ನಾವು ಎಲ್ಲದಕ್ಕೂ ಸಿದ್ದ; ಪಾಕ್‌ಗೆ ಭಾರತದ ಎಚ್ಚರಿಕೆ


Team Udayavani, Mar 1, 2019, 12:30 AM IST

pti2282019000131b.jpg

ನವದೆಹಲಿ: ಪಾಕಿಸ್ತಾನ ವಶದಲ್ಲಿದ್ದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಬಿಡುಗಡೆಯ ಘೋಷಣೆಯಾಗಿದ್ದರೂ, ಭಾರತ- ಪಾಕಿಸ್ತಾನದ ನಡುವಿನ ಯುದ್ಧದ ಕಾರ್ಮೋಡ ವಾತಾವರಣ ಇನ್ನೂ ಕಡಿಮೆಯಾಗಿಲ್ಲ. 

ಪಾಕಿಸ್ತಾನ ಯಾವುದೇ ರೀತಿಯ ದುಸ್ಸಾಹಸಕ್ಕೆ ಕೈ ಹಾಕಿದರೂ, ನಾವು ಪ್ರಬಲವಾಗಿ ಎದುರಿಸುತ್ತೇವೆ, ನಾವು ಎಲ್ಲದಕ್ಕೂ ಸಿದ್ಧವಾಗಿದ್ದೇವೆಎಂದು ಭಾರತೀಯ ಸೇನೆಯ ಮೂರು ವಿಭಾಗದ ಅಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿ, ದೇಶವಾಸಿಗಳಿಗೆ ಅಭಯ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಮೂರು ವಿಭಾಗದ ಹಿರಿಯ ಅಧಿಕಾರಿಗಳು, ಪಾಕಿಸ್ತಾನದ ಸುಳ್ಳಿನ ಸರಮಾಲೆಯನ್ನೇ ಬಯಲು ಮಾಡಿದ್ದಾರೆ. ವರ್ಧಮಾನ್‌ ಅವರನ್ನು ಪಾಕಿಸ್ತಾನ ಬಿಡುಗಡೆ ಮಾಡಿರುವುದನ್ನು ಸ್ವಾಗತಿಸಿರುವ ವಾಯುಸೇನೆಯ ವೈಸ್‌ ಏರ್‌ ಮಾರ್ಷಲ್‌ ಆರ್‌ಜಿಕೆ ಕಪೂರ್‌, ಇದು ಪಾಕಿಸ್ತಾನದ ಸದ್ಭಾವನೆಯ ನಡೆಯಲ್ಲ, ಜಿನೇವಾ ಒಪ್ಪಂದದ ಪಾಲನೆಯಷ್ಟೇ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. 

ಅತ್ತ ದೆಹಲಿಯಲ್ಲೇ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿಲ್ಲ ಪ್ರಧಾನಿ ನರೇಂದ್ರ ಮೋದಿ, ಈಗ ಆಗಿರುವುದು ಕೇವಲ ಪೈಲಟ್‌ ಪ್ರಾಜೆಕ್ಟ್. ನಿಜವಾದದ್ದು ಮುಂದೆ ಬರಲಿದೆ. ಅದಕ್ಕೂ ಮುನ್ನ ಒಂದು ಅಭ್ಯಾಸ ನಡೆಸಲಾಗಿದೆಯಷ್ಟೇ ಎಂದು ಹೇಳುವ ಮೂಲಕ, ಎಂಥದ್ದೇ ಸನ್ನಿವೇಶ ಬಂದರೂ ಸರಿಯೇ ಎದುರಿಸುತ್ತೇವೆ ಎಂಬ ಸಂದೇಶ ರವಾನಿಸಿದ್ದಾರೆ. ಅಲ್ಲದೆ ಇನ್ನೂ ಯುದ್ಧದ ಕಾರ್ಮೋಡ ಹರಿದಿಲ್ಲ ಎಂಬುದೂ ಈ ಹೇಳಿಕೆಯ ಮೂಲಕ ಹೊರಬಿದ್ದಿದೆ.

ಜಂಟಿ ಪತ್ರಿಕಾಗೋಷ್ಠಿ
ವಾಯು ಸೇನೆ ಕಡೆಯಿಂದ ವೈಸ್‌ ಏರ್‌ ಮಾರ್ಷಲ್‌ ಆರ್‌ಜಿಕೆ ಕಪೂರ್‌, ಭೂಸೇನೆ ಕಡೆಯಿಂದ ಆರ್ಮಿ ಮೇಜರ್‌ ಜನರಲ್‌ ಎಸ್‌.ಎಸ್‌.ಮಹಲ್‌ ಮತ್ತು ನೌಕಾಪಡೆ ಕಡೆಯಿಂದ ನೆವ್ವಿ ರಿಯರ್‌ ಅಡ್ಮಿರಲ್‌ ದಲ್ಬಿàರ್‌ ಸಿಂಗ್‌ ಗುಜ್ರಾಲ್‌ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.  

