Wayanad landslides; ಉಳಿದವರ ಬದುಕು ಕಟ್ಟುವ ಹರಸಾಹಸ
ಭೂಕುಸಿತದಲ್ಲಿ ಸಿಲುಕಿದ್ದ 5,500ಕ್ಕೂ ಹೆಚ್ಚು ಸಂತ್ರಸ್ತರ ರಕ್ಷಣೆ; ತ್ವರಿತ ರಕ್ಷಣ ಕಾರ್ಯಾಚರಣೆಗೆ ಸುರಿಯುತ್ತಿರುವ ಮಳೆ ಅಡ್ಡಿ
Team Udayavani, Aug 1, 2024, 6:55 AM IST
ವಯನಾಡ್: ಕೇರಳದ ವಯನಾಡ್‌ನಲ್ಲಿ ಸಂಭವಿಸಿದ ಅತ್ಯಂತ ಭೀಕರ ಭೂಕುಸಿತದಲ್ಲಿ ಅಸುನೀಗಿದವರನ್ನು ಪತ್ತೆ ಹಚ್ಚುವುದರ ಜತೆಗೆ, ಅಲ್ಲಿ ಉಳಿದಿರುವವರನ್ನು ಪಾರು ಮಾಡಿ ಅವರಿಗೆ ಸೂಕ್ತ ಬದುಕು ಕಲ್ಪಿಸಿ ಕೊಡು ವುದರ ಬಗ್ಗೆಯೇ ಕೆಲಸ ಕಾರ್ಯಗಳು ಚುರುಕಾಗಿವೆ. ಈ ನಿಟ್ಟಿ ನಲ್ಲಿ ಸೇನೆ, ಐಎಎಫ್, ನೌಕಾಪಡೆಯ ಯೋಧರು, ಎನ್‌ಡಿಆರ್‌ಎಫ್ ಸಿಬಂದಿ ಕೇರಳ ಸರಕಾರದ ಮುಂದೆ ಇದೆ.
ಭೂಕುಸಿತದಿಂದ ಹಾನಿಗೀಡಾಗಿರುವ ಚೂರಲ್‌ವುಲ, ಮುಂಡಕೈ, ಪಟ್ಟಮಲ ಸೇರಿ ಬಾಧಿತ ಪ್ರದೇಶ ಗಳಲ್ಲಿ ಜನರ ಬದುಕು ಮೊದಲಿನ ಸ್ಥಿತಿಗೆ ಮರಳಲು ಮತ್ತೆ ವರ್ಷಗಳೇ ಬೇಕಾಗಬಹುದು ಎನ್ನಲಾಗುತ್ತಿದೆ. ಇಡೀ ಊರಿಗೆ ಊರೇ ಕೊಚ್ಚಿಕೊಂಡು ಹೋಗಿರು ವುದರಿಂದ ಬದುಕುಳಿದವರಿಗೆ ಆಶ್ರಯ ಕಲ್ಪಿಸುವುದು ಸವಾಲಿನ ಕೆಲಸವಾಗಲಿದೆ.
5,000ಕ್ಕೂ ಅಧಿಕ ಜನರ ರಕ್ಷಣೆ: 2 ದಿನಗಳ ರಕ್ಷಣ ಕಾರ್ಯಾಚರಣೆಯಲ್ಲಿ 5500ಕ್ಕೂ ಅಧಿಕ ಜನರನ್ನು ಭೂ ಕುಸಿತದಿಂದ ರಕ್ಷಿಸಲಾಗಿದೆ. ಮೊದಲ ಹಂತದಲ್ಲಿ 68 ಕುಟುಂಬಗಳ 206 ಜನರನ್ನು ರಕ್ಷಿಸಲಾಗಿದೆ. ಭೂಕುಸಿತದ ಬಳಿಕ 1,386 ಜನರು ತಮ್ಮ ಮನೆಗಳಲ್ಲಿ ಸಿಲುಕಿದ್ದರು. ಅವರನ್ನು ರಕ್ಷಣೆ ಮಾಡಲಾಗಿದೆ. ವಯನಾಡಿನ 82 ಶಿಬಿರಗಳಲ್ಲಿ 8,017 ಜನರು ಆಶ್ರಯ ಪಡೆದಿದ್ದಾರೆ.
400 ಮನೆ ಪೈಕಿ ಉಳಿದಿರುವುದು 30 ಮಾತ್ರ: ಮುಂಡಕೈ ನಲ್ಲಿ 400 ಮನೆಗಳಿದ್ದವು. ಆದರೆ ಈಗ ಕೇವಲ 30 ಮನೆಗಳಿವೆ ಎಂದು ಗ್ರಾಮ ಪಂಚಾಯತ್ ಸಿಬಂದಿ ತಿಳಿಸಿದ್ದಾರೆ. ಮುಂಡಕೈಗೆ ಸಂಪರ್ಕ ಕಲ್ಪಿಸುವುದಕ್ಕಾಗಿ ಬೇಲಿ ಬ್ರಿಡ್ಜ್ (ತುರ್ತು ಪರಿಸ್ಥಿತಿ ವೇಳೆ ನಿರ್ಮಾಣ ಮಾಡಲಾಗುವ ಸೇತುವೆ) ಮಾಡಲಾಗಿದ್ದು, ರಕ್ಷಣ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.
