Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Team Udayavani, Nov 22, 2024, 1:05 AM IST
ಹೊಸದಿಲ್ಲಿ:ವಕ್ಫ್ ತಿದ್ದುಪಡಿ ಮಸೂದೆ ಪರಿಶೀಲನೆ ನಡೆಸುತ್ತಿರುವ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಂಬಿಕಾ ಪಾಲ್ “ಮಸೂದೆಯ ಕರಡು ಪರಿಶೀಲನಾ ವರದಿ ಸಿದ್ಧಗೊಂಡಿದೆ. ಅದನ್ನು ಪರಿಶೀಲಿಸಿ ಶೀಘ್ರವೇ ಸರಕಾರಕ್ಕೆ ಸಲ್ಲಿಸಲಾಗುತ್ತದೆ’ ಎಂದು ಹೇಳಿದ್ದಾರೆ. ಗುರುವಾರ ನಡೆಯಲಿರುವ ಸಮಿತಿ ಸಭೆಯೇ ಕೊನೆಯ ಸಭೆಯಾಗಿರಲಿದೆ. ಸಮಿತಿ 25 ಸಭೆಗಳನ್ನು ನಡೆಸಿದೆ. ಜತೆಗೆ ಇಮೇಲ್ ಮೂಲಕ 95.86 ಲಕ್ಷ ಸಲಹೆಗಳು ಸಮಿತಿಗೆ ಬಂದಿವೆ ಎಂದಿದ್ದಾರೆ. ಇದೇ ವೇಳೆ, ವಿಪಕ್ಷಗಳ ಸದಸ್ಯರು ಸಮಿತಿಯ ಅವಧಿಯನ್ನು ನ.29ರ ಅನಂತರವೂ ವಿಸ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.