ಏರ್ ಇಂಡಿಯಾ ಬಂಡವಾಳ ಹಿಂತೆಗೆತಕ್ಕೆ ಗ್ರೀನ್ ಸಿಗ್ನಲ್
Team Udayavani, Jun 29, 2017, 3:45 AM IST
ಹೊಸದಿಲ್ಲಿ: ನಷ್ಟದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವ ಏರ್ ಇಂಡಿಯಾವನ್ನು ಪಾರು ಮಾಡಲು ಖಾಸಗೀ ಕರಣಗೊಳಿಸುವ ಸಲುವಾಗಿ ಕೇಂದ್ರ ಸರಕಾರ ಇದೀಗ ಮೊದಲ ಹೆಜ್ಜೆ ಇಟ್ಟಿದೆ.
ಏರ್ ಇಂಡಿಯಾದಿಂದ ಬಂಡವಾಳ ಹಿಂತೆಗೆತಕ್ಕೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಮಿತಿ ಬುಧವಾರದ ಸಭೆಯಲ್ಲಿ ಗ್ರೀನ್ ಸಿಗ್ನಲ್ ನೀಡಿದೆ. “ಬಂಡವಾಳ ಹಿಂತೆಗೆತಕ್ಕೆ ತಾತ್ವಿಕ ಅನು ಮೋದನೆ ನೀಡಲಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವ ಜೇಟ್ಲಿ ಹೇಳಿದ್ದಾರೆ.
ಹಣಕಾಸು ಸಚಿವ ನೇತೃತ್ವದಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾ ಲಯ ಸಮಿತಿಯೊಂದನ್ನು ಸ್ಥಾಪಿಸಲಿದ್ದು, ಈ ಬಗ್ಗೆ ಹೆಚ್ಚಿನ ನಿರ್ಧಾರ ತೆಗೆದು ಕೊಳ್ಳಲಿದೆ. ಈ ಸಮಿತಿ ಸ್ಥಾಪನೆ ಪ್ರಸ್ತಾಪವನ್ನೂ ಅಂಗೀಕರಿ ಸಲಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ.
ಆದರೆ ಈ ಬಂಡವಾಳ ಹಿಂತೆಗೆತದ ಅವಧಿ, ಬಂಡವಾಳ ಹಿಂತೆಗೆತದ ವಿಧಾನ, ಸಮಿತಿ ಅಂತಿಮ ವರದಿ ನೀಡುವ ಕುರಿತು ಹೆಚ್ಚಿನ ವಿವರಗಳನ್ನು ಅವರು ನೀಡಿಲ್ಲ. ಸಮಿತಿ ಸದಸ್ಯರನ್ನು ಪ್ರಧಾನಿ ಮೋದಿ ನಿರ್ಧರಿಸಲಿದ್ದಾರೆ ಎಂದು ಹೇಳಿದ್ದಾರೆ.
ದೇಶೀಯ ವಿಮಾನಯಾನದ ಶೇ.14 ರಷ್ಟು ಮಾರುಕಟ್ಟೆಯನ್ನು ಏರ್ ಇಂಡಿಯಾ ಹೊಂದಿದ್ದು, ಸಿಂಹಪಾಲನ್ನು ಇಂಡಿಗೋ ಮತ್ತು ಜೆಟ್ ಏರ್ವೆàಸ್ ಹೊಂದಿದೆ.
ಹಿಂದಿನಿಂದಲೂ ಏರ್ ಇಂಡಿಯಾ ಬಂಡವಾಳ ಹಿಂತೆಗೆತದ, ಖಾಸಗೀಕರಣದ ಮಾತುಗಳು ಕೇಳಿಬರುತ್ತಿದ್ದವು. ಆದರೆ ಕಳೆದ 25 ವರ್ಷಗಳಿಂದ ಇದಕ್ಕೆ ಕಾರ್ಮಿಕ ಸಂಘ ಟನೆಗಳು, ಎಡಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಬಂಡವಾಳ ಹಿಂತೆಗೆಯ ದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದವು.
ಸದ್ಯ ಏರ್ ಇಂಡಿಯಾ 52 ಸಾವಿರ ಕೋಟಿ ರೂ. ನಷ್ಟದಲ್ಲಿದ್ದು, ಇದಕ್ಕಾಗಿ ಕೇಂದ್ರ ಕೂಡಲೇ ಬಂಡವಾಳ ಹಿಂತೆಗೆಯಬೇಕು. ಈ ಹಣವನ್ನು ಇತರ ವಲಯಗಳಿಗೆ ವಿನಿ ಯೋಗಿಸಲು ನೀತಿ ಆಯೋಗ ಹೇಳಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.