Ghaziabad; ಮದುವೆಯಲ್ಲಿಅತಿಥಿಗೆ ಊಟದ ಪ್ಲೇಟ್ ಸ್ಪರ್ಶಿಸಿದಕ್ಕೆ ವೈಟರ್ ನನ್ನು ಕೊಂದರು!
Team Udayavani, Dec 7, 2023, 3:36 PM IST
ಹೊಸದಿಲ್ಲಿ: ಮದುವೆ ಮನೆಯಲ್ಲಿ ಊಟ ಮಾಡಿದ ತಟ್ಟೆಗಳನ್ನು ತೆಗೆದುಕೊಂಡು ಹೋಗುವಾಗ ಅತಿಥಿಯೊಬ್ಬರಿಗೆ ತಾಗಿದ ಕಾರಣ ವೈಟರನ್ನು ಥಳಿಸಿ ಕೊಲೆಗೈದ ಘಟನೆ ಗಾಜಿಯಾಬಾದ್ ನಲ್ಲಿ ನಡೆದಿದೆ.
ನವೆಂಬರ್ 17 ರ ಸಂಜೆ ಗಾಜಿಯಾಬಾದ್ ನ ಪುಸ್ತಾ ರಸ್ತೆಯಲ್ಲಿರುವ ಸಿಜಿಎಸ್ ವಾಟಿಕಾ ಅತಿಥಿ ಗೃಹದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈಟರ್ ಒಯ್ಯುತ್ತಿದ್ದ ತಟ್ಟೆಯು ಗೆಸ್ಟ್ ಗೆ ಸ್ಪರ್ಷವಾದಾಗ ಹೊಡೆದಾಟ ನಡೆಯಿತು. ಜಗಳದ ಸಮಯದಲ್ಲಿ ಪಂಕಜ್ ಎಂಬಾತನನ್ನು ಕೆಲವು ವ್ಯಕ್ತಿಗಳು ಕ್ರೂರವಾಗಿ ಥಳಿಸಿದ್ದಾರೆ.
ಬಳಿಕ ಆತ ಸತ್ತಿದ್ದಾನೆ ಎಂದು ಹೆದರಿದ ಆರೋಪಿಗಳು ಆತನ ಶವವನ್ನು ಕಾಡಿಗೆ ಎಸೆದಿದ್ದಾರೆ. ಮರುದಿನ ಪಂಕಜ್ ಅವರ ದೇಹವನ್ನು ಪತ್ತೆಹಚ್ಚಿದ ನಂತರ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದರು. ಮರಣೋತ್ತರ ಪರೀಕ್ಷೆಯ ವೇಳೆ ಪಂಕಜ್ ತಲೆಯ ಮೇಲೆ ಆಳವಾದ ಗಾಯದ ಗುರುತು ಕಂಡುಬಂದಿದೆ.
ಇದನ್ನೂ ಓದಿ:ಚೀನಾಕ್ಕೆ ಅಕ್ರಮ ಹಣ ವರ್ಗಾವಣೆ ಪ್ರಕರಣ: ವಿವೋ ಇಂಡಿಯಾ ವಿರುದ್ಧ ಇ.ಡಿ. ಆರೋಪಪಟ್ಟಿ ಸಲ್ಲಿಕೆ
ವಿಚಾರಣೆ ವೇಳೆ ಸಂತ್ರಸ್ತೆಯ ತಾಯಿ ಪೊಲೀಸರಿಗೆ ತಿಳಿಸಿದ್ದು, ಮದುವೆ ಸ್ಥಳಕ್ಕೆ ಕೆಲಸಕ್ಕೆ ಹೋಗಿದ್ದ ಆತ ಮನೆಗೆ ವಾಪಸ್ಸಾಗಿರಲಿಲ್ಲ ಎಂದು ಆಕೆ ಹೇಳಿದ್ದಾರೆ. ಆಗ ಪಂಕಜ್ ಅತಿಥಿಗೃಹದಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದುದು ಸ್ಥಳದಲ್ಲಿ ಪಾಲುದಾರನಾಗಿದ್ದ ಮನೋಜ್ ಗುಪ್ತಾ ಎಂಬ ಗುತ್ತಿಗೆದಾರನ ಮೂಲಕ ಪೊಲೀಸರಿಗೆ ತಿಳಿಯಿತು.
ಜಗಳದ ವೇಳೆ ಮನೋಜ್ ಕೂಡಾ ಪಂಕಜ್ ಮೇಲೆ ಹಲ್ಲೆ ನಡೆಸಿರುವುದು ತನಿಖೆಯಿಂದ ತಿಳಿದುಬಂದಿದೆ.
ಅಮಿತ್ ಕುಮಾರ್, ಮನೋಜ್ ಮತ್ತು ಮತ್ತೋರ್ವನನ್ನು ಪೊಲೀಸರು ವಶಕ್ಕೆ ಪಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.