3 ಚುನಾವಣೆಯಲ್ಲಿ ಕಾಂಗ್ರೆಸ್ ಗಳಿಸಿದಕ್ಕಿಂತ ಹೆಚ್ಚು ನಾವು 2024ರಲ್ಲಿ ಗೆದ್ದಿದ್ದೇವೆ: ಮೋದಿ
Team Udayavani, Jun 7, 2024, 3:55 PM IST
ಹೊಸದಿಲ್ಲಿ: ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಹೊಸದಾಗಿ ಚುನಾಯಿತರಾದ ಸಂಸದರು ಶುಕ್ರವಾರ ನರೇಂದ್ರ ಮೋದಿಯವರನ್ನು ಸಂಸದೀಯ ಪಕ್ಷದ ನಾಯಕರನ್ನಾಗಿ ಮಾಡುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದರು. ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅವರನ್ನು ಪ್ರಧಾನಿಯನ್ನಾಗಿ ಅನುಮೋದಿಸಿದರು.
ಮೈತ್ರಿಕೂಟದ ಪಾಲುದಾರರು ಮತ್ತು ಹೊಸದಾಗಿ ಚುನಾಯಿತ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, ಎನ್‌ಡಿಎ ಅಧಿಕಾರಕ್ಕಾಗಿ ಒಗ್ಗೂಡಿರುವ ಪಕ್ಷಗಳ ಗುಂಪಲ್ಲ, ‘ರಾಷ್ಟ್ರ ಮೊದಲು’ ಎಂಬ ತತ್ವಕ್ಕೆ ಬದ್ಧವಾಗಿರುವ ಸಾವಯವ ಮೈತ್ರಿ ಎಂದು ಹೇಳಿದರು.
“ಇದು ಭಾರತದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಮೈತ್ರಿಯಾಗಿದೆ, ನಮ್ಮ ಎಲ್ಲಾ ನಿರ್ಧಾರಗಳಲ್ಲಿ ಸರ್ವಾನುಮತವನ್ನು ತಲುಪುವುದು ನಮ್ಮ ಗುರಿಯಾಗಿದೆ” ಎಂದು ಅವರು ಹೇಳಿದರು.
ಇದನ್ನೂ ಓದಿ:Kangana ರಣಾವತ್ ಗೆ ಕಪಾಳಮೋಕ್ಷ ಪ್ರಕರಣ; ಮಹಿಳಾ ಭದ್ರತಾ ಸಿಬಂದಿ ಅಮಾನತು
ವಿಪಕ್ಷ ಬಣವಾದ ಇಂಡಿಯಾ ಒಕ್ಕೂಟವನ್ನು ಇದೇ ಸಮಯದಲ್ಲಿ ನರೇಂದ್ರ ಮೋದಿ ಟೀಕಿಸಿದರು. ಇವಿಎಂ ಗಳನ್ನು ಪ್ರಶ್ನೆ ಮಾಡುತ್ತಿದ್ದವರು ಮತ್ತು ಚುನಾವಣೆ ವೇಳೆ ಆಯೋಗವನ್ನು ದೂರುತ್ತಿದ್ದವರು ಜೂನ್ 4ರ ಬಳಿಕ ಮೌನವಾಗಿದ್ದಾರೆ ಎಂದರು.
2024ರ ಲೋಕಸಭೆಯ ಫಲಿತಾಂಶವನ್ನು ಬಿಜೆಪಿ ನೇತೃತ್ವದ ಎನ್ ಡಿಎಗೆ ನಷ್ಟ ಎಂದು ಬಣ್ಣಿಸುವ ಪ್ರತಿಪಕ್ಷಗಳ ಪ್ರಯತ್ನಗಳನ್ನು ಜನರು ವಿಫಲಗೊಳಿಸಿದ್ದಾರೆ, “ನಾವು ಎಂದಿಗೂ ಸೋತಿಲ್ಲ” ಎಂದು ಮೋದಿ ಹೇಳಿದ್ದಾರೆ. ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅವರು, ದಶಕ ಕಳೆದರೂ ಲೋಕಸಭೆ ಚುನಾವಣೆಯಲ್ಲಿ 100ರ ಗಡಿ ಮುಟ್ಟಲು ಪಕ್ಷಕ್ಕೆ ಸಾಧ್ಯವಾಗಲಿಲ್ಲ ಎಂದು ಮೋದಿ ಹೇಳಿದರು.
“ಕಳೆದ ಮೂರು ಲೋಕಸಭಾ ಚುನಾವಣೆಯಲ್ಲಿ ಅವರು ಗಳಿಸಿದ ಒಟ್ಟು ಸ್ಥಾನಗಳು ಈ ಚುನಾವಣೆಯಲ್ಲೇ ನಾವು ಗಳಿಸಿದ ಸಂಖ್ಯೆಗಿಂತ ಕಡಿಮೆಯಾಗಿದೆ” ಎಂದು ಅವರು ಹೇಳಿದರು.
ಮುಂದಿನ ಹತ್ತು ವರ್ಷಗಳ ಕಾಲ ಸರ್ಕಾರದ ಕಾರ್ಯಸೂಚಿಯನ್ನು ನಿಗದಿಪಡಿಸಿದ ಅವರು, “ಉತ್ತಮ ಆಡಳಿತ, ಅಭಿವೃದ್ಧಿ ಮತ್ತು ನಾಗರಿಕರ ಜೀವನದಲ್ಲಿ ಕನಿಷ್ಠ ಹಸ್ತಕ್ಷೇಪದ ಮೇಲೆ ಕೇಂದ್ರೀಕರಿಸಲಾಗುವುದು” ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
MUDA Scam: ಕೇಸ್ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು
Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?
Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ
Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ
ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.