ಮಂಗಳನಲ್ಲಿ ನೀರಿನ ಕೊಳ!
Team Udayavani, Dec 23, 2018, 6:20 AM IST
ಹೊಸದಿಲ್ಲಿ: ಮಂಗಳನಲ್ಲಿ ನೀರಿನ ಕುರುಹು ಇದೆಯೇ ಎಂದು ದಶಕಗಳಿಂದಲೂ ಸಂಶೋಧನೆ ನಡೆಯುತ್ತಿದೆ. ಈವರೆಗೂ ಹಲವು ಬಾರಿ ನೀರಿನ ಕುರುಹು ಕಂಡುಬಂದಿದೆಯಾದರೂ ಅದನ್ನು ಸಾಬೀತುಪಡಿಸುವ ಅಥವಾ ಸಾಕ್ಷೀಕರಿಸುವ ಯಾವುದೇ ಪುರಾವೆ ಲಭ್ಯವಾಗಿರಲಿಲ್ಲ. ಆದರೆ ಈ ಬಾರಿ ಮಂಗಳನಲ್ಲಿ ಸುಮಾರು 82 ಕಿ.ಮೀ ಅಗಲದ ಹಾಗೂ 2 ಕಿ.ಮೀ ಆಳದ ಕೆರೆಯೊಂದು ಇರುವುದು ತಿಳಿದುಬಂದಿದೆ.
ಯುರೋಪಿಯನ್ ಸ್ಪೇಸ್ ಏಜೆನ್ಸಿಯು ಈ ಚಿತ್ರವನ್ನು ಬಿಡುಗಡೆ ಮಾಡಿದ್ದು, ಮಾರ್ಸ್ ಎಕ್ಸ್‌ಪ್ರೆಸ್ ನೌಕೆ ಈ ಚಿತ್ರವನ್ನು ಸೆರೆಹಿಡಿದಿದೆ. ಈ ಕೆರೆಯನ್ನು ಕೊರೊಲೆವ್ ಎಂದು ಕರೆಯಲಾಗಿದೆ. ಇದರಲ್ಲಿ ಹಿಮಗಡ್ಡೆಯಿದ್ದು, ಇದರ ಮೇಲಿನ ಪದರವನ್ನು ಕೋಲ್ಡ್ ಟ್ರಾಪ್ ಎಂದು ಗುರುತಿಸಲಾಗಿದೆ.
ಅಂದರೆ ಇದು ಕೆಳಭಾಗದಲ್ಲಿನ ಮಂಜುಗಡ್ಡೆಯ ವಾತಾವರಣದ ಉಷ್ಣತೆಯಿಂದ ಕರಗದಂತೆ ತಡೆಯುತ್ತದೆ. ಹೀಗಾಗಿ ಈ ಕೆರೆಯು ಎಂದಿಗೂ ಹಿಮದ ರೂಪದಲ್ಲಿಯೇ ಇರುತ್ತದೆ. 2003 ರಲ್ಲಿ ಉಡಾವಣೆ ಮಾಡಲಾಗಿರುವ ಮಾರ್ಸ್ ಎಕ್ಸ್‌ಪ್ರೆಸ್‌ನ ಮಹತ್ವದ ಸಂಶೋಧನೆ ಇದಾಗಿದ್ದು, ಇದರಿಂದ ನೀರಿನ ಮೂಲ ಹುಡುಕುವ ವಿಜ್ಞಾನಿಗಳಿಗೆ ಇನ್ನಷ್ಟು ಸಾಧ್ಯತೆಗಳನ್ನು ತೆರೆದಿಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.