Water Crisis; ಯೋಗಿ, ಸೈನಿ ಮೊರೆಹೋದ ಆಪ್: ನೀರು ಬಿಡಿ ಎಂದು ದಿಲ್ಲಿ ಸಚಿವೆ ಪತ್ರ
Team Udayavani, Jun 3, 2024, 12:51 AM IST
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ನೀರಿನ ಬಿಕ್ಕಟ್ಟು ತೀವ್ರಗೊಂಡಿದ್ದು,ನೀರಿಗಾಗಿ ಈಗ ಆಮ್ ಆದ್ಮಿ ಪಕ್ಷವು ಉತ್ತರಪ್ರದೇಶ, ಹರಿಯಾಣದ ಮೊರೆ ಹೋಗಿದೆ.
ಉ.ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರಿಗೆ ಈ ಕುರಿತು ಪತ್ರ ಬರೆದಿರುವ ಆಪ್ ಸಚಿವೆ ಆತಿಷಿ ಮಲೇìನಾ ಹೆಚ್ಚುವರಿ ನೀರು ಬಿಡುವಂತೆ ಕೋರಿ ದ್ದಾರೆ. ಮುಂಗಾರು ಆಗಮನದವರೆಗೆ 1 ತಿಂಗಳ ಕಾಲ ಜನರಿಗೆ ಕುಡಿಯಲು ಶುದ್ಧ ನೀರಿನ ಆವಶ್ಯಕತೆಯಿದೆ. ಅಧಿಕ ಬಿಸಿಲಿನ ತಾಪಮಾನದಿಂದ ದಿಲ್ಲಿ ಜನರಿಗೆ ವಿವಿಧ ಮೂಲಗಳಿಂದ ನೆರವು ಬೇಕಾಗಿದೆ. ಪರಿಸ್ಥಿತಿ ನಿಭಾಯಿಸಲು ದಯವಿಟ್ಟು ಹೆಚ್ಚುವರಿ ನೀರನ್ನು ಯಮುನಾ ನದಿಗೆ ಹರಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ನೀರಿಗಾಗಿ ಜನರ ಪರದಾಟ: ದಿನದ ಬಳಕೆಯ ನೀರಿಗಾಗಿ ದಿಲ್ಲಿ ಜನತೆ ಪರಿತಪಿಸುವಂತಾಗಿದೆ. ನೀರಿನ ಟ್ಯಾಂಕರ್ ಮೇಲೆ ಜನ ಮುಗಿಬೀಳು ತ್ತಿರುವ ವೀಡಿಯೋಗಳು ವೈರಲ್
ಆಗುತ್ತಿವೆ. ದಿಲ್ಲಿ ಸರಕಾರ ಹರಿಯಾಣ ಸರಕಾರಕ್ಕೆ ನೀರು ಬಿಡಲು ಸೂಚಿಸು ವಂತೆ ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿಯನ್ನೂ ಸಲ್ಲಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.