Pocso: ಮಕ್ಕಳ ಅಶ್ಲೀಲ ವಿಡಿಯೋ ನೋಡುವುದು, ಸಂಗ್ರಹಿಸುವುದು ಪೋಕ್ಸೋ ಅಡಿ ಅಪರಾಧ: ಸುಪ್ರೀಂ
Team Udayavani, Sep 23, 2024, 11:57 AM IST
ಹೊಸದಿಲ್ಲಿ: ಮಕ್ಕಳ ಅಶ್ಲೀಲ ವಿಡಿಯೋವನ್ನು ವೀಕ್ಷಣೆ ಮಾಡುವುದು ಪೋಕ್ಸೋ (Pocso) ಅಡಿ ಅಪರಾಧ ಎಂದು ಸೋಮವಾರ (ಸೆ.23) ಸುಪ್ರೀಂ ಕೋರ್ಟ್ (Supreme Court) ತೀರ್ಪು ನೀಡಿದೆ.
ನ್ಯಾ|ಡಿ.ವೈ.ಚಂದ್ರಚೂಡ್ ಮತ್ತು ನ್ಯಾ| ಜೆ.ಪಿ. ಪರ್ದೀವಾಲಾ ಅವರಿರುವ ಪೀಠ ತೀರ್ಪು ಪ್ರಕಟಿಸಿದೆ. ಮಕ್ಕಳ ಅಶ್ಲೀಲ ವಿಡಿಯೋ (Child Po*n) ವೀಕ್ಷಣೆ ಮಾಡುವುದು ಪೋಕ್ಸೋ ಹಾಗೂ ಐಟಿ ಕಾಯ್ದೆ ಪ್ರಕಾರ ಅಪರಾಧವಲ್ಲ ಎಂದು ಜ.11ರಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ಸಂಬಂಧ ವಿಚಾರಣೆ ನಡೆಸಿದ್ದ ಸುಪ್ರೀಂ ತೀರ್ಪು ನೀಡಿದ್ದು, ಮದ್ರಾಸ್ ಹೈಕೋರ್ಟ್ ತೀರ್ಪನ್ನು ರದ್ದು ಮಾಡಿದೆ.
ತೀರ್ಪು ನೀಡುವಲ್ಲಿ ಮದ್ರಾಸ್ ಉಚ್ಚ ನ್ಯಾಯಾಲಯವು “ಘೋರ ದೋಷ” ಎಸಗಿದೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ.
ಇಂದಿನ ವಿಚಾರಣೆಯ ಸಂದರ್ಭದಲ್ಲಿ, ಸುಪ್ರೀಂ ಕೋರ್ಟ್ ಚೆನ್ನೈ ವ್ಯಕ್ತಿಯ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ಮತ್ತೆ ತೆರೆಯಿತು. ಮಕ್ಕಳ ಅಶ್ಲೀಲತೆಯ ಕಂಟೆಟ್ ನಿರ್ಮಿಸುವುದು ಮತ್ತು ಡೌನ್‌ಲೋಡ್ ಮಾಡುವುದು ಮಾತ್ರವಲ್ಲದೆ, ಅವುಗಳನ್ನು ಪ್ರಕಟಿಸುವುದು ಮತ್ತು ಹಂಚಿಕೊಳ್ಳುವುದು ಕೂಡಾ ಅಪರಾಧವಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
‘ಮಕ್ಕಳ ಅಶ್ಲೀಲತೆ’ ಪದವನ್ನು ‘ಮಕ್ಕಳ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಯ ವಸ್ತು’ ಎಂದು ಬದಲಿಸಲು ತಿದ್ದುಪಡಿ ತರುವಂತೆ ನ್ಯಾಯಾಲಯವು ಕೇಂದ್ರ ಸರ್ಕಾರವನ್ನು ಕೇಳಿದೆ.
ಇನ್ನು ಮುಂದೆ ಪ್ರಕರಣಗಳಲ್ಲಿ ‘ಮಕ್ಕಳ ಅಶ್ಲೀಲತೆ’ ಎಂಬ ಪದವನ್ನು ಬಳಸದಂತೆ ಇತರ ನ್ಯಾಯಾಲಯಗಳಿಗೆ ನಿರ್ದೇಶನ ನೀಡಿದೆ.
“ಅಶ್ಲೀಲತೆಯಿಂದ ಮಕ್ಕಳ ಮೇಲಿನ ದೌರ್ಜನ್ಯ ಮೇಲೆ ನಾವು ದೀರ್ಘಕಾಲೀನ ಪ್ರಭಾವದ ಬಗ್ಗೆ ಹೇಳಿದ್ದೇವೆ… POCSO ಗೆ ತಿದ್ದುಪಡಿ ತರಲು ನಾವು ಸಂಸತ್ತಿಗೆ ಸಲಹೆ ನೀಡಿದ್ದೇವೆ… ಇದರಿಂದ ಮಕ್ಕಳ ಅಶ್ಲೀಲತೆಯನ್ನು ಮಕ್ಕಳ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆ ಎಂದು ಉಲ್ಲೇಖಿಸಬಹುದು. ನಾವು ಸುಗ್ರೀವಾಜ್ಞೆಯನ್ನು ತರಬಹುದು ಎಂದು ಸೂಚಿಸಿದ್ದೇವೆ” ಎಂದು ಪೀಠ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚೆನ್ನೈ ಲೈಂಗಿಕ ಕಿರುಕುಳ ಕೇಸ್: ಎಸ್‌ಐಟಿ ತನಿಖೆಗೆ ಹೈಕೋರ್ಟ್ ಆದೇಶ
Pinarayi Vijayan: ಸಿಂಗ್ ಅಂತ್ಯಕ್ರಿಯೆ ವೇಳೆ ಬೇರೆ ಕಾರ್ಯಕ್ರಮದಲ್ಲಿ ಪಿಣರಾಯಿ ಭಾಗಿ
Manmohan Singh ವಿಚಾರದಲ್ಲಿ ಕಾಂಗ್ರೆಸ್ ಅಗ್ಗದ ರಾಜಕಾರಣ ಮಾಡುತ್ತಿದೆ: ಬಿಜೆಪಿ
ED ಅಧಿಕಾರಿ ಒಳಗೊಂಡ ಲಂಚ ಪ್ರಕರಣ; ಸಿಬಿಐನಿಂದ ಮಧ್ಯವರ್ತಿ ಬಂಧನ
Actor; ಖ್ಯಾತ ನಟಿ ಉರ್ಮಿಳಾ ಕೊಠಾರೆ ಅವರ ಕಾರು ಹರಿದು ಓರ್ವ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.