Wayanad ವಿಶ್ವದ ಅತ್ಯುತ್ತಮ ಪ್ರವಾಸೋದ್ಯಮ ತಾಣವನ್ನಾಗಿಸುತ್ತೇವೆ: ರಾಹುಲ್ ಭರವಸೆ
ನಾನು ವಯನಾಡಿಗೆ ಬಂದ ನಂತರ ನನ್ನ ರಾಜಕೀಯ ಶಬ್ದಕೋಶದಲ್ಲಿ 'ಪ್ರೀತಿ' ಎಂಬ ಪದ ಸೇರಿಕೊಂಡಿತು...
Team Udayavani, Nov 11, 2024, 7:08 PM IST
ವಯನಾಡ್: ವಯನಾಡನ್ನು ವಿಶ್ವದ ಅತ್ಯುತ್ತಮ ಪ್ರವಾಸೋದ್ಯಮ ತಾಣವಾಗಿ ಉನ್ನತೀಕರಿಸುವುದಾಗಿ ಕಾಂಗ್ರೆಸ್ ನಾಯಕ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದರು.
ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರದ ಕೊನೆಯ ದಿನ ಸೋಮವಾರ(ನ11) ಕಾಂಗ್ರೆಸ್ ಅಭ್ಯರ್ಥಿ, ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಭರ್ಜರಿ ಪ್ರಚಾರ ನಡೆಸಿದರು. ಸುಲ್ತಾನ್ ಬತ್ತೇರಿಯ ಅಸಂಪ್ಷನ್ ಜಂಕ್ಷನ್‌ನಿಂದ ಚುಂಗಮ್ ಜಂಕ್ಷನ್‌ವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಅಪಾರ ಜನಸ್ತೋಮ ನೆರೆದಿತ್ತು.
ಸುಲ್ತಾನ್ ಬತ್ತೇರಿಯಲ್ಲಿ ಪ್ರಿಯಾಂಕಾ ಅವರೊಂದಿಗೆ ರೋಡ್‌ಶೋ ನಡೆಸಿದ ನಂತರ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ “ಸವಾಲಿಯಾಗಿ, ವಯನಾಡ್ ಅನ್ನು ವಿಶ್ವದ ಅತ್ಯುತ್ತಮ ಪ್ರವಾಸೋದ್ಯಮ ತಾಣವನ್ನಾಗಿ ಮಾಡಲು ನಾನು ಪ್ರಿಯಾಂಕಾಗೆ ಸಹಾಯ ಮಾಡುತ್ತೇನೆ” ಎಂದರು.
ನಾನು 2004ರಲ್ಲಿ ರಾಜಕೀಯ ಆರಂಭಿಸಿ 2019ರಲ್ಲಿ ವಯನಾಡ್ ಸಂಸದನಾಗಿದ್ದೆ.ರಾಜಕೀಯದಲ್ಲಿ ಪ್ರೀತಿ ಎಂಬ ಪದಕ್ಕೆ ಮಹತ್ತರ ಸ್ಥಾನವಿದೆ ಎಂಬುದನ್ನು ವಯನಾಡಿನ ಜನತೆ ಕಲಿಸಿದ್ದಾರೆ. ನಾನು ಆ ಪದವನ್ನು ಬಳಸಲಿಲ್ಲ, ಆದರೆ ವಯನಾಡಿನ ಜನರು ರಾಜಕೀಯದಲ್ಲಿ ಪದಕ್ಕೆ ಉತ್ತಮ ಸ್ಥಾನವಿದೆ ಎಂದು ನನಗೆ ಕಲಿಸಿದರು. ದ್ವೇಷ ಮತ್ತು ಕೋಪವನ್ನು ಎದುರಿಸಲು ಪ್ರೀತಿ ಮತ್ತು ವಾತ್ಸಲ್ಯ ಮಾತ್ರ ಅಸ್ತ್ರವಾಗಿದೆ ಎಂದು ರಾಹುಲ್ ಹೇಳಿದರು.
‘ವಯನಾಡಿನಲ್ಲಿ ನನ್ನ ಐದು ವರ್ಷಗಳು ನನ್ನ ರಾಜಕೀಯ ಮತ್ತು ನನ್ನ ಕೆಲಸದ ಬಗ್ಗೆ ನಾನು ಯೋಚಿಸುವ ವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸಿತು. ಇಲ್ಲಿಗೆ ಬಂದಾಗ ನಾನು ಜನರೊಂದಿಗೆ ಸಂಪೂರ್ಣವಾಗಿ ವಿಭಿನ್ನ ರೀತಿಯ ಸಂಬಂಧವನ್ನು ಹೊಂದಿದ್ದೇನೆ ಎಂದು ನಾನು ಕಂಡುಕೊಂಡೆ. ಸಾಮಾನ್ಯವಾಗಿ ರಾಜಕಾರಣಿಗಳಾದ ನಮಗೆ ರಾಜಕೀಯ ಸಂಬಂಧವಿದೆ. ಇದು ವಹಿವಾಟಿನ ಸಂಬಂಧದಂತೆ. ನೀವು ನಮಗಾಗಿ ಇದನ್ನು ಮಾಡಬೇಕು, ನಾವು ನಿಮಗಾಗಿ ಇದನ್ನು ಮಾಡುತ್ತೇವೆ. ಆದರೆ ವಯನಾಡಿನಲ್ಲಿ ಆ ರೀತಿಯ ಸಂಬಂಧವಿಲ್ಲ. ಮತ್ತು ನಾನು ಒಂದು ವಿಷಯವನ್ನು ಅರಿತುಕೊಂಡೆ ನಾನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆಗೆ ಹೋದಾಗ, ಆ ಯಾತ್ರೆಯ ಮುಖ್ಯ ಉದ್ದೇಶವೆಂದರೆ ಪ್ರೀತಿ ಮತ್ತು ವಾತ್ಸಲ್ಯವನ್ನು ರಾಜಕೀಯ ಸಾಧನವಾಗಿ ಬಳಸುವುದಾಗಿತ್ತು. ನಿಮ್ಮ ಮುಂದೆ ನಿಂತಿರುವ ವ್ಯಕ್ತಿಯು ನಿಮ್ಮನ್ನು ನಿಂದಿಸಿದರೂ, ದ್ವೇಷಿಸಿದರೂ ಮತ್ತು ನಿಮ್ಮನ್ನು ನೋಯಿಸಲು ಬಯಸಿದರೂ ಸಹ, ನೀವು ಅದೇ ರೀತಿ ಪ್ರತಿಕ್ರಿಯಿಸುವುದಿಲ್ಲ. ವಯನಾಡಿನ ಜನರಿಂದ ನಾನು ಕಲಿತದ್ದು ಅದನ್ನೇ…” ಎಂದು ರಾಹುಲ್ ಹೇಳಿದರು.
ನವೆಂಬರ್ 13 ರಂದು ವಯನಾಡ್ ಉಪಚುನಾವಣೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.