ಪ್ರತಿ ಕ್ಷೇತ್ರದ 5 EVMಗಳ VVPAT ಪರಿಶೀಲನೆಗೆ ಸುಪ್ರೀಂ ಆದೇಶ; ವಿಪಕ್ಷಗಳಿಗೆ ಹಿನ್ನಡೆ
Team Udayavani, Apr 8, 2019, 4:02 PM IST
ಹೊಸದಿಲ್ಲಿ : ಪ್ರತಿ ಲೋಕಸಭಾ ಕ್ಷೇತ್ರದ ಒಂದು ಇವಿಎಂ ಬದಲು ಐದು ಇವಿಎಂ ಗಳ ವಿವಿಪ್ಯಾಟ್ (ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರೇಲ್) ಪರಿಶೀಲನೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ವಿವಿಪ್ಯಾಟ್ ಪರೀಶೀಲನೆಗಾಗಿ ಐದು ಇವಿಎಂ ಗಳನ್ನು ಕ್ರಮಾನುಸಾರ ರಹಿತವಾಗಿ ಆಯ್ಕೆ ಮಾಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.
21 ವಿರೋಧ ಪಕ್ಷಗಳ ನಾಯಕರು ತಲಾ ಅಸೆಂಬ್ಲಿ ಕ್ಷೇತ್ರದ ಶೇ.50 ಇವಿಎಂ ಗಳ ವಿವಿಪ್ಯಾಟ್ ಪರಿಶೀಲನೆಯನ್ನು ಆಗ್ರಹಿಸಿದ್ದವು.
ತಲಾ ವಿಧಾನಸಭಾ ಕ್ಷೇತ್ರದ ಒಂದು ಇವಿಎಂ ಸಂಖ್ಯೆಯನ್ನು ಸುಪ್ರೀಂ ಕೋರ್ಟ್ ಐದಕ್ಕೆ ಏರಿಸಿದ್ದು ಇದು ಚುನಾವಣಾ ಪ್ರಕ್ರಿಯೆಯಲ್ಲಿ ಅತ್ಯುನ್ನತ ಮಟ್ಟದ ನಿಖರತೆ ಮತ್ತು ತೃಪ್ತಿಯನ್ನು ಖಾತರಿಪಡಿಸಿಕೊಳ್ಳಲು ಅಗತ್ಯವಿದೆ ಎಂದು ಹೇಳಿತು.
ಸುಪ್ರೀಂ ಕೋರ್ಟಿನ ಈ ಆದೇಶ ವಿರೋಧ ಪಕ್ಷಗಳಿಗೆ ಭಾರೀ ದೊಡ್ಡ ಹಿನ್ನಡೆಯಾಗಿದೆ. ಏಕೆಂದರೆ 10.35 ಲಕ್ಷ ಇವಿಎಂ ಗಳ ಪೈಕಿ ವಿವಿಪ್ಯಾಟ್ ಪರಿಶೀಲನೆಗೆ ಒಳಪಡುವ ಇವಿಎಂ ಗಳ ಸಂಖ್ಯೆ ಕೇವಲ 20,625 ಅಥವಾ ಶೇ.1.99 ಆಗಿರುತ್ತದೆ.
ಸುಪ್ರೀಂ ಕೋರ್ಟ್ ನಿರ್ದೇಶದ ಪ್ರಕಾರ ಪ್ರತಿಯೊಂದು ಕ್ಷೇತ್ರದ 5 ಇವಿಎಂ ಗಳು ವಿವಿಪ್ಯಾಟ್ ಗಳು ಮಾತ್ರವೇ ಭೌತಿಕ ಪರಿಶೀಲನೆಗೆ ಒಳಪಡಲಿವೆ.
ವಿವಿಪ್ಯಾಟ್ ಹೆಚ್ಚಳದಿಂದ ಹೆಚ್ಚುವರಿ ಮಾನವ ಸಂಪನ್ಮೂಲ ಬೇಕಾಗುವುದಿಲ್ಲ ಮತ್ತು ಲೋಕಸಭಾ ಚುನಾವಣೆಗಳ ಫಲಿತಾಂಶ ಕೂಡ ವಿಳಂಬಗೊಳ್ಳುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.