ಸ್ವತ್ಛ ಭಾರತ ಯಶಸ್ಸಿಗೆ ನೀರಿನ ಬರ!
Team Udayavani, May 14, 2017, 11:54 AM IST
ಹೊಸದಿಲ್ಲಿ: ಪ್ರಧಾನಿ ಮೋದಿ ಅವರ ಕನಸಿನ ಸ್ವತ್ಛ ಭಾರತ ಅಭಿಯಾನದ ಯಶಸ್ಸಿಗೆ ನೀರಿನ ಬರ ಅಡ್ಡಿಯಾಗಿದೆ! ಸ್ವತ್ಛ ಭಾರತ ಅಭಿಯಾನದಡಿ ನಿರ್ಮಿಸಿರುವ 10 ಶೌಚಾಲಯಗಳ ಪೈಕಿ 6ರಲ್ಲಿ ನೀರಿಲ್ಲ. ಹೀಗಾಗಿ ಶೇ.60ರಷ್ಟು ಸ್ವತ್ಛ ಭಾರತ ಶೌಚಾಲಯಗಳು ಬಳಕೆಯೇ ಆಗುತ್ತಿಲ್ಲ.
ಈ ಬರದ ಸಂಗತಿ ಬಯಲಾಗಿರುವುದು ಸ್ವತಃ ಸರಕಾರ ನಡೆಸಿದ ಸಮೀಕ್ಷೆಯಿಂದ. ದೇಶದ ಶೌಚಾಲಯ ಸೌಲಭ್ಯ ಅಭಿಧಿವೃದ್ಧಿಯಾಗುತ್ತಿದೆ ಎನ್ನುವಾಗಲೇ ನೀರಿನ ಬರ ಎದುರಾಗಿದೆ ಎಂದು ರಾಷ್ಟ್ರೀಯ ಮಾದರಿ ಸಮೀಕ್ಷಾ ಕಚೇರಿ (ಎನ್‌ಎಸ್‌ಎಸ್‌ಒ) ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ. 2014ರಲ್ಲಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಎನ್‌ಡಿಎ ಸರಕಾರ, ಮುಂದಿನ ಚುನಾವಣೆ ವೇಳೆಗೆ ಭಾರತವನ್ನು ಬಯಲು ಶೌಚಮುಕ್ತವಾಗಿಸುವ ಪಣತೊಟ್ಟಿತ್ತು.
ಅದರಂತೆ ಸರಕಾರದ ಸಹಾಯನದಡಿಯಲ್ಲಿ 3.5 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೂ ನೀರಿನ ಬರದಿಂದಾಗಿ ಪ್ರಸ್ತುತ ದೇಶದ ಶೇ.55.4 ಮಂದಿಯ ಶೌಚಕ್ರಿಯೆ ಬಯಲಲ್ಲೇ ನಡೆಯುತ್ತಿದೆ. ಮೊದಲು ಹೊಸದಾಗಿ ನಿರ್ಮಿಸಿದ ಶೌಚಾಲಯ ಬಳಸಲು ಸಾರ್ವಜನಿಕರು ಹಿಂದೇಟು ಹಾಕಿದ್ದರು. ಜಾಹೀರಾತು ಸೇರಿ ಹಲವು ಜಾಗೃತಿ ಕಾರ್ಯಕ್ರಮಗಳ ಮೂಲಕ ಈ ಸಮಸ್ಯೆ ತಕ್ಕಮಟ್ಟಿಗೆ ಪರಿಹಾರವಾಗುತ್ತಿರುವ ನಡುವೆಯೇ ನೀರಿನ ಬರ ಕಾಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.