ಜಮ್ಮು ಕಾಶ್ಮೀರ ‘ರಾಜ್ಯವಾಗಬೇಕು’ : ರಾಹುಲ್ ಗಾಂಧಿ
ಸಹೋದರತ್ವ ಜಮ್ಮು ಕಾಶ್ಮೀರದ ಜನರ ಜೀವನ ವಿಧಾನ : ಗಾಂಧಿ
Team Udayavani, Aug 10, 2021, 3:49 PM IST
ನವ ದೆಹಲಿ : ಜಮ್ಮು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಪುನಃಸ್ಥಾಪಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕೇಂದ್ರಾಡಳಿತ ಪ್ರದೇಶದ ಜಮ್ಮು ಕಾಶ್ಮೀರದಲ್ಲಿ ಎರಡು ದಿನಗಳ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಜಮ್ಮು ಕಾಶ್ಮೀರದಲ್ಲಿ ಸಂಪೂರ್ಣ ರಾಜ್ಯತ್ವವನ್ನು ತರಬೇಕು, ಪ್ರಜಾಪ್ರಭುತ್ವದ ಎಲ್ಲಾ ವ್ಯವಸ್ಥೆಗಳು ಇಲ್ಲಿ ಆಗಬೇಕು. ಚುನಾವಣೆ ಪ್ರಕ್ರಿಯೆಗಳು ಇಲ್ಲಿ ಕೂಡ ನಡೆಯಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ : ಕಂಬಳ ಕುರಿತಾದ ಬಾಬು ರಾಜೇಂದ್ರ ಸಿಂಗ್ ನಿರ್ದೇಶನದ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ
ನನ್ನ ಕುಟುಂಬವು ಅಲಹಾಬಾದ್ ನಲ್ಲಿ ವಾಸಿಸುತ್ತಿತ್ತು. ನಾನು ಇಲ್ಲಿ ಹೆಚ್ಚು ಇರಲಿಲ್ಲ ಆದರೆ ನಾನು ನಿನ್ನನ್ನು ಸ್ವಲ್ಪ ಅರ್ಥಮಾಡಿಕೊಂಡಿದ್ದೇನೆ. ನನ್ನೊಳಗೆ ಸ್ವಲ್ಪ ಕಾಶ್ಮೀರಿಯತ್ ಇದೆ ಎಂದು ಹೇಳಿದ್ದಾರೆ.
ಸಹೋದರತ್ವ ಜಮ್ಮು ಕಾಶ್ಮೀರದ ಜನರ ಜೀವನ ವಿಧಾನವಾಗಿದೆ ಮತ್ತು ದ್ವೇಷವನ್ನು ಹರಡುವ ಯಾರನ್ನೂ ಇಲ್ಲಿನ ಜನರು ಎಂದಿಗೂ ಸ್ವೀಕರಿಸುವುದಿಲ್ಲ ಎಂದು ಅವರು ಹೇಳಿದರು.
“ಗುಲಾಂ ನಬಿ ಆಜಾದ್ ಜೀ ಕಾಶ್ಮೀರದ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲು ನನ್ನನ್ನು ಕೇಳಿದರು. ನಾನು ಮಾತಾಡಲು ಬಯಸುತತ್ತೇನೆ ಆದರೇ, ನಮಗೆ ಅಲ್ಲಿ ಮಾತನಾಡಲು ಅವಕಾಶವಿಲ್ಲ. ಪೆಗಾಸಸ್, ಭ್ರಷ್ಟಾಚಾರ ಮತ್ತು ನಿರುದ್ಯೋಗದಂತಹ ಅನೇಕ ಸಮಸ್ಯೆಗಳ ಬಗ್ಗೆ ಮಾತಾಡಲು ಬಯಸುತ್ತೇನೆ ಆದರೆ ನಮಗೆ ಮಾತನಾಡಲು ಅವಕಾಶ ನೀಡಿಲ್ಲ ಎಂದು ಹೇಳಿದ್ದಾರೆ.
ಜಮ್ಮು ಕಾಸ್ಮೀರ ಮಾತ್ರವಲ್ಲ, ದೇಶದ ನ್ಯಾಯಾಂಗ, ರಾಜ್ಯಸಭೆ ಮತ್ತು ಲೋಕಸಭೆಯ ಮೇಲೆ ದಾಳಿ ಮಾಡಲಾಗುತ್ತಿದೆ. ಮಾಧ್ಯಮಗಳಿಗೆ ಬೆದರಿಕೆ ಹಾಕಲಾಗುತ್ತಿದೆ ಮತ್ತು ಸತ್ಯವನ್ನು ಹೇಳಲು ಹೆದರುತ್ತಾರೆ. ಆ ರೀತಿಯಲ್ಲಿ ಮಾಧ್ಯಮದವರನ್ನು ಹೆದರಿಸಿ ಇಟ್ಟುಕೊಂಡಿದ್ದಾರೆಂದು ರಾಹುಲ್ ಕಿಡಿ ಕಾರಿದ್ದಾರೆ.
ಇದನ್ನೂ ಓದಿ : ಫೈಟರ್ ಸಾವು : ಒಂದು ದಿನ ತಡವಾಗಿ ಟ್ವೀಟ್ ಮಾಡಿದ ಚಿತ್ರದ ನಾಯಕಿ ರಚಿತಾ ರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
ದಾವೂದ್, ನಟ ಸಲ್ಮಾನ್ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್
Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.