Wayanad landslide; ಕೇರಳ ಭೂಕುಸಿತಕ್ಕೆ ಅರಣ್ಯ ನಾಶ, ರಬ್ಬರ್ ತೋಟಗಳೇ ಕಾರಣ!
Team Udayavani, Jul 31, 2024, 7:10 AM IST
ವಯನಾಡ್: ಕೇರಳ ರಾಜ್ಯದ ಸಾಂಪ್ರದಾಯಿಕ ರಬ್ಬರ್ ಬೆಳೆಯುವ ಪ್ರದೇಶಗಳು ಭಾರತದ ನೈಸರ್ಗಿಕ ರಬ್ಬರ್ (ಎನ್‌ಆರ್) ಉತ್ಪಾದನೆಯಲ್ಲಿ ಸುಮಾರು 75 ಪ್ರತಿಶತದಷ್ಟು ಕೊಡುಗೆ ನೀಡುತ್ತವೆಯಾದರೂ ಅದೇ ಈಗ ಅಲ್ಲಿನ ಜನರಿಗೆ ಮುಳವಾಗಿದೆ. ಪ್ರತೀ ವರ್ಷ ಮುಂಗಾರು ಆರಂಭವಾಯಿತು ಎಂದರೆ ಕೇರಳ ರಾಜ್ಯದ ಹಲವು ಭಾಗಗಳಲ್ಲಿ ಭೂಕುಸಿತದ ವರದಿಗಳು ಆಗುತ್ತಲೇ ಇವೆ. ಇದಕ್ಕೆ ಅರಣ್ಯ ನಾಶ, ಅತಿಯಾದ ರಬ್ಬರ್ ಬೆಳೆ ಮೂಲ ಕಾರಣ ಎಂದು ಅನೇಕ ತಜ್ಞರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಭಾರೀ ಮಳೆ ಮತ್ತು ಪ್ರವಾಹಕ್ಕೆ ಕೇರಳದ ಅಂದಾಜು ಶೇ. 14.5ರಷ್ಟು ಭೂಪ್ರದೇಶಗಳು ದುರ್ಬಲವಾಗಿವೆ. ತಜ್ಞರ ಪ್ರಕಾರ, ಕೇರಳದ ಕರಾವಳಿ ಜಿಲ್ಲೆ ಆಲಪ್ಪುಳ ಹೊರತುಪಡಿಸಿ ರಾಜ್ಯದ ಇತರ 13 ಜಿಲ್ಲೆಗಳು ಭೂಕುಸಿತದ ಆತಂಕವನ್ನು ಸದಾ ಎದುರಿಸುತ್ತಿವೆ. ಕೇರಳ ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರ 1848 ಚದರ ಕಿ.ಮೀ. ಪ್ರದೇಶವನ್ನು ಹೆಚ್ಚಿನ “ಭೂಕುಸಿತ ಅಪಾಯ ವಲಯ’ವೆಂದು ಗುರುತು ಮಾಡಿದೆ.
ಅವೈಜ್ಞಾನಿಕ ರಬ್ಬರ್ ತೋಟ ಕಾರಣ
ಭೂಕುಸಿತಕ್ಕೆ ಅವೈಜ್ಞಾನಿಕವಾಗಿ ಬೆಳೆಯಲಾಗುತ್ತಿರುವ ರಬ್ಬರ್ ತೋಟಗಳೇ ಕಾರಣವಾಗಿವೆ ಎಂದು ತಜ್ಞರು ಹೇಳುತ್ತಿದ್ದಾರೆ. ರಬ್ಬರ್ ತೋಟಗಳನ್ನು ಹೆಚ್ಚಾಗಿ ರಾಜ್ಯದ ಪಶ್ಚಿಮ ಘಟ್ಟಗಳ ತಪ್ಪಲಿನ ಉದ್ದಕ್ಕೂ ಇಳಿಜಾರು ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದೆ. ಹೀಗಾಗಿ ಇಲ್ಲಿ ಭಾರಿ ಮಳೆಯಾದಾಗ ಗುಡ್ಡಗಾಡು ಪ್ರದೇಶಗಳು ಅಸ್ಥಿರಗೊಳ್ಳುತ್ತಿವೆ. ಇದಕ್ಕಾಗಿಯೇ “ಅಲ್ಪ, ಮಧ್ಯಮ ಮತ್ತು ಹೆಚ್ಚಿನ ಭೂ ಕುಸಿತದ ಸಂಭಾವ್ಯ ವಲಯಗಳಾಗಿ ಕೆಲವು ಜಿಲ್ಲೆಗಳ ರಬ್ಬರ್ ತೋಟಗಳನ್ನು ವರ್ಗೀಕರಿಸಲಾಗಿದೆ.
ಪರಿಹಾರ ಕಾರ್ಯಾಚರಣೆಗೆ ಐವರು ಸಚಿವರ ನಿಯೋಜನೆ
ಭೂಕುಸಿತ ಸಂಭವಿಸುತ್ತಿದ್ದಂತೆಯೇ ಕೇರಳ ಸಿಎಂ ಪಿಣರಾಯಿ ವಿಜಯನ್ ರಕ್ಷಣ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಐವರು ಹಿರಿಯ ಸಚಿವರನ್ನು ನಿಯೋ ಜಿಸಿದ್ದಾರೆ. ಸಚಿವರಾದ ಎ.ಕೆ.ಶಶೀಂದ್ರನ್, ಕಡನಾಪಳ್ಳಿ ರಾಮ ಚಂದ್ರನ್ ಈಗಾಗಲೇ ಸ್ಥಳದಲ್ಲಿ ಇದ್ದು ಪರಿಹಾರ ಮತ್ತು ರಕ್ಷಣ ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ ಎಂದು ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.