ಸೋರುತಿಹುದು ಆಸ್ಪತ್ರೆ ಮಾಳಿಗೆ: ಕೋವಿಡ್ ಆಸ್ಪತ್ರೆಯ ಒಳಗೆ ಹರಿಯುತ್ತಿದೆ ಭಾರಿ ನೀರು
Team Udayavani, Jul 19, 2020, 5:21 PM IST
ಬರೇಲಿ ( ಉತ್ತರ ಪ್ರದೇಶ): ಉತ್ತರ ಭಾರತದಲ್ಲಿ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳು ಮಳೆ ನೀರಿನಿಂದ ತುಂಬಿ ಹೋಗಿದೆ. ಈ ಮಧ್ಯೆ ಉತ್ತರ ಪ್ರದೇಶ ರಾಜ್ಯದ ಬರೇಲಿಯಲ್ಲಿ ಆಸ್ಪತ್ರೆಯ ಛಾವಣಿ ಸೋರಿಕೆಯಾಗಿ ವಾರ್ಡ್ ನಲ್ಲಿ ನೀರು ತುಂಬಿದ ಘಟನೆ ನಡೆದಿದೆ.
ಬರೇಲಿಯ ಕೋವಿಡ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಆಸ್ಪತ್ರೆಯ ವಾರ್ಡ್ ನ ಛಾವಣಿಯ ಮೇಲಿದ್ದ ಪೈಪ್ ಒಡೆದಿದೆ ಎನ್ನಲಾಗಿದೆ. ವಾರ್ಡ್ ಒಳಗೆ ಧಾರಾಕಾರ ನೀರು ಬೀಳುತ್ತಿದ್ದು, ಸೋಂಕಿತರ ಪಡಬಾರದು ಕಷ್ಟ ಪಡುತ್ತಿದ್ದಾರೆ.
ವಾರ್ಡ್ ಗೆ ನೀರು ಬೀಳುತ್ತಿರುವ ವಿಡಿಯೋ ವೈರಲ್ ಆಗಿದ್ದು, ಜನರಿಂದ ಛೀಮಾರಿ ಎದುರಿಸಿದ ನಂತರ ಆಸ್ಪತ್ರೆ ಸಿಬ್ಬಂದಿ ರಿಪೇರಿ ಕೆಲಸ ಆರಂಭಿಸಿದ್ದಾರೆ. ಕಟ್ಟಡ ಕೆಲಸ ನಡೆಯುತ್ತಿರುವ ಕಾರಣ ಪೈಪ್ ಒಡೆದಿದೆ, ಸದ್ಯ ದುರಸ್ತಿ ಮಾಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
Hospital in Bareilly with Covid patients #UttarPradesh pic.twitter.com/3JfMI7UyF6
— ?? Anindita (@hatefreeworldX) July 19, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.