಜರಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸರತಿಯಲ್ಲಿ ಸಾಗಿ ಹಕ್ಕು ಚಲಾಯಿಸಿದರು.
ಭಯೋತ್ಪಾದಕರ ಸುಧಾರಿತ ಸ್ಫೋಟಕಗಳಿಗಿಂತಲೂ (ಐಇಡಿ) ಮತದಾರರ ಗುರುತಿನ ಚೀಟಿ ಶಕ್ತಿಶಾಲಿ ಯಾಗಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಂಗಳವಾರ ಹಕ್ಕು ಚಲಾಯಿಸಲೆಂದು ಅಹಮದಾಬಾದ್‌ಗೆ ಆಗಮಿಸಿದ್ದ ಅವರು, ಮಾಧ್ಯಮಗಳೊಂದಿಗೆ ಮಾತನಾಡುವಾಗ ಹೀಗೆ ಹೇಳಿದರು. ಗಾಂಧಿನಗರ ಲೋಕಸಭಾ ಕ್ಷೇತ್ರದ ಭಾಗವಾಗಿರುವ ಅಹಮದಾಬಾದ್‌ನ ರಾನಿಪ್ ಪ್ರಾಂತ್ಯದ ನಿಶಾನ್ ಹೈಸ್ಕೂಲ್‌ನ ಬೂತ್‌ನಲ್ಲಿ ಮತ ಚಲಾವಣೆ ಮಾಡಿದ ಅನಂತರ ಮಾತನಾಡಿದ ಅವರು, “”ಭಾರತದ ಜನತಂತ್ರ ಜಗತ್ತಿಗೇ ಒಂದು ಮಾದರಿ. ಒಂದೆಡೆ, ಭಯೋತ್ಪಾದಕರು ತಮ್ಮ ಕೈಯಲ್ಲಿ ಐಇಡಿಗಳನ್ನು ಹಿಡಿದಿದ್ದಾರೆ. ಇತ್ತ, ಮತದಾರರು ತಮ್ಮ ಕೈಯಲ್ಲಿ ಮತದಾರರ ಗುರುತಿನ ಚೀಟಿ ಎಂಬ ಅಸ್ತ್ರ ಹಿಡಿದಿದ್ದಾರೆ. ಈ ಅಸ್ತ್ರ ಜನತಂತ್ರದ ಶಕ್ತಿಯ ಸಂಕೇತ” ಎಂದರು.
“”ಭಯೋತ್ಪಾದಕರ ಐಇಡಿಗಿಂತಲೂ ಜನರಲ್ಲಿರುವ ಮತದಾರರ ಗುರುತಿನ ಚೀಟಿಗಳೇ ಹೆಚ್ಚು ಶಕ್ತಿಶಾಲಿ ಎಂದು ನನಗನ್ನಿಸುತ್ತದೆ” ಎಂದರಲ್ಲದೆ, “”ಮತದಾನದ ಅನಂತರ ಕುಂಭಮೇಳದಲ್ಲಿ ಮಿಂದಾಗ ಉಂಟಾಗುವ ಪರಿಶುದ್ಧತೆಯ ಭಾವವೇ ಈಗಲೂ ನನ್ನನ್ನು ಆವರಿಸಿದೆ” ಎಂದರು. ಬೂತ್ ಇದ್ದ ನಿಶಾನ್ ಹೈಸ್ಕೂಲಿನವರೆಗೆ ತೆರೆದ ಜೀಪಿನಲ್ಲಿ ಪ್ರಯಾಣ ಬೆಳೆಸಿದ ಮೋದಿ, ಅಕ್ಕಪಕ್ಕ ನಿಂತಿದ್ದವರತ್ತ ಕೈಬೀಸಿದರು. ಮತದಾನಕ್ಕೆ ಹೊರಡುವ ಮುನ್ನ ತಮ್ಮ ಮನೆಯಲ್ಲಿ ತಾಯಿ ಹಿರಾಬೆನ್‌ರವರ ಆಶೀರ್ವಾದ ಪಡೆದರು. ಮನೆಯಲ್ಲಿ 20 ನಿಮಿಷ ಇದ್ದ ಮೋದಿಯವರಿಗೆ ಹಿರಾಬೆನ್ ಅವರು, ಶಾಲು, ತೆಂಗಿನ ಕಾಯಿ, ಸಿಹಿ ತಿನಿಸು ನೀಡಿ ಆಶೀರ್ವದಿಸಿದರು.
ಕಾಂಗ್ರೆಸ್ ದೂರು: ಪ್ರಧಾನಿ ಮೋದಿ ಮತ ಚಲಾವಣೆ ಸಂದರ್ಭದಲ್ಲಿ ರೋಡ್‌ಶೋ ಮಾಡುವ ಮೂಲಕ ಹಾಗೂ ರಾಜಕೀಯ ಹೇಳಿಕೆ ನೀಡುವ ಮೂಲಕ ನೀತಿ ಸಂಹಿತೆ ಉಲ್ಲಂ ಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ ಚುನಾವಣಾ ಆಯೋಗ ಮೋದಿಯವರಿಗೆ ಕ್ಲೀನ್ ಚಿಟ್ ನೀಡಿದೆ.
