ರೈತರಿಗಾಗಿ ವಾಲ್ಮಾರ್ಟ್ 180 ಕೋಟಿ ಹೂಡಿಕೆ
Team Udayavani, Sep 28, 2018, 8:40 AM IST
ಮುಂಬಯಿ: ಇತ್ತೀಚೆಗಷ್ಟೇ ಇ-ಕಾಮರ್ಸ್ ಕ್ಷೇತ್ರದ ಪ್ರಮುಖ ಕಂಪನಿ ಫ್ಲಿಪ್ಕಾರ್ಟ್ ಖರೀದಿ ಮಾಡಿದ ಅಮೆರಿಕ ಮೂಲದ ವಾಲ್ಮಾರ್ಟ್, ಭಾರತದ ರೈತರ ಜೀವನ ಮಟ್ಟ ಸುಧಾರಿಸುವುದಕ್ಕಾಗಿ 180 ಕೋಟಿ ರೂ. ಹೂಡಿಕೆ ಮಾಡುವುದಾಗಿ ಘೋಷಣೆ ಮಾಡಿದೆ. ಅಷ್ಟೇ ಅಲ್ಲ, ವಾಲ್ಮಾರ್ಟ್ ಒಡೆತನದ ಬೆಸ್ಟ್ ಪ್ರೈಸ್ ಸ್ಟೋರ್ಗಳಲ್ಲಿ ಮಾರಾಟವಾಗುವ ಒಟ್ಟು ಉತ್ಪನ್ನಗಳಲ್ಲಿ ಶೇ. 25ರಷ್ಟು ರೈತರಿಂದಲೇ ಖರೀದಿಸಲು ನಿರ್ಧರಿಸಿದೆ. ವಾಲ್ಮಾರ್ಟ್ ಫೌಂಡೇಶನ್ ಮೂಲಕ ಈ ಹೂಡಿಕೆ ಮಾಡಲಾಗುತ್ತಿದ್ದು, ರೈತರಿಗೆ ಬೆಳೆಯ ಬಗ್ಗೆ ಮಾಹಿತಿ, ಸಾಗಣೆ ಮತ್ತು ಮಾರುಕಟ್ಟೆಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ವೆಚ್ಚ ಮಾಡಲಾಗುತ್ತದೆ. ಇದರಿಂದ ರೈತರ ಆದಾಯ ವೃದ್ಧಿಯಾಗಲಿದ್ದು, ಒಟ್ಟಾರೆ ಉತ್ಪಾದಕತೆ ಕೂಡ ಹೆಚ್ಚಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.