ಕೇರಳದಂತೆ ಬೇರೆಡೆ ಆಗಿದ್ರೆ ಪ್ರಶಸ್ತಿ ವಾಪ್ಸಿ ಆಗ್ತಿತ್ತು: ಜೇಟ್ಲಿ
Team Udayavani, Aug 7, 2017, 8:30 AM IST
ತಿರುವನಂತಪುರಂ: ಪದೇ ಪದೆ ರಾಜಕೀಯ ಹತ್ಯೆಗಳಿಗೆ ಸಾಕ್ಷಿಯಾಗುತ್ತಿರುವ ಕೇರಳದಲ್ಲಿ ಮತ್ತೂಂದು ಸುತ್ತಿನ ಕೆಸರೆರಚಾಟ ಆರಂಭವಾಗಿದೆ. ಕಳೆದ ವಾರ ಹತ್ಯೆಗೀಡಾದ ಆರೆಸ್ಸೆಸ್ ಕಾರ್ಯಕರ್ತ ರಾಜೇಶ್ ನಿವಾಸಕ್ಕೆ ರವಿವಾರ ಏಕಾಏಕಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಭೇಟಿ ನೀಡಿದ್ದಾರೆ. ಇನ್ನೊಂದೆಡೆ, ಆರೆಸ್ಸೆಸ್ ಕಾರ್ಯಕರ್ತರಿಂದ ಹತ್ಯೆಗೀಡಾದ ಸಿಪಿಎಂ ಕಾರ್ಯಕರ್ತರ ಕುಟುಂಬ ಸದಸ್ಯರು ಧರಣಿ ನಡೆಸಿ, ಜೇಟ್ಲಿ ಅವರು ನಮ್ಮ ಮನೆಗಳಿಗೂ ಭೇಟಿ ನೀಡಲಿ ಎಂದು ಆಗ್ರಹಿಸಿದ ಘಟನೆಯೂ ನಡೆದಿದೆ.
ತಿರುವನಂತಪುರಕ್ಕೆ ರವಿವಾರ ಆಗಮಿಸಿದ ಸಚಿವ ಜೇಟ್ಲಿ ಅವರು ರಾಜೇಶ್ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ನಂತರ ಸಂತಾಪ ಸಭೆಯಲ್ಲಿ ಆಡಳಿತಾರೂಢ ಸಿಪಿಎಂ ವಿರುದ್ಧ ಹರಿಹಾಯ್ದರು. “ಕೇರಳದಲ್ಲಿ ಸರಣಿ ಹತ್ಯೆಗಳು ನಡೆಯುತ್ತಿದ್ದರೂ ಸರಕಾರ ಮೌನವಾಗಿರುವುದೇಕೆ? ಸಿಪಿಎಂ ತನ್ನ ಕಾರ್ಯಕರ್ತರನ್ನು ಬಳಸಿಕೊಂಡು ಬೇರೆ ಪಕ್ಷದ ಕಾರ್ಯಕರ್ತರನ್ನು ಇಲ್ಲವಾಗಿಸಲು ಹೊರಟಿದೆ. ಈ ಬಗ್ಗೆ ಆ ಪಕ್ಷ ಆತ್ಮವಿಮರ್ಶೆ ಮಾಡಿಕೊಳ್ಳಲಿ. ರಾಜೇಶ್ ಮೇಲೆ ನಡೆದ ಕ್ರೌರ್ಯ ಭೀಕರವಾಗಿದ್ದು, ದೇಶದ ಶತ್ರುವೂ ಇಂಥ ಕ್ರೌರ್ಯ ಎಸಗಲಿಕ್ಕಿಲ್ಲ. ಇಂಥ ಘಟನೆ ಬಿಜೆಪಿ ಆಡಳಿತದ ರಾಜ್ಯದಲ್ಲಿ ಆಗಿದ್ದರೆ ಈಗಾಗಲೇ ಕೆಲವರು ಪ್ರಶಸ್ತಿ ವಾಪ್ಸಿ ಅಭಿಯಾನ ಮಾಡುತ್ತಿದ್ದರು. ಆದರೆ, ಹಿಂಸೆಯ ಮೂಲಕ ಆರೆಸ್ಸೆಸ್, ಬಿಜೆಪಿಯನ್ನು ಕುಗ್ಗಿಸಲು ಸಾಧ್ಯವಿಲ್ಲ,’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್ ಕುಮಾರ್
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.