ಕುಸಿದ ಬೇಲಿ ಸೇತುವೆ: ಈ ಮಧ್ಯೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಕ್ಷಣ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಕನ್ನಡಿಪುಳಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದ್ದರಿಂದ ಚೂರನ್‌ಮಲದಲ್ಲಿ ರಕ್ಷಣೆಗೆ ಭಾರೀ ಕಷ್ಟವಾಗುತ್ತಿದೆ. ಚೂರಲ್‌ವುಲದಲ್ಲಿ ಮತ್ತೆ ಭೂಕುಸಿತದ ರೀತಿ ಪರಿಸ್ಥಿತಿ ನಿರ್ಮಾಣವಾಗಿದೆ. ರಕ್ಷಣ ಕಾರ್ಯಾ ಚರಣೆಗೆ ಸೇನೆ ತಾತ್ಕಾಲಿವಾಗಿ ನಿರ್ಮಿಸಿದ ಬೇಲಿ ಸೇತುವೆ ಕುಸಿದು, ನೀರಿನಲ್ಲಿ ಕೊಚ್ಚಿಕೊಂಡ ಹೋಗಿದೆ. ಬಳಿಕ, ಮತ್ತೆ ಸೇತುವೆ ನಿರ್ಮಾಣ ಕಾರ್ಯವನ್ನು ಸೇನೆ ಕೈಗೆತ್ತಿಕೊಂಡಿದೆ.
ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೆರವಿನ ಮಹಾಪೂರ!
ವಯನಾಡ್: ಭೂಕುಸಿತದ ಹಿನ್ನಲೆಯಲ್ಲಿ ಕೇರಳ ಸಿಎಂ ಪರಿಹಾರ ನಿಧಿಗೆ ಆರ್ಥಿಕ ನೆರವು ಹರಿದು ಬರುತ್ತಿದೆ. ಲುಲು ಗ್ರೂಪ್‌ನ ಎಂ.ಎ. ಯೂಸುಫ್ ಅಲಿ, ಕಲ್ಯಾಣ್ ಜುವೆಲ್ಲರ್ಸ್‌ನ ಕಲ್ಯಾಣ ರಾಮನ್, ಹಾಗೂ ಉದ್ಯಮಿ ರವಿ ಪಿಳ್ಳೆ ತಲಾ 5 ಕೋ.ರೂ. ನೀಡಲಿದ್ದಾರೆ. ಗೌತಮ್ ಅದಾನಿ 5 ಕೋ.ರೂ. ಘೋಷಿಸಿದ್ದಾರೆ. ಕೆನರಾ ಬ್ಯಾಂಕ್ ಕೂಡ 5 ಕೋ.ರೂ. ನೀಡಲಿದೆ. ತಮಿಳುನಾಡು ಕಾಂಗ್ರೆಸ್ ಸಮಿತಿ (ಟಿಎನ್‌ಸಿಸಿ) 1 ಕೋ. ರೂ. ನೆರವಿನ ಹಸ್ತ ಚಾಚಿದೆ. ಕೇರಳದ ಸಂಪುಟದ ಎಲ್ಲ ಸಚಿವರು ಒಂದು ತಿಂಗಳ ಸಂಬಳವನ್ನು ಮುಖ್ಯಮಂತ್ರಿ ಪರಿಹಾರ ಸಮಿತಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು ಕೇರಳ ಸಿಎಂ ತಿಳಿಸಿದ್ದಾರೆ.
ಕೇರಳದಲ್ಲಿ ಮತ್ತೆ ಹೆಚ್ಚಿನ ಮಳೆ ಸಾಧ್ಯತೆ: ಐಎಂಡಿ
ತಿರುವನಂತಪುರ: ಕೇರಳದಲ್ಲಿ ಹೆಚ್ಚಿನ ಮಳೆಯಾ ಗುವ ಸಾಧ್ಯತೆಯಿದ್ದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಆರೆಂಜ್ ಅಲರ್ಟ್ ಘೋಷಿಸಿದೆ. ಈಗಾಗಲೇ ಭೂಕುಸಿತಕ್ಕೊಳಗಾದ ಹಲವು ಭಾಗಗಳಲ್ಲಿ ಆ.1ರ ವರೆಗೂ ಮತ್ತಷ್ಟು ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ. ಆ.2ರಂದೂ ಭಾರೀ ಮಳೆ ನಿರೀಕ್ಷೆಯಿದೆ. ಇದಲ್ಲದೇ ಕೇರಳಕ್ಕೆ ಗಂಟೆಗೆ 30ರಿಂದ 40 ಕಿ.ಮೀ ವೇಗದಲ್ಲಿ ಗಾಳಿಯು ಅಪ್ಪಳಿಸುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…
Fog: ಉತ್ತರ ಭಾರತದಲ್ಲಿ ದಟ್ಟ ಮಂಜು, ಶೂನ್ಯ ಗೋಚರತೆ: ವಿಮಾನ, ರೈಲು ಸಂಚಾರದ ಮೇಲೆ ಪರಿಣಾಮ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
Kerala: ಅಂಗಿ ತೆಗೆದು ದೇಗುಲ ಪ್ರವೇಶ ಪದ್ಧತಿಗೆ ಕೊಕ್?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.