Water, A.C. ಸರಿ ಇಲ್ಲದ್ದಕ್ಕೆ ದೂರು: ಸ್ಪಂದಿಸದ ರೈಲ್ವೇಗೆ ಕೋರ್ಟ್ನಿಂದ 30000 ದಂಡ
Team Udayavani, Nov 2, 2024, 6:30 AM IST
ಹೈದರಾಬಾದ್: ರೈಲ್ವೇ ಪ್ರಯಾಣದ ವೇಳೆ ಶೌಚಾಲಯದಲ್ಲಿ ನೀರಿರಲಿಲ್ಲ, ಬೋಗಿಯಲ್ಲಿ ಕಸ ತುಂಬಿದೆ ಎಂದು ಆರೋಪಿಸಿದ್ದ ಪ್ರಯಾಣಿಕನ ದೂರನ್ನು ನಿರ್ಲಕ್ಷಿಸಿದ್ದ ದಕ್ಷಿಣ ಮಧ್ಯ ರೈಲ್ವೇಗೆ (ಎಸ್ಸಿಆರ್) ಜಿಲ್ಲಾ ಗ್ರಾಹಕ ನ್ಯಾಯಾ ಲಯವೊಂದು 30000 ರೂ. ದಂಡ ವಿಧಿಸಿದೆ. ಜತೆಗೆ ಪ್ರಯಾಣಿಕನಿಗೆ ಅನಾನುಕೂಲ ಕಲ್ಪಿಸಿದ್ದಕ್ಕೆ ತರಾಟೆಗೆ ತೆಗೆದುಕೊಂಡಿದೆ.
2023ರ ಜೂ. 5ರಂದು ವಿ. ಮೂರ್ತಿ ಎಂಬವರು ತಿರುಪತಿಯಿಂದ ದುವ್ವಾಡಗೆ ಎ.ಸಿ. ಕೋಚ್ನಲ್ಲಿ ಕುಟುಂಬದೊಂದಿಗೆ ಪ್ರಯಾಣಿಸಿದ್ದರು. ಅಲ್ಲಿ ಎ.ಸಿ.ಕೋಚ್ನಲ್ಲಿ ಸರಿ ಯಾಗಿ ಕೆಲಸ ಮಾಡುತ್ತಿರಲಿಲ್ಲ. ಜತೆಗೆ ಟಾಯ್ಲೆಟ್ನಲ್ಲಿ ನೀರು ಬರುತ್ತಿರಲಿಲ್ಲ. ಈ ಬಗ್ಗೆ ರೈಲ್ವೇ ಅಧಿಕಾರಿಗಳಿಗೆ ದೂರು ಕೂಡ ನೀಡಿದ್ದರೂ ಪ್ರಯೋಜನ ವಾಗಿರಲಿಲ್ಲ. ಈ ಹಿನೆ°ಲೆಯಲ್ಲಿ ಮೂರ್ತಿ ಗ್ರಾಹಕರ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ರೈಲ್ವೇ ಈ ಆರೋಪಗಳು ಸುಳ್ಳು. ರೈಲಿನ ಮೂಲಕ ಅವರು ಸುರಕ್ಷಿತವಾಗಿ ತಲುಪಿದ್ದರು ಎಂದು ವಾದಿಸಿತ್ತು. ಈ ವಾದ ತಿರಸ್ಕರಿಸಿದ ಕೋರ್ಟ್ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಬೇಕಾದದ್ದು ರೈಲ್ವೇಯ ಕರ್ತವ್ಯ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Old cars ಬಿಕರಿಗೆ ಶೇ.18 ಜಿಎಸ್ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
Kota; ಮತ್ತೊಬ್ಬ ವಿದ್ಯಾರ್ಥಿ ಆತ್ಮಹ*ತ್ಯೆ: ವರ್ಷದ 17ನೇ ಕೇಸು
Ambedkar; ಅವಮಾನ ಖಂಡಿಸಿ ಕಾಂಗ್ರೆಸ್ ಆಂದೋಲನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.