ಕ್ಷಿಪಣಿ ಪ್ರಯೋಗಿಸದ ಕಾಂಗ್ರೆಸ್: ದೇಶದ ಭದ್ರತೆಯನ್ನು ಮರೆತು ನಾಮ್‌ದಾರ್ ಕುಟುಂಬದ ಹಿತಾಸಕ್ತಿಯನ್ನಷ್ಟೇ ನೋಡುತ್ತಿದ್ದ ಕಾಂಗ್ರೆಸ್ ತನ್ನ ಆಡಳಿತಾವಧಿಯಲ್ಲಿ ಉಪಗ್ರಹವನ್ನು ನಾಶಗೊಳಿಸುವ ಕ್ಷಿಪಣಿ ಪ್ರಯೋಗ ಮಾಡಿರಲಿಲ್ಲ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ಟೀಕಿಸಿದ್ದಾರೆ. ಒಡಿಶಾದ ಬಾಲಸೋರ್ ಹಾಗೂ ಕೇಂದ್ರಪಾರಾದಲ್ಲಿ ಮಾತನಾಡಿದ ಮೋದಿ, ನಮ್ಮ ಸರಕಾರವು ಭಾರತದ ಬಾಹ್ಯಾಕಾಶ ಶಕ್ತಿಯನ್ನು ಪ್ರದರ್ಶಿಸಿ, ಸ್ಪೇಸ್ ಸೂಪರ್ ಪವರ್ ಆಗಿ ದೇಶ ಹೊರಹೊಮ್ಮಿದೆ ಎಂದಿದ್ದಾರೆ. ಈ ಮೂಲಕ ಬಾಲಸೋರ್ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿದೆ. ಆದರೆ ಇದು ವಿಪಕ್ಷಗಳನ್ನು ಚಿಂತೆಗೀಡು ಮಾಡಿದೆ. ಎರಡು ಹಂತದ ಚುನಾವಣೆ ನಡೆದ ನಂತರ ದೇಶದಲ್ಲಿ ಬಿಜೆಪಿ ಪರ ಅಲೆ ಇರುವುದನ್ನು ಕಂಡು ಕಾಂಗ್ರೆಸ್‌ಗೆ ನಿದ್ದೆ ಬರದಂತಾಗಿದೆ ಎಂದರು.
ಹರಾಜಿಗಿಟ್ಟರೆ ಪ್ರಧಾನಿ ಹುದ್ದೆ ಖರೀದಿಸುತ್ತಿದ್ದರು ಮಮತಾ
ಪಶ್ಚಿಮ ಬಂಗಾಲದ ಅಸಾನ್‌ಸೋಲ್‌ನಲ್ಲೂ ರ್ಯಾಲಿ ನಡೆಸಿದ ಮೋದಿ, ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಮಮತಾಗೆ ಪ್ರಧಾನಿ ಹುದ್ದೆಯ ಮೇಲೆ ಕಣ್ಣಿದೆ. ಈ ಹುದ್ದೆಯನ್ನೇನಾದರೂ ಹರಾಜಿಗಿಟ್ಟಿದ್ದರೆ, ಚಿಟ್ ಫಂಡ್ ಸ್ಕ್ಯಾಮ್‌ನಲ್ಲಿ ಗಳಿಸಿದ ಹಣದಿಂದ ಖರೀದಿಯನ್ನೇ ಮಾಡಿ ಬಿಡುತ್ತಿದ್ದರು ಎಂದು ಮೋದಿ ಹೇಳಿದ್ದಾರೆ. ದೇಶಕ್ಕೆ ವಿಭಜನೆ (ಡಿವಿಶನ್) ಮಾಡುವ ಸರಕಾರ ಬೇಕಿಲ್ಲ. ದೃಷ್ಟಿಕೋನ (ವಿಶನ್) ಇರುವ ಸರಕಾರ ಬೇಕಿದೆ. ಟಿಎಂಸಿ ಆಡಳಿತದಲ್ಲಿ ಪ.ಬಂಗಾಲದಲ್ಲಿ ನಡೆಯುತ್ತಿರುವುದು ಭ್ರಷ್ಟಾಚಾರ ಮತ್ತು ಅಪರಾಧ ಮಾತ್ರ. ಮೊದಲು ಮಮತಾಗೆ ವಲಸಿಗರೇ ಆಪ್ತರಾಗಿದ್ದರು. ಈಗಂತೂ ವಿದೇಶಿ ಯರನ್ನೂ ತನ್ನ ಪರ ಪ್ರಚಾರಕ್ಕೆ ಕರೆತಂದಿದ್ದಾರೆ ಎಂದು ಮೋದಿ ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.