Wayanad; ಯುದ್ದೋಪಾದಿಯಲ್ಲಿ ರಕ್ಷಣೆ ಕಾರ್ಯಾಚರಣೆ, ಪರಿಹಾರ; ಎನ್‌ಡಿಆರ್‌ಎಫ್, ಸೇನೆ ಭಾಗಿ
Team Udayavani, Jul 31, 2024, 6:59 AM IST
ತಿರುವನಂತಪುರ: ವಯನಾಡಿನಲ್ಲಿ ಭೂಕುಸಿತದಿಂದ ಉಂಟಾದ ದುರಂತದಲ್ಲಿ ಸಿಲುಕಿದವರ ರಕ್ಷಣೆಗೆ ಯುದ್ಧದೋಪಾದಿಯಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗಿದೆ. ಎನ್‌ಡಿಆರ್‌ಎಫ್, ಕೇರಳ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಭಾರತೀಯ ಸೇನಾ ಯೋಧರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಪರಿಹಾರ ಮತ್ತು ರಕ್ಷಣ ಕಾರ್ಯ ಕೈಗೊಳ್ಳಲು ಎನ್‌ಡಿಆರ್‌ಎಫ್ 4 ತಂಡಗಳನ್ನು ನಿಯೋಜಿಸಿದೆ. ಅವುಗಳು ಸಾಮಗ್ರಿ, ಯಂತ್ರಗಳು, ಆಧುನಿಕ ಬೋಟ್‌ಗಳು, ಔಷಧಗಳನ್ನು ಹೊಂದಿವೆ. ಪ್ರತೀ ತಂಡದಲ್ಲಿ 30 ಸದಸ್ಯರಿದ್ದು ಈಗಾಗಲೇ ಕಾರ್ಯಾಚರಣೆಯಲ್ಲಿ ತೊಡಗಿದೆ.
ಭಾರತೀಯ ಸೇನೆಯೂ ಭಾಗಿ: ಭೂಕುಸಿತದಲ್ಲಿ ಸಿಲುಕಿದವರ ರಕ್ಷಣೆ, ನಾಪತ್ತೆಯಾದವರ ಹುಡುಕಾಟಕ್ಕೆ ಭಾರತೀಯ ಸೇನೆಯೂ ಕೈಜೋಡಿಸಿದ್ದು ಮದ್ರಾಸ್ ಇನ್‌ಫ್ಯಾಂಟ್ರಿ ಬೆಟಾಲಿಯನ್‌ನ ಸೆಕೆಂಡ್ ಇನ್ ಕಮಾಂಡ್‌ನ 43 ಯೋಧರ ತಂಡ ವಯನಾಡ್‌ನಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದೆ. ಇದರಲ್ಲಿ ಓರ್ವ ಮೆಡಿಕಲ್ ಆಫೀಸರ್, ಇಬ್ಬರು ಜೂನಿಯರ್ ಕಮಿಷನ್x ಅಧಿಕಾರಿ, 40 ಯೋಧರಿದ್ದು ತೀವ್ರ ಕಠಿನ ಪ್ರದೇಶದಲ್ಲಿ ನೆರವು ನೀಡಲು ಅಗತ್ಯ ಉಪಕರಣಗಳನ್ನು ಈ ತಂಡ ಹೊಂದಿದೆ. ಇದರ ಜತೆಗೆ ಸೇನಾ ಎಂಜಿನಿಯರಿಂಗ್ ತಂಡ ಕೂಡ ವಯನಾಡಿಗೆ ಬಂದಿದೆ. ಜತೆಗೆ 67 ಮಂದಿ ಡಿಫೆನ್ಸ್ ಸೆಕ್ಯುರಿಟಿ ಕಾಪ್ಸ್ì ಯೋಧರು ಕಣ್ಣೂರಿನಿಂದ ಆ್ಯಂಬುಲೆನ್ಸ್, 3 ಟ್ರಕ್ ಲೋಡ್ ಸಾಮಗ್ರಿಗಳ ಜತೆ ಬಂದಿದ್ದಾರೆ. ಇದಲ್ಲದೆ ಎಳಿಮಾಲಾ ನೌಕಾ ಅಕಾಡೆಮಿಯ ನೌಕಾ ತಂಡ ಕೂಡ ವಯನಾಡಿಗೆ ಆಗಮಿಸಿದೆ. ಡ್ರೋನ್ ಮತ್ತು ಪೊಲೀಸ್ ಶ್ವಾನದಳವನ್ನು ರಕ್ಷಣ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿದೆ.
ಕೇರಳ ಶಸಸ್ತ್ರ ಪೊಲೀಸ್ ಪಡೆಯ 4 ಮತ್ತು 5ನೇ ಬೆಟಾಲಿಯನ್, ಮಲಬಾರ್ ಸ್ಪೆಷಲ್ ಪೊಲೀಸರು ಕೂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಸೇನಾ ಶ್ವಾನದಳದಿಂದಲೂ ರಕ್ಷಣ ಕಾರ್ಯಕ್ಕೆ ನೆರವು: ಭಾರತೀಯ ಸೇನೆಯ ವಿಶೇಷ ಶ್ವಾನ ದಳ ಕೂಡ ವಯನಾಡಿಯಲ್ಲಿ ರಕ್ಷಣ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿದೆ. ಉತ್ತರ ಪ್ರದೇಶದ ಮೇರs…ನ ಪ್ರತಿಷ್ಠಿತ ರಿಮೌಂಟ್ ವೆಟರ್ನರಿ ಕಾಪ್ಸ್ì ಸೆಂಟರ್‌ನ ಬೆಲ್ಜಿಯನ್ ಮಲಿನೋಯಿಸ್, ಲ್ಯಾಬ್ರಾಡರ್, ಜರ್ಮನ್ ಶೆಫರ್ಡ್ ಶ್ವಾನಗಳು ಶೀಘ್ರ ವಯನಾಡಿಗೆ ಆಗಮಿಸ ಲಿವೆ. ಈ ಶ್ವಾನಗಳು ಮಾನವರ ಅವಶೇಷಗಳು, ಮಣ್ಣಿನಲ್ಲಿ ಹುದುಗಿದವರ ಉಸಿರಾಟವನ್ನು ಗುರುತಿಸುವ ವಿಶೇಷ ಪರಿಣತಿಯನ್ನು ಹೊಂದಿವೆ. ಈ ಹಿಂದೆ ಕೂಡ ಸೇನಾ ಶ್ವಾನಗಳು ಕೇರಳದ ಕವಲಪ್ಪಾರಾ, ಪುತ್ತುಮಾಲಾದಲ್ಲಿ ಭೂಕುಸಿತದಲ್ಲಿ ಸಿಲುಕಿದ್ದವರ ಶವಗಳನ್ನು ಹುಡುಕಲು ನೆರವಾಗಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.