ಅನಿರ್ದಿಷ್ಟಾವಧಿ ಮುಷ್ಕರ ವೈದ್ಯರಿಂದ ಎಚ್ಚರಿಕೆ
ಗುರುವಾರವೂ ಮುಂದುವರಿದ ಪ್ರತಿಭಟನೆ
Team Udayavani, Aug 2, 2019, 5:00 AM IST
ನವದೆಹಲಿ: ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕದ ವಿರುದ್ಧ ಸಿಡಿದೆದ್ದು ಬುಧವಾರ ದೇಶವ್ಯಾಪಿ ಒಂದು ದಿನದ ಮುಷ್ಕರ ನಡೆಸಿದ್ದ ವೈದ್ಯರು ಗುರುವಾರವೂ ಕೆಲವೆಡೆ ತಮ್ಮ ಪ್ರತಿಭಟನೆ ಮುಂದುವರಿಸಿದ್ದರು. ಅಷ್ಟೇ ಅಲ್ಲ, ಈ ವಿಧೇಯಕವು ರಾಜ್ಯಸಭೆಯಲ್ಲೇನಾದರೂ ಅಂಗೀಕಾರಗೊಂಡಲ್ಲಿ, ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.
ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ರೆಸಿಡೆಂಟ್ ಡಾಕ್ಟರ್‌ಗಳು ಗುರುವಾರ ನವದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಏಮ್ಸ್, ಸಫ‌್ದರ್‌ಜಂಗ್ ಆಸ್ಪತ್ರೆಯ ರೆಸಿಡೆಂಟ್ ಡಾಕ್ಟರ್‌ಗಳು ಹಾಗೂ ವಿದ್ಯಾರ್ಥಿಗಳು ಕರ್ತವ್ಯಕ್ಕೆ ಗೈರಾಗಿ, ನವದೆಹಲಿಯ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಘೋಷಣೆ ಕೂಗಿದ್ದಾರೆ. ಅವರಿಗೆ ಲೋಕ ನಾಯಕ ಜಯಪ್ರಕಾಶ್ ಆಸ್ಪತ್ರೆ, ಬಿ.ಆರ್.ಅಂಬೇಡ್ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸೇರಿದಂತೆ ಹಲವು ಸಂಸ್ಥೆಗಳ ವಿದ್ಯಾರ್ಥಿಗಳು, ವೈದ್ಯರು ಬೆಂಬಲ ವ್ಯಕ್ತಪಡಿಸಿದರು. ಈ ವಿಧೇಯಕವು ಬಡವರ ವಿರೋಧಿ, ವಿದ್ಯಾರ್ಥಿಗಳ ವಿರೋಧಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ಎಂದು ಘೋಷಣೆಗಳನ್ನೂ ಕೂಗಿದರು.
ವಿಧೇಯಕದ ಪ್ರತಿಗಳಿಗೆ ಬೆಂಕಿ: ಕೇರಳದಲ್ಲೂ ಗುರುವಾರ ವೈದ್ಯರು ಹಾಗೂ ವಿದ್ಯಾರ್ಥಿಗಳು ಭಾರೀ ಪ್ರತಿಭಟನೆ ನಡೆಸಿದ್ದು, ರಾಜಭವನದ ಮುಂಭಾಗದಲ್ಲಿ ವಿಧೇಯಕದ ಪ್ರತಿಗಳನ್ನು ದಹನ ಮಾಡಿದ ಘಟನೆಯೂ ನಡೆಯಿತು. ಇದೇ ವೇಳೆ, ಕೆಲವು ವಿದ್ಯಾರ್ಥಿಗಳು ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದು, ಪೊಲೀಸರು ಅವರನ್ನು ತಡೆದರು. ಐವರು ವಿದ್ಯಾರ್ಥಿಗಳು ಬುಧವಾರದಿಂದಲೇ ರಾಜಭವನದ ಮುಂದೆ ಅನಿರ್ದಿಷ್ಟಾವಧಿ ಉಪವಾಸ ಆರಂಭಿಸಿದ್ದಾರೆ. ಸಿಪಿಎಂ ವಿದ್ಯಾರ್ಥಿ ಘಟಕವಾದ ಎಸ್‌ಎಫ್ಐ, ಶುಕ್ರವಾರ ವಿಧೇಯಕ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಘೋಷಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಂಗ್ಲಾದೇಶದಿಂದ ಭಾರತ ವಿರುದ್ಧ ಮತ್ತೊಂದು ಕ್ಯಾತೆ
Chandigarh: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಕ್ರಿ ಗ್ರಾ.ಪಂನಿಂದ ಹಣ ಸಹಾಯ
ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್ ವಿರುದ್ಧ ತಿರುಗಿ ಬಿದ್ದ ಸಂತರು
Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಗೆ
Chandigarh: ಅಂಬೇಡ್ಕರ್ ಕುರಿತು ವಿವಾದ: ಚಂಡೀಗಢ ಪಾಲಿಕೆಯಲ್ಲಿ ತಳ್ಳಾಟ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Central Office: 49 ಹೊಸ ತಾಲೂಕಿಗೆ “ಪ್ರಜಾ ಸೌಧ’ ಸಂಕೀರ್ಣ ಯಾವಾಗ?
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ. ಅಪೇಕ್ಷಿತ ಆರ್ಥಿಕ ನೆರವು ಲಭ್ಯ.
ಬಾಂಗ್ಲಾದೇಶದಿಂದ ಭಾರತ ವಿರುದ್ಧ ಮತ್ತೊಂದು ಕ್ಯಾತೆ
Council: ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಅಪಮಾನ: ಛಲವಾದಿ ನಾರಾಯಣಸ್ವಾಮಿ
Chandigarh: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಕ್ರಿ ಗ್ರಾ.ಪಂನಿಂದ ಹಣ ಸಹಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.