ಆರಂಭದಲ್ಲೇ ಪಾಕಿಸ್ತಾನದ ಸುಳ್ಳಿನ ಕಂತೆಯನ್ನೇ ಬಿಚ್ಚಿಟ್ಟರು. ಬುಧವಾರ ಬೆಳಗ್ಗೆ ಪಾಕಿಸ್ತಾನದ ಯುದ್ಧ ವಿಮಾನಗಳು ಭಾರತದ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಲು ಬಂದಿದ್ದವು. ಇದಕ್ಕೆ ಎಫ್ 16 ಅನ್ನು ಬಳಕೆ ಮಾಡಲಾಗಿತ್ತು. ಈ ವಿಮಾನವನ್ನು ನಮ್ಮ ಮಿಗ್‌ 21 ಬಿಸೋನ್‌ ಕಡೆಯಿಂದಲೇ ಹೊಡೆದು ಹಾಕಿದ್ದೇವೆ ಎಂದು ಐಎಎಫ್ ಏರ್‌ವೈಸ್‌ ಮಾರ್ಷಲ್‌ ಆರ್‌.ಜಿ.ಕೆ.ಕಪೂರ್‌ ಹೇಳಿದ್ದಾರೆ. ಅದಕ್ಕೆ ಸಾಕ್ಷ್ಯವಿದೆ ಎಂದು ಹೇಳಿದ ಅವರು, ಪತನವಾದ ವಿಮಾನದ ಭಾಗಗಳನ್ನೂ ಪ್ರದರ್ಶಿಸಿದ್ದಾರೆ. ಜತೆಗೆ ನಾವು ಎಫ್ 16ನ ಎಲೆಕ್ಟ್ರಾನಿಕ್‌ ಸಿಗ್ನೇಚರ್‌ಗಳನ್ನು ಸಂಗ್ರಹಿಸಿದ್ದೇವೆ. ಅರ್ಮಮ್‌ನ ಬಿಡಿಭಾಗಗಳೂ ಕಾಶ್ಮೀರದ ರಜೌರಿಯಲ್ಲಿ ಪತ್ತೆಯಾಗಿದ್ದು, ಇದನ್ನು ಕೇವಲ ಎಫ್ 16 ನಲ್ಲಿ ಮಾತ್ರ ಬಳಕೆ ಮಾಡಲಾಗುತ್ತದೆ ಎಂದಿದ್ದಾರೆ. 

ಬಾಲಕೋಟ್‌ ಮತ್ತು ಇತರ ಎರಡು ಉಗ್ರ ಶಿಬಿರಗಳ ಮೇಲೆ ನಡೆಸಲಾಗಿರುವ ದಾಳಿಯಲ್ಲಿ ಎಷ್ಟು ಮಂದಿ ಉಗ್ರರು ಅಸುನೀಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಕಪೂರ್‌ ಈ ಸಂದರ್ಭದಲ್ಲಿ ಅದರ ಬಗ್ಗೆ ನಿಖರವಾಗಿ ಹೇಳಲಾಗದು ಎಂದರು. 

ನಿರಂತರ ಟಾರ್ಗೆಟ್‌: ಪಾಕಿಸ್ತಾನ ಉಗ್ರರಿಗೆ ನೀಡುವ ಬೆಂಬಲ ನಿಲ್ಲುವ ವರೆಗೆ ಉಗ್ರರ ತರಬೇತಿ ಶಿಬಿರಗಳನ್ನು ಗುರಿಯಾಗಿರಿಸಿಕೊಂಡು ನಡೆಸುವ ದಾಳಿ ನಿಲ್ಲುವುದಿಲ್ಲ ಎಂದು ಭೂಸೇನೆಯ ಹಿರಿಯ ಅಧಿಕಾರಿ  ಮೇ.ಜ.ಸುರೇಂದ್ರ ಸಿಂಗ್‌ ಮಹಲ್‌ ಎಚ್ಚರಿಕೆ ನೀಡಿದ್ದಾರೆ. ಗಡಿ ನಿಯಂತ್ರಣ ರೇಖೆಯಲ್ಲೂ ಕಟ್ಟೆಚ್ಚರ ಮುಂದುವರಿಯಲಿದೆ ಎಂದಿದ್ದಾರೆ. ಬುಧವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನೆಯ ಎರಡು ಪ್ರಮುಖ ಕೇಂದ್ರಗಳನ್ನು ಉಡಾಯಿಸಲು ಮುಂದಾಗಿತ್ತು ಎಂದಿದ್ದಾರೆ. ನೌಕಾಪಡೆಯ ಉಪ ಮುಖ್ಯಸ್ಥ ರಿಯರ್‌ ಎಡ್ಮಿರಲ್‌ ಡಿ.ಎಸ್‌.ಗುಜ್ರಾಲ್‌ ಮಾತನಾಡಿ,  ನೌಕಾಪಡೆ ಕೂಡ ಎಲ್ಲಾ ರೀತಿಯ ಸವಾಲು ಎದುರಿಸಲು ಸಿದ್ಧವಾಗಿದೆ ಎಂದರು.

ಈಗಷ್ಟೇ ಒಂದು ‘ಪೈಲಟ್‌’ ಯೋಜನೆ ಪೂರ್ಣಗೊಂಡಿತು. ಪ್ರಾಯೋಗಿಕ ಯೋಜನೆ ಮುಗಿದ ಬಳಿಕ ನೈಜ ಯೋಜನೆ ಶುರುವಾಗುತ್ತದೆ. ಅಂತೆಯೇ, ನೈಜ ಯೋಜನೆ ಇನ್ನು ಆರಂಭವಾಗುತ್ತದೆ. ಇಷ್ಟು ದಿನ ನಡೆದಿದ್ದು  ಕೇವಲ ಪ್ರಾಕ್ಟೀಸ್‌ ಅಷ್ಟೆ.
– ನರೇಂದ್ರ ಮೋದಿ, ಪ್ರಧಾನಿ

ಟಾಪ್ ನ್ಯೂಸ್